Advertisement

ಟೋಲ್‌ಗೇಟ್‌: ಟೋಲ್‌ಫ್ರೀ ಆಗ್ರಹ

11:14 AM Mar 08, 2017 | Team Udayavani |

ಉಡುಪಿ: ಸಾಲಿಗ್ರಾಮ ಮತ್ತು ಹೆಜಮಾಡಿಯಲ್ಲಿ ಜಿಲ್ಲಾ ಟ್ಯಾಕ್ಸಿಮನ್‌ ಅಸೋಸಿಯೇಶನ್‌ ಸದಸ್ಯರ ಕೆಎ 20 ವಾಹನಗಳಿಗೆ ಟೋಲ್‌ ಸಂಗ್ರಹಿಸದೆ ಟೋಲ್‌ಫ್ರೀ ಮಾಡಬೇಕು ಎಂದು ಅಸೋಸಿಯೇಶನ್‌ ಆಗ್ರಹಿಸಿದೆ. 

Advertisement

ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಸರ್ವಪಕ್ಷ ಗಳ ಮುಖಂಡರು, ನವಯುಗ ಕಂಪೆನಿ ಪ್ರತಿನಿಧಿಗಳ ಸಭೆಯಲ್ಲಿ ದ.ಕ., ಉಡುಪಿ ಜಿಲ್ಲೆಯಲ್ಲಿ ನೋಂದಣಿಯಾದ ಕೆಎ 19, 20 ವಾಹನಗಳನ್ನು ಟೋಲ್‌ಗೇಟ್‌ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ. ಸಾಸ್ತಾನದಲ್ಲಿ ಕೆಎ 20 ವಾಹನಗಳಿಗೆ ಟೋಲ್‌ ಸಂಗ್ರಹ ಮಾಡಲಾಗುತ್ತಿದೆ ಎಂದು ದೂರು ಬಂದಿದೆ. ಕೆಎ 20 ವಾಹನಗಳಿಗೆ ತತ್‌ಕ್ಷಣವೇ ಉಚಿತವಾಗಿ ಸಂಚರಿಸಲು ಅನುಮತಿ ನೀಡಬೇಕು. ತಪ್ಪಿದಲ್ಲಿ ಅಸೋಸಿಯೇಶನ್‌ ಸದಸ್ಯರು ಉಗ್ರ ಹೋರಾಟ ನಡೆಸುವರು ಎಂದು ಅಧ್ಯಕ್ಷ ಕೆ. ರಘುಪತಿ ಭಟ್‌ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ ಕೋಟ್ಯಾನ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next