Advertisement
ಹೆಸರೇ ಹೇಳುವಂತೆ, “ಟಾಮ್ ಅಂಡ್ ಜೆರ್ರಿ’ಯಂಥ ಎರಡು ವೈರುಧ್ಯವಿರುವ ಧರ್ಮ (ನಾಯಕ) ಮತ್ತು ಸತ್ಯ (ನಾಯಕಿ) ವ್ಯಕ್ತಿತ್ವ, ಮನಸ್ಥಿತಿಯ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇಲ್ಲೊಂದು ನವಿರಾದ ಲವ್‌ಸ್ಟೋರಿ ಇದೆ. ಪ್ರೀತಿಯನ್ನು ಹಂಬಲಿಸುವ ಹೃದಯಗಳಿವೆ, ಸಂಬಂಧಗಳನ್ನು ಬೆಂಬಲಿಸುವ ಮನಸ್ಸುಗಳಿವೆ, ಜೀವನ ದರ್ಶನ ಮಾಡಿಸುವಂಥ ಪಾತ್ರಗಳಿವೆ. ಇವೆಲ್ಲವನ್ನೂ ಒಂದೇ ಫ್ರೇಮ್‌ನಲ್ಲಿ “ಟಾಮ್ ಅಂಡ್ ಜೆರ್ರಿ’ ಜೊತೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಯುವ ನಿರ್ದೇಶಕ ರಾಘವ ವಿನಯ್ ಶಿವಗಂಗೆ.
Related Articles
Advertisement
ಇನ್ನು ಕಿರುತೆರೆಯಿಂದ ಮೊದಲ ಬಾರಿಗೆ ಹಿರಿತೆರೆಗೆ ನಾಯಕಿಯಾಗಿ ಪರಿಚಯವಾಗುತ್ತಿರುವ ಚೈತ್ರಾ ರಾವ್ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ತನ್ನಿಚ್ಛೆಯಂತೆ ಬದುಕುವ ತುಂಬ ಬೋಲ್ಡ್ ಹುಡುಗಿಯಾಗಿ ಚೈತ್ರಾ ರಾವ್ ಭಾವಾಭಿನಯ ನೋಡುಗರಿಗೆ ಇಷ್ಟವಾಗುವಂತಿದೆ. ಮಗನ ಪ್ರೀತಿ ಹಂಬಲಿಸುವ ತಂದೆ -ತಾಯಿಯಾಗಿ ತಾರಾ ಅನುರಾಧಾ, ಜೈಜಗದೀಶ್ ಅವರದ್ದು ಮನ ಮುಟ್ಟುವ ಅಭಿನಯ. ಉಳಿದಂತೆ ಇತರ ಬಹುತೇಕ ಕಲಾವಿದರು ತಮ್ಮ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ “ಟಾಮ್ ಅಂಡ್ ಜೆರ್ರಿ’ ಗೇಮ್ ಒಮ್ಮೆ ನೋಡಿ ಬರಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್