Advertisement

‘ಟಾಮ್‌ ಅಂಡ್‌ ಜೆರ್ರಿ’ಮೇಲೆ ಹೊಸಬರ ಕನಸು: ನ.12 ರಂದು ಬಿಡುಗಡೆ

03:30 PM Nov 01, 2021 | Team Udayavani |

ತನ್ನ ಟೈಟಲ್‌ ಮತ್ತು ಸಬ್ಜೆಕ್ಟ್ ಮೂಲಕ ಸಿನಿಮಂದಿಯ ಗಮನ ಸೆಳೆದಿರುವ “ಟಾಮ್‌ ಅಂಡ್‌ ಜೆರ್ರಿ’ ಚಿತ್ರ ಇದೇ ನವೆಂಬರ್‌ 12ಕ್ಕೆ ತೆರೆಗೆ ಬರುತ್ತಿದೆ.

Advertisement

ಈಗಾಗಲೇ ಚಿತ್ರದ ಟೈಟಲ್‌ ಪೋಸ್ಟರ್‌, ಹಾಡುಗಳನ್ನು ಬಿಡುಗಡೆ ಮಾಡಿ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿರುವಚಿತ್ರತಂಡ ಬಿಝಿಯಾಗಿದೆ. ಕಿತ್ತಾಟ, ಪ್ರೀತಿ ಇದೆಲ್ಲವೂ “ಟಾಮ್‌ ಅಂಡ್‌ ಜೆರ್ರಿಯಲ್ಲಿದೆಯಂತೆ. ಅದರ ಮೇಲೆಯೇ ಕಥೆ ಹೆಣೆಯಲಾಗಿದೆ.

ಯುವ ಪೀಳಿಗೆಯನ್ನ ಸೆಳೆಯುವ ಇಬ್ಬರು ಸ್ನೇಹಿತರ ಕಥೆ. ಮುನಿಸು, ಕೋಪ, ಪ್ರೀತಿ, ಕಾಳಜಿ ಎಲ್ಲವೂ ತುಂಬಿರುವ ಕಥೆಯನ್ನ ಈಗಿನ ಪೀಳಿಗೆಗೆ ಇಷ್ಟವಾಗುವಂತೆ ರೆಡಿ ಮಾಡಿದ್ದೇವೆ ಎನ್ನುತ್ತದೆ ಚಿತ್ರತಂಡ.

ಸದ್ಯ ಪ್ರಚಾರದಲ್ಲಿರುವ ಚಿತ್ರತಂಡ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿತ್ತು. ಈ ವೇಳೆ ಚಿತ್ರದ ಬಗ್ಗೆ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿತು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಾಘವ ವಿನಯ್‌ ಶಿವಗಂಗೆ, “ಇದು ಇಂದಿನ ಜನರೇಶನ್‌ಗೆ ಇಷ್ಟವಾಗುವಂಥ ಸಿನಿಮಾ. ಇಲ್ಲಿ ಲವ್‌, ಎಮೋಶನ್ಸ್‌, ಬದುಕಿನ ರೀತಿ, ಸಂಬಂಧ, ಕನಸು ಹೀಗೆ ಹತ್ತಾರು ಸಂಗತಿಗಳನ್ನು ಹೇಳಿದ್ದೇವೆ. ಸಿನಿಮಾದಲ್ಲೊಂದು ಆಧ್ಯಾತ್ಮವಿದೆ. ಅದನ್ನು ಸಿನಿಮ್ಯಾಟಿಕ್‌ ಆಗಿಯೇ ಹೇಳಿದ್ದೇವೆ. ಸಿನಿಮಾದ ಟೈಟಲ್‌ “ಟಾಮ್‌ ಅಂಡ್‌ ಜರ್ರಿ’ ಅಂತಿದ್ದರೂ, ಇಲ್ಲೊಂದು ಗಂಭೀರ ವಿಷಯವಿದೆ. ಅದನ್ನ ಸ್ಕ್ರೀನ್‌ ಮೇಲೇ ನೋಡಬೇಕು’ ಎಂದರು.

Advertisement

ಇದನ್ನೂ ಓದಿ:ದಾಖಲೆ ಮೊತ್ತಕ್ಕೆ ಮಾರಾಟವಾದ ‘ಬನಾರಸ್’ ಚಿತ್ರದ ಆಡಿಯೋ ಹಕ್ಕು

ಈ ಹಿಂದೆ “ಗಂಟು ಮೂಟೆ’ ಸಿನಿಮಾದ ನಟನೆಯಿಂದ ನೋಡುಗರ ಗಮನ ಸೆಳೆದಿದ್ದ ನಿಶ್ಚಿತ್‌ ಕೊರೋಡಿ  ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಕಿರುತೆರೆಯ “ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್‌ ನಾಯಕಿಯಾಗಿದ್ದಾರೆ. ಸೂರ್ಯ ಶೇಖರ್‌ ವಿಲನ್‌ ಆಗಿ ಅಬ್ಬರಿಸಿದ್ದಾರೆ. ಉಳಿದಂತೆ ತಾರ ಅನುರಾಧ, ಜೈ ಜಗದೀಶ್‌, ಕೋಟೆ ಪ್ರಭಾಕರ್‌, ಕಡ್ಡಿಪುಡಿ ಚಂದ್ರು, ರಾಕ್‌ಲೈನ್‌ ಸುಧಾಕರ್‌, ಸಂಪತ್‌ ಮೈತ್ರೇಯ, ಪದ್ಮಜಾ ರಾವ್‌, ಪ್ರಕಾಶ್‌ ತುಮ್ಮಿನಾಡು, ಪ್ರಶಾಂತ್‌ ನಟನ, ಮೈತ್ರಿ ಜಗ್ಗಿ ಮೊದಲಾದ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ.

“ರಿದ್ಧಿ ಸಿದ್ಧಿ ಫಿಲಂಸ್‌’ ಬ್ಯಾನರ್‌ನಡಿ ರಾಜು ಶೇರಿಗಾರ್‌ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ವಿನಯ್‌ ಚಂದ್ರ ಸಾಥ್‌ ನೀಡಿದ್ದಾರೆ. ಚಿತ್ರದ ಹಾಡುಗಳಿಗೆ ಮ್ಯಾಥ್ಯೂಸ್‌ ಮನು ಸಂಗೀತ ಸಂಯೋಜಿಸಿದ್ದಾರೆ.

ಚಿತ್ರಕ್ಕೆ ಸಂಕೇತ್‌ ಎಂವೈಎಸ್‌ ಛಾಯಾಗ್ರಹಣ, ಸೂರಜ್‌ ಅಂಕೊಲೇಕರ್‌ ಸಂಕಲನವಿದೆ. ಅರ್ಜುನ್‌ ರಾಜ್‌ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ. ಈಗಾಗಲೇ “ಟಾಮ್‌ ಅಂಡ್‌ ಜೆರ್ರಿ’ಯನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಯು/ಎ’ ಸರ್ಟಿಫಿಕೇಟ್‌ ನೀಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ನ. 12 ರಾಜ್ಯಾದ್ಯಂತ ಚಿತ್ರವನ್ನು ಥಿಯೇಟರ್‌ಗೆ ಬರೋದಕ್ಕೆ ಸಿದ್ದವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next