Advertisement

Tollywood: ‘ಸಲಾರ್’ ಟ್ರೇಲರ್‌, ‘ಪುಷ್ಪ-2’ ರಿಲೀಸ್‌ ಡೇಟ್..‌ ಈ ವಾರದ ಪ್ರಮುಖ ಅಪ್ಡೇಟ್ಸ್

05:24 PM Aug 28, 2023 | Team Udayavani |

ಹೈದರಾಬಾದ್: ಟಾಲಿವುಡ್‌ ನಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗಲು ಬಾಕಿಯಿದೆ. ಬಹು ನಿರೀಕ್ಷಿತ ಸಿನಿಮಾಗಳ ಅಪ್ಡೇಟ್‌ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ವಾರ ಟಾಲಿವುಡ್‌ ನಲ್ಲಿ ಏನೆಲ್ಲಾ ಪ್ರಮುಖ ಅಪ್ಡೇಟ್‌ ಹೊರ ಬೀಳಲಿದೆ ಎನ್ನುವುದುನ್ನು ನೋಡಿ ಬರೋಣ ಬನ್ನಿ..

Advertisement

ನಾಗಾರ್ಜುನ 99ನೇ ಸಿನಿಮಾದ ಅಪ್ಡೇಟ್:‌ ಅಕ್ಕಿನೇನಿ ನಾಗಾರ್ಜುನ 100ನೇ ಸಿನಿಮಾದ ಹೊಸ್ತಿಲಲ್ಲಿದ್ದಾರೆ. ನೂರನೇ ಸಿನಿಮಾಕ್ಕೂ ಮೊದಲು ಅವರ ಎರಡು ಸಿನಿಮಾಗಳು ರಿಲೀಸ್‌ ಆಗಲು ಬಾಕಿಯಿದೆ. ಅಕ್ಕಿನೇನಿ ಅವರ 99ನೇ ಸಿನಿಮಾಕ್ಕೆ ತಾತ್ಕಾಲಿಕವಾಗಿ “ನಾಗ್99”‌ ಎಂದು ಟೈಟಲ್‌ ಇಡಲಾಗಿದೆ. ಒಂದು ವರದಿಯ ಪ್ರಕಾರ ಆ.29 ರಂದು(ಮಂಗಳವಾರ) ಈ ಚಿತ್ರದ ಟೈಟಲ್‌ ರಿವೀಲ್‌ ಆಗಲಿದೆ ಎನ್ನಲಾಗಿದೆ. ಮಲಯಾಳಂ ಚಿತ್ರ ʼಪೊರಿಂಜು ಮರಿಯಂ ಜೋಸ್‌ʼನ ತೆಲುಗು ರಿಮೇಕ್‌ನಲ್ಲಿ ನಾಗಾರ್ಜುನ ನಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ʼಭಗವಂತ್ ಕೇಸರಿʼ ಹಾಡು ರಿಲೀಸ್?:‌ ಟಾಲಿವುಡ್‌ ನ ದಿಗ್ಗಜ ನಟ ನಂದಮೂರಿ ಬಾಲಕೃಷ್ಣ ಅವರ ಬಹು ನಿರೀಕ್ಷಿತ ʼಭಗವಂತ್‌ ಕೇಸರಿʼ ಸದ್ದು ಮಾಡುತ್ತಿದೆ. ಅಕ್ಟೋಬರ್‌ 18 ರಂದು ಸಿನಿಮಾ ರಿಲೀಸ್‌ ಆಗಲಿದೆ. ಈ ಸಿನಿಮಾಕ್ಕೆ ತಮಿಳಿನ ದಳಪತಿ ವಿಜಯ್‌ ಅವರ ʼಲಿಯೋʼ ಸೇರಿದಂತೆ ಇತರ ಭಾಷೆಯಲ್ಲಿನ ದೊಡ್ಡ ಸಿನಿಮಾಗಳು ಟಕ್ಕರ್‌ ನೀಡಲಿವೆ. ಅಂದಹಾಗೆ ಲೇಟೆಸ್ಟ್‌ ವರದಿಯ ಪ್ರಕಾರ ಈ ವಾರ (ಸೆ.1 ರಂದು) ರಂದು ಸಿನಿಮಾದ ಮೊದಲ ಹಾಡು ರಿಲೀಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.  ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್, ಶ್ರೀಲೀಲಾ ಮತ್ತು ಅರ್ಜುನ್ ರಾಂಪಾಲ್ ಕಾಣಿಸಿಕೊಳ್ಳಲಿದ್ದಾರೆ.

ಪವನ್‌ ಕಲ್ಯಾಣ್‌ ʼOGʼ ಯಿಂದ ಬಿಗ್‌ ಅಪ್ಡೇಟ್?‌ : ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್ ʼಸಾಹೋʼ ಖ್ಯಾತಿಯ ಸುಜೀತ್ ಅವರೊಂದಿಗೆ ಕೈಜೋಡಿಸಿರುವ ʼOGʼ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾವಾಗಲಿದ್ದು, ಸಿನಿಮಾದ ಟೀಸರ್‌ ಈ ವಾರ ರಿಲೀಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ನಟಿಸಿದ್ದಾರೆ.

ʼಸಲಾರ್‌ʼ ಟ್ರೇಲರ್‌ ರಿಲೀಸ್‌ ಆಗೋದು ಪಕ್ಕಾ? : ಬಿಗೆಸ್ಟ್‌ ಪ್ಯಾನ್‌ ಇಂಡಿಯಾ ಸಿನಿಮವಾಗಿರುವ ಪ್ರಭಾಸ್‌ ಅವರ ʼಸಲಾರ್‌ʼ ಈಗಾಗಲೇ ಟೀಸರ್‌ ನಿಂದ ಸೌಂಡ್‌ ಮಾಡಿದೆ. ಮುಂದಿನ ತಿಂಗಳು ಸಿನಿಮಾ ರಿಲೀಸ್‌ ಆಗಲಿದ್ದು, ಟೀಸರ್‌ ಬಳಿಕ ಇದೀಗ ಸಿನಿಮಾದ ಟ್ರೇಲರ್‌ ರಿಲೀಸ್‌ ಗೆ ಜನ ಕಾಯುತ್ತಿದ್ದಾರೆ. ಈ ವಾರದಲ್ಲಿ ಸಿನಿಮಾದ ಟ್ರೇಲರ್‌ ಹೊರಬೀಳಬಹುದೆಂದು ಕೆಲ ವರದಿಗಳು ತಿಳಿಸಿವೆ. ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ.

Advertisement

“ಪುಷ್ಪ-2” ರಿಲೀಸ್‌ ಡೇಟ್‌ ಅನೌನ್ಸ್‌ ಆಗುತ್ತಾ? : ಟಾಲಿವುಡ್‌ ನಲ್ಲಿ ಕಳೆದ ವಾರದಿಂದ ಅಲ್ಲು ಅರ್ಜುನ್‌ ಸುದ್ದಿಯಲ್ಲಿದ್ದಾರೆ. ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅವರಿಗೆ ಲಭಿಸಿದೆ. ಸುಕುಮಾರ್‌ ನಿರ್ದೇಶನದ ʼಪುಷ್ಪ-2ʼ ಸಿನಿಮಾದ ರಿಲೀಸ್‌ ಡೇಟ್‌ ವಾರ ರಿವೀಲ್‌ ಆಗಲಿದೆ ಎನ್ನಲಾಗುತ್ತಿದೆ.

ಇನ್ನು ಕೊನೆಯದಾಗಿ ಮೂಲತಃ ಟಾಲಿವುಡ್‌ ಸಿನಿಮಾ ಅಲ್ಲದಿದ್ದರೂ, ಟಾಲಿವುಡ್‌ ವಲಯದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಾರುಖ್‌ ಖಾನ್‌ ಅವರ ʼಜವಾನ್‌ʼ ಸಿನಿಮಾದ ಟ್ರೇಲರ್‌ ಈ ವಾರವೇ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಅಂದಹಾಗೆ ತೆಲುಗಿನಲ್ಲೂ ಈ ಸಿನಿಮಾ ಡಬ್‌ ಆಗಿ ರಿಲೀಸ್‌ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next