Advertisement
ಜಿ.ಪಂ. ಸಭಾಂಗಣದಲ್ಲಿ ಬುಧವಾರ ದಿಶಾ (ಜಿಲ್ಲಾಭಿವೃದ್ಧಿ ಸಮನ್ವಯ ಮತ್ತುಉಸ್ತುವಾರಿ ಸಮಿತಿ) ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
Related Articles
Advertisement
ನಗದು ರಹಿತ ವ್ಯವಹಾರಜಿಲ್ಲೆಯಲ್ಲಿ ನಗದು ರಹಿತ ವ್ಯವಸ್ಥೆ ಅನುಷ್ಠಾನಕ್ಕೆ ಅನುಮತಿ ಸಿಕ್ಕಿದ್ದು, ಕಾಡೂರು ಪಂಚಾಯತ್‌ನಲ್ಲಿ ಪೈಲಟ್ ಯೋಜನೆ ಜಾರಿಯಲ್ಲಿದೆ. ಮೊದಲ ಹಂತದಲ್ಲಿ 15 ಪಂಚಾಯತ್‌ಗಳಲ್ಲಿ ಅನುಷ್ಠಾನ ತರುವದಾಗಿ ಜಿ.ಪಂ. ಮುಖ್ಯ ಯೋಜನಾ ಧಿಕಾರಿ ಶ್ರೀನಿವಾಸ್ ರಾವ್ ತಿಳಿಸಿದರು. ಇಲಾಖೆ ಅನುಮತಿಗೆ ಸೂಚನೆ
ಅಲೆವೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅನುಮತಿ ಸಿಗದೇ ಶಾಲೆಗೆ ಸ್ವಂತ ಕಟ್ಟಡ ಇಲ್ಲ ವಾಗಿದೆ. ಮಂಜೂರಾದ ಹಲವು ಯೋಜನೆಗಳು ನನೆಗುದಿಗೆ ಬಿದ್ದಿದ್ದು, ರದ್ದಾಗುವ ಭೀತಿ ಇದೆ. ಅರಣ್ಯ ಇಲಾಖೆಯ ಜತೆ ಚರ್ಚಿಸಿ ಆದಷ್ಟು ಬೇಗ ಅನುಮತಿ ಕೊಡಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿ ದರು. ಸಭೆಗೆ ಪ್ರತಿ ಬಾರಿಯೂ ಗೈರು ಹಾಜರಾಗುವ ಎಲ್ಲ ಇಲಾಖಾಧಿಕಾರಿ ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಡಿಸಿ ಗೆ ನಿರ್ದೇಶಿಸಿದರು. ಜಿಲ್ಲೆಯಲ್ಲಿ ಶೇ. 20ರಷ್ಟು ಮಾತ್ರ ಮಾತೃಪೂರ್ಣ ಯೋಜನೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದಾಗ, ಗರ್ಭಿಣಿ ಮತ್ತು ಬಾಣಂತಿಯರಿಗೆ ಯೋಜನೆಯಿಂದ ಆಗುವ ತೊಂದರೆಗಳನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಯೋಜನೆಯನ್ನು ಮಾರ್ಪ ಡಿಸಿ, ನಗದು ಹಣ ಅಥವಾ ದವಸ ಧಾನ್ಯಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು. ಖಾಸಗಿ ಬಸ್‌ಗಳು ಸಂಚರಿಸುವ ಮಾರ್ಗದಲ್ಲೇ ನರ್ಮ್ ಬಸ್‌ಗಳೂ ಸಂಚರಿಸುವುದರಿಂದ ಆದಾಯ ಕಡಿಮೆಯಾಗುತ್ತಿದೆ. ಬಸ್ ಸೌಲಭ್ಯ ಇಲ್ಲದ ಪ್ರದೇಶಗಳಿಗೂ ನರ್ಮ್ ಬಸ್ ಸೇವೆ ವಿಸ್ತರಿಸಬೇಕು ಎಂದು ಕೆ. ರಘುಪತಿ ಭಟ್ ತಿಳಿಸಿದರು. ಆರ್‌ಟಿಒ ಅಧಿಕಾರಿಗಳ ಸಭೆ ಕರೆದು ಸಮಾಲೋಚಿಸಲು ಜಿಲ್ಲಾಧಿಕಾರಿಗೆ ಸಂಸದರು ಸೂಚಿಸಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹೊÉàಟ್ ಉಪಸ್ಥಿತರಿದ್ದರು. ಬಡವರಿಗೂ ಚಿಕಿತ್ಸೆ ದೊರೆಯಲಿ
ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹೊಸದಾಗಿ ನಿರ್ಮಾಣಗೊಂಡ ಬಳಿಕ ಚಿಕಿತ್ಸೆಯ ಗುಣಮಟ್ಟ ಕುಸಿದಿರುವ ಬಗ್ಗೆ ದೂರುಗಳು ಬರುತ್ತಿವೆ. ಸರಕಾರಿ ಭೂಮಿಯನ್ನು ಖಾಸಗಿಯವರಿಗೆ ನೀಡಿರುವುದೇ ಈ ಸಮಸ್ಯೆಗೆ ಕಾರಣ ಎಂದು ಶಾಸಕ ರಘುಪತಿ ಭಟ್ ಆರೋಪಿಸಿದರು. ಜಿಲ್ಲೆಯಲ್ಲಿ 7,31,453 ಆಯುಷ್ಮಾನ್ ಕಾರ್ಡ್ ವಿತರಣೆಯಾಗಿದೆ. 6,816 ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಡಿಎಚ್‌ಒ ತಿಳಿಸಿದರು. ಜಿಲ್ಲೆಯಲ್ಲಿ ಕಾನೂನು ಉಲ್ಲಂ ಸಿ ಯಾರೂ ಯಾವುದೇ ಆಸ್ಪತ್ರೆ ಅಥವಾ ಕಟ್ಟಡವನ್ನು ಕಟ್ಟುವಂತಿಲ್ಲ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಡವರಿಗೂ ಉತ್ತಮ ಚಿಕಿತ್ಸೆ ನೀಡಲು ವೈದ್ಯರ ಒಂದು ತಂಡವನ್ನು ನಿಯೋಜಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ತಿಳಿಸಿದರು. ಕುಂದಾಪುರಕ್ಕೆ ಬಾರದಿರಲಿ ಪಂಪ್‌ವೆಲ್ ಟ್ರೋಲ್!
ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬ ಸಾಮಾಜಿಕ ಜಾಲತಾಣ ಗಳಲ್ಲಿ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದೆ. ಅದರಂತೆ ಟ್ರೋಲಿಗರ ಆಕ್ರೋಶಕ್ಕೆ ಕುಂದಾಪುರದ ಶಾಸ್ತ್ರೀ ಸರ್ಕಲ್ ಗುರಿಯಾಗದಿರಲಿ. ಅಧಿಕಾರಿಗಳು ಕಾಳಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದರು ಸೂಚಿಸಿದರು. ಕೃಷಿ ಸಮ್ಮಾನ್ ನೋಂದಣಿ
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ 1,40,371 ರೈತರು ನೋಂದಾಯಿಸಿದ್ದಾರೆ.ಇದರಲ್ಲಿ 1,28,899 ಫಲಾನು ಭವಿಗಳಿಗೆ ಮೊದಲನೆ ಕಂತು, 1,25,437 ಫಲಾನು ಭವಿಗಳಿಗೆ ಎರಡನೆ ಕಂತು, 72,317 ಫಲಾನುಭವಿಗಳಿಗೆ ಮೂರನೇ ಮತ್ತು 3,542 ಫಲಾನು ಭವಿಗಳಿಗೆ ನಾಲ್ಕನೇ ಕಂತು ಪಾವತಿಯಾಗಿದೆ. ರಾಜ್ಯ ಸರಕಾರದ ಎಲ್ಲ ಕಂತುಗಳು ಪಾವತಿಯಾಗಿವೆ. ಮಳೆಯಿಂದ ಹಾನಿಗೊಳಗಾದ 1,192 ರೈತರ ಬೆಳೆಗೆ 17,39,000 ಲಕ್ಷ ರೂ. ಪಾವತಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಸಭೆಗೆ ತಿಳಿಸಿದರು.