Advertisement

ತೋಟಗಳಲ್ಲೇ ಕೊಳೆತ ಟೊಮೆಟೋ

03:28 PM Apr 12, 2022 | Team Udayavani |

ಚಿಕ್ಕಬಳ್ಳಾಪುರ: ಅವಳಿ ಜಿಲ್ಲೆಯಲ್ಲಿ ಟೊಮೆಟೋ ದರ ಕುಸಿತದಿಂದ ಕಂಗಾಲಾಗಿರುವ ರೈತರು ಉತ್ಪಾದನಾ ವೆಚ್ಚ ದೂರವಿರಲಿ ಕನಿಷ್ಠ ಕೂಲಿ ಹಣ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಅವಳಿ ಜಿಲ್ಲೆಯಲ್ಲಿ ಬಹುತೇಕ ರೈತರು ಟೊಮೆಟೋ ಬೆಳೆಯುತ್ತಿದ್ದಾಳೆ ಆದರೇ ಇತ್ತೀಚಿನ ದಿನಗಳಲ್ಲಿ ಟೊಮೆಟೋ ಬೆಲೆ ಸಿಗದೆ ತೋಟದಲ್ಲಿ ಬೆಳೆದು ನಿಂತಿರುವ ಟೊಮೆಟೋ ಬೆಳೆಯನ್ನು ರೈತರು ಕೀಳುವ ಬದಲಿಗೆ ತೋಟದಲ್ಲಿ ಬಿಟ್ಟಿದ್ದು ಇದರಿಂದ ಬೆಳೆ ಸಂಪೂರ್ಣವಾಗಿ ಕೊಳೆತು ನಾರುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಒಂದು ಜಿಲ್ಲೆಯ ಒಂದು ಬೆಳೆ ಕೇಂದ್ರ ಸರ್ಕಾರದ ಘೋಷಣೆಯಂತೆ ಟೊಮೆಟೋ ಆಯ್ಕೆಯಾದರೂ ಈ ಭಾಗದಲ್ಲಿ ಟೊಮೆಟೋ ಕೇಳುವವರಿಲ್ಲದಂತಾಗಿದೆ ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಸಾಲ ಮಾಡಿ ಬೆಳೆದಿರುವ ಟೊಮೆಟೋ ಕೇಳವರೇ ಇಲ್ಲದಂತಾಗಿದೆ.

ಇದರಿಂದ ರೈತರು ಬೆಳೆದಿರುವ ಬೆಳೆಗಳನ್ನು ಕೀಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಬೆಳೆ ಮಾರಾಟ ಮಾಡಿದರೂ ಸಹ ಕೂಲಿ ಹಣವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ಸೀಸನ್‌ ನಲ್ಲಿ ಟೊಮೆಟೋ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 11 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋ ಬೆಳೆಯುತ್ತಿದ್ದಾರೆ.  ಚಿಂತಾಮಣಿ ತಾಲೂಕಿನಲ್ಲಿ ಐದೂವರೆ ಹೆಕ್ಟೇರ್‌, ಬಾಗೇಪಲ್ಲಿ ತಾಲೂಕಿನಲ್ಲಿ 2 ಸಾವಿರ, ಶಿಡ್ಲಘಟ್ಟ ತಾಲೂಕಿನಲ್ಲಿ 1200 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಮುಂಗಾರಿನಲ್ಲಿ 5 ಸಾವಿರ ಹೆಕ್ಟೇರ್‌, ಹಿಂಗಾರಿನಲ್ಲಿ 3 ಸಾವಿರ ಹೆಕ್ಟೇರ್‌ ಹಾಗೂ ಬೇಸಿಗೆಯಲ್ಲಿ 3 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಬರುವ ನಿರೀಕ್ಷೆಯಿದೆ.

ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ, ಸಾದಲಿ ಹೋಬಳಿ, ಬಾಗೇಪಲ್ಲಿ ತಾಲೂಕಿನ ಮಿಟ್ಟೇಮೇರಿ, ಕಸಬಾ, ಗೂಳೂರು, ಚೇಳೂರು, ಪಾತಪಾಳ್ಯ, ಚಿಂತಾಮಣಿ ತಾಲೂಕಿನ ಚಿಲಕಲಬೇರ್ಪು ಸಹಿತ ಎಲ್ಲಾ ಹೋಬಳಿಗಳಲ್ಲಿ ಟೊಮೆಟೋ ಬೆಳೆಯುತ್ತಾರೆ. ಇಲ್ಲಿನ ಟೊಮೆಟೋ ಪಶ್ಚಿಮ ಬಂಗಾಳ, ಚೆನೈ ಬಂದರ್‌ನಿಂದ ಪಶ್ಚಿಮ ದೇಶಗಳಿಗೆ ರಫ್ತು ಆಗುತ್ತದೆ. ಅದಲ್ಲದೆ ನೆರೆ ಮಹಾರಾಷ್ಟ್ರ, ನಾಗಪುರ್‌, ಮಧ್ಯಪ್ರದೇಶ, ಬಿಹಾರಗಳಿಗೂ ಅವಳಿ ಜಿಲ್ಲೆಯ ಟೊಮೆಟೋ ರಪ್ತಾಗುತ್ತದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋ ಬೆಳೆಯುತ್ತಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ ಅತಿ ಹೆಚ್ಚು ಟೊಮೆಟೋ ಬೆಳೆಯುತ್ತಾರೆ. ಕೆಲವೊಮ್ಮೆ ದರ ಏರುಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಪ್ರಸ್ತುತ ಕೋಲಾರ ಜಿಲ್ಲೆಯ ಟೊಮೆಟೋ ಮಾರ್ಕೆಟ್‌ ಅಲ್ಲಿ ಪ್ರಸ್ತುತ ಪ್ರತಿ ಕೆಜಿ ಟೊಮೊಟೋ 3 ರಿಂದ 8 ರೂಗಳಿಗೆ ಮಾರಾಟವಾಗುತ್ತಿದೆ. – ರಮೇಶ್‌ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ಚಿಕ್ಕಬಳ್ಳಾಪುರ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಟೊಮೆಟೋಗೆ ದರವಿಲ್ಲದೆ ಕನಿಷ್ಠ ಕೂಲಿ ವೆಚ್ಚವೂ ಸಿಗುತ್ತಿಲ್ಲ. ರೈತರು ಟೊಮೆಟೋ ಕಿತ್ತು ಮಾರುಕಟ್ಟೆಗೆ ಸಾಗಿಸಿಲ್ಲ ಹೀಗಾಗಿ ಟೊಮೆಟೋ ತೋಟದಲ್ಲೇ ಕೊಳೆಯುತ್ತಿದೆ. ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ಧಾವಿಸಬೇಕು. – ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next