Advertisement
ಅವಳಿಗೆ ತರಗತಿಯಲ್ಲಿ ಒಂದು ಗಂಟೆ ಕುಳಿತು ಪಾಠ ಕೇಳುವುದೆಂದರೆ ಆಗುವುದಿಲ್ಲ, ಹಾಗಾಗಿ ತರಗತಿಗಳಿಗೆ ಹೋದದ್ದು ಬಹಳ ಕಡಿಮೆ, ಪ್ರಾಧ್ಯಾಪಕರು ಇವಳ ಓದಿನ ವಿಷಯದ ಬಗ್ಗೆ ಏನು ಮಾತನಾಡಿದವರಲ್ಲ. ಯಾಕೆಂದರೆ ಪರೀಕ್ಷೆ ಅಂತ ಬಂದ್ರೆ ಕ್ಲಾಸಿಗೆ ಟಾಪರ್. ಅವಳೊಂದಿಗೆ ಯಾವತ್ತಿಗೂ ಜೊತೆಗಿರುವ ಬುಲೆಟ್ ಬೈಕ್, ಅವಳ ಆ ಬೈಕಿನ ಸದ್ದಿನಿಂದ ಎಲ್ಲರಿಗೂ ತಿಳಿಯುತ್ತಿತ್ತು ವರ್ಷಾ ಕಾಲೇಜಿಗೆ ಬಂದಳು ಅಂತ, ವರ್ಷಾಳಿಗೆ ಕಾದಂಬರಿಯ ಕಡೆ ಹೆಚ್ಚು ಒಲವು, ಸಂಜೆ ಗಟ್ಟೆಗಟ್ಟಲೆ ಗ್ರಂಥಾಲಯದಲ್ಲಿ ಕೂತು ಕಾದಂಬರಿಗಳನ್ನು ಓದುತ್ತಿದ್ದಳು. ನಂತರ ಜಿಮ್, ಬಾಸ್ಕೆಟ್ ಬಾಲ್, ವಾಲಿಬಾಲ್ ಹೀಗೆ ಕ್ರೀಡೆಯಲ್ಲಿ ತನನ್ನು ತಾನು ತೊಡಗಿಸಿಕೊಂಡು ತುಂಬಾ ಬ್ಯುಸಿ ಆಗಿದ್ದ ಇವಳು, ಡಿಗ್ರಿ ಕೊನೆಯ ವರ್ಷದ ಮೊದಲ ದಿನ ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ತಮ್ಮ ವಿಭಾಗದ ಬಗ್ಗೆ ಹೇಳಲು ಅವರ ತರಗತಿಗೆ ಹೋಗ್ತಾಳೆ. ಅಲ್ಲಿ ಇದ್ದ ಜೂನಿಯರ್ಸ್ ಅವಳಿಗೆ ಆಪ್ತರಾಗುತ್ತಾರೆ ,ಅಕ್ಕಾ ನೀವು ಕ್ಯೂಟ್ ಆಗಿದ್ದೀರಿ ,ನಿಮ್ ಡ್ರೆಸಿಂಗ್ ಸೂಪರ್ ಹಾಗೆ ಹೀಗೆ ಅಂತ ಮಾತನಾಡಿಸುತ್ತಾರೆ .
Related Articles
Advertisement
ಹೀಗೆ ಒಂದು ದಿನ ಇಬ್ಬರು ಜೊತೆಗೆ ಕಾಲೇಜಿನ ಮರದ ಅಡಿ ಕೂತು ಮಾತನಾಡುತ್ತಿರುತ್ತಾರೆ. ವರ್ಷಾ ನೀನಿರುವ ಜೀವನಶೈಲಿಯನ್ನು ಬದಲಿಸಿಕೋ ಎಂದು ಸಲಹೆ ನೀಡುತ್ತಾನೆ ,ಎಲ್ಲರೂ ನಿನ್ನನ್ನು ಕಾಲೇಜಿನಲ್ಲಿ ಪ್ರತ್ಯೇಕವಾಗಿ ನೋಡುತ್ತಾರೆ. ಹೀಗೆ ಎಲ್ಲರಿಗಿಂತ ಭಿನ್ನವಾಗಿರಬೇಡ, ನನಗೂ ನಿನ್ನ ಜೊತೆ ಇರಲು ಕಷ್ಟವಾಗುತ್ತದೆ, ಸುಮ್ಮನೆ ಎಲ್ಲರೂ ನಿನ್ನ ವಿಷಯದ ಕುರಿತು ನನ್ನನ್ನು ಆಡಿಕೊಳ್ಳುತ್ತಿದ್ದಾರೆ. ನೀನು ಹೀಗಿದ್ರೆ ನನಗೂ ಕಷ್ಟ ಅಂತ ಹೇಳ್ತಾನೆ. ಅವನು ಹಾಗೆ ಅಂದದ್ದೇ ತಡ ,ಅವಳ ಕಣ್ಣಾಲಿಗಳು ತುಂಬಿದವು. ತಕ್ಷಣ ಎದ್ದು ಬಾಯ್ ಅಂತ ಹೇಳಿ ಅಲ್ಲಿಂದ ಹೊರಟು ತನ್ನ ಬೈಕ್ ನಲ್ಲಿ ಆಗುಂಬೆಯತ್ತ ಹೋಗುತ್ತಾಳೆ.
ಆ ಸಂಜೆ ಅವಳು ಬೇಸರದಿಂದ ಕುಗ್ಗಿದ್ದಳು ,ಆದ್ರೆ ಮಾರನೇಯ ದಿನ ಅವನನ್ನು ಹುಡುಕಿಕೊಂಡು ತರಗತಿ ಹತ್ತಿರ ಬಂದು ಒಂದಿಷ್ಟು ಮಾತು ಹೇಳಿ ಅಲ್ಲಿಂದ ಹೊರಟವಳು, ಮತ್ತೆ ಅವನತ್ತ ಮುಖ ಮಾಡಿ ನೋಡಲಿಲ್ಲ. “ಬೇರೆಯವರಿಗೋಸ್ಕರ ಬದುಕಿದವಳು ನಾನಲ್ಲ, ನನ್ನ ತನವನ್ನು ಯಾವತ್ತೂ ಯಾರಿಗೂ ಬಿಟ್ಟುಕೊಡಲಿಲ್ಲ. ಪ್ರತಿ ದಿನ ನಾನು ನನಗಾಗಿ ಬದುಕುತ್ತೇನೆ, ನನ್ನ ಜೀವನದ ಶೈಲಿಯನ್ನು ನಿನಗೋಸ್ಕರ ಬದಲಾಯಿಸುವಷ್ಟು ಮೂರ್ಖಳು ನಾನಲ್ಲ” ಗುಡ್ ಬಾಯ್ ಎನ್ನುತ್ತಾಳೆ.
ಅದೇ ಕೊನೆ ಮತ್ತೆ ಯಾವತ್ತೂ ಪ್ರೀತಿಯ ವಿಷಯದಲ್ಲಿ ಯಾರು ಏನೇ ಅಂದರು ತಲೆಕೆಡಿಸಿಕೊಳ್ಳಲಿಲ್ಲ. ಪ್ರೀತಿಯಿಂದ ದೂರ ಉಳಿದು, ತನಗಿಷ್ಟವಾದ ಕ್ರೀಡೆಯತ್ತ ಹೆಚ್ಚು ಗಮನ ಕೊಟ್ಟಳು.
-ಚೈತ್ರ ಉಜಿರೆ