Advertisement
ಸ್ಥಳೀಯರ ದೂರಿನ ಮೇರೆಗೆ ಟೋಲ್‌ಗೆ ಭೇಟಿ ನೀಡಿದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರು ಶುಕ್ರವಾರ ಟೋಲ್‌ಗೆ ಭೇಟಿ ನೀಡಿ ಎರಡು ಗೇಟ್‌ಗಳಲ್ಲಿ ವಾಹನ ಸಂಚರಿಸಲು ವ್ಯವಸ್ಥೆ ಮಾಡುವಂತೆ, ಸಾರ್ವಜನಿಕರಿಗೆ ಸಮಸ್ಯೆಯಾಗ ದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಸ್ವಯಂಚಾಲಿತ ಫಾಸ್ಟ್ಯಾಗ್ ವ್ಯವಸ್ಥೆ ಸ್ಥಗಿತಗೊಂಡಿದ್ದು ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿ ಶುಲ್ಕ ಪಡೆಯಬೇಕಿದೆ. ಆದರೆ ಒಂದೇ ಯಂತ್ರ ಇರುವುದರಿಂದ ಎರಡು ಗೇಟ್‌ಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಯಂತ್ರದ ವ್ಯವಸ್ಥೆ ಮಾಡಿ ಬೆಳಗ್ಗೆ ಕಡ್ಡಾಯವಾಗಿ ಎರಡು ಗೇಟ್‌ಗಳನ್ನು ತೆರೆಯುವಂತೆ ಠಾಣಾಧಿಕಾರಿಗಳು ತಿಳಿಸಿದ್ದಾರೆ.