Advertisement

ಕಿವೀಸ್‌ ವಿಶ್ವಕಪ್‌ ತಂಡಕ್ಕೆ ಬ್ಲಿಂಡೆಲ್‌

09:31 PM Apr 03, 2019 | Team Udayavani |

ನ್ಯೂಜಿಲ್ಯಾಂಡ್‌: ಕಳೆದ ಬಾರಿಯ ರನ್ನರ್‌ ಅಪ್‌ ನ್ಯೂಜಿಲ್ಯಾಂಡಿನ ಏಕದಿನ ವಿಶ್ವಕಪ್‌ ತಂಡ ಬುಧವಾರ ಪ್ರಕಟಗೊಂಡಿದೆ. ವೆಲ್ಲಿಂಗ್ಟನ್‌ನ ಟಾಮ್‌ ಬ್ಲಿಂಡೆಲ್‌ ಅವರನ್ನು ದ್ವಿತೀಯ ವಿಕೆಟ್‌ ಕೀಪರ್‌ ಆಗಿ ಆಯ್ಕೆ ಮಾಡಿರುವುದು ಈ ತಂಡದ ಅಚ್ಚರಿ.

Advertisement

ಕೀಪರ್‌ ಟಾಮ್‌ ಲ್ಯಾಥಂಗೆ ಸಹಾಯಕರಾಗಿ ಟಾಮ್‌ ಬ್ಲಿಂಡೆಲ್‌ ಮತ್ತು ಟಿಮ್‌ ಸೀಫ‌ರ್ಟ್‌ ರೇಸ್‌ನಲ್ಲಿದ್ದರು. 2 ಟೆಸ್ಟ್‌ ಆಡಿರುವ ಬ್ಲಿಂಡೆಲ್‌ ಇನ್ನೂ ಏಕದಿನ ಪಂದ್ಯವನ್ನಾಡಿಲ್ಲ. ಈ ವರೆಗೆ ಒಮ್ಮೆಯಷ್ಟೇ ವಿಶ್ವಕಪ್‌ ಫೈನಲ್‌ ಪ್ರವೇಶಿಸಿರುವ ನ್ಯೂಜಿಲ್ಯಾಂಡ್‌ (2015), ಮೆಲ್ಬರ್ನ್ ಮೇಲಾಟದಲ್ಲಿ ಆಸ್ಟ್ರೇಲಿಯದ ಎದುರು ಸೋತಿತ್ತು.

ನ್ಯೂಜಿಲ್ಯಾಂಡ್‌ ತಂಡ:
ಕೇನ್‌ ವಿಲಿಯಮ್ಸನ್‌ (ನಾಯಕ), ಗಪ್ಟಿಲ್‌, ಮುನ್ರೊ, ರಾಸ್‌ ಟಯ್ಲರ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಟಾಮ್‌ ಲ್ಯಾಥಂ, ಹೆನ್ರಿ ನಿಕೋಲ್ಸ್‌, ಮ್ಯಾಟ್‌ ಹೆನ್ರಿ, ಜಿಮ್ಮಿ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಲಾಕಿ ಫ‌ರ್ಗ್ಯುಸನ್‌, ಟಿಮ್‌ ಸೌಥಿ, ಟ್ರೆಂಟ್‌ ಬೌಲ್ಟ್, ಸೋಧಿ, ಟಾಮ್‌ ಬ್ಲಿಂಡೆಲ್‌.

Advertisement

Udayavani is now on Telegram. Click here to join our channel and stay updated with the latest news.

Next