ಸಂಘ ಆಗ್ರಹಿಸಿದೆ.
Advertisement
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘದ ಮುಖಂಡರು, ಪಾಪನಾಶಿ ಮತ್ತು ಕೊರ್ಲಹಳ್ಳಿ ಮಧ್ಯೆ ಕೆಲವೇ ಕಿ.ಮೀ. ಅಂತರದಲ್ಲಿ ಎರಡು ಟೋಲ್‌ಗೇಟ್‌ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ರೈತರು ಕೃಷಿ ಉತ್ಪನ್ನಗಳನ್ನು ಸಾಗಿಸುವುದು, ಸಾರ್ವಜನಿಕರ ಜೀವನಾವಶ್ಯಕ ವಸ್ತುಗಳ ಸಾಗಾಣಿಕೆ ವಾಹನಗಳಿಗೆ ಟೋಲ್‌ನಲ್ಲಿ ಆಕರಿಸುವ ಶುಲ್ಕ ಹೊರೆಯಾಗುತ್ತಿದೆ. ಪ್ರತಿಟ್ರಿಪ್ಗೆ 500 ರಿಂದ 1000 ರೂ. ಶುಲ್ಕ ಅವೈಜ್ಞಾನಿಕವಾಗಿದೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಸರಕು ಸಾಗಾಣಿಕೆದಾರರು ಮತ್ತು ಟೋಲ್ ಸಂಗ್ರಹ ಗುತ್ತಿಗೆದಾರರ ಮಧ್ಯೆ ಚರ್ಚೆ ನಡೆಸಿ, ಟೋಲ್ ಶುಲ್ಕದಿಂದ ವಿನಾಯಿತಿ ನೀಡಬೇಕೆಂದು ಮನವಿ
ಮಾಡಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಅತೀಫ್ ಡಂಬಳ, ಅನ್ವರ ಹುಲ್ಲೂರ, ಶ್ರೀಕಾಂತ ರಾಯರಡ್ಡಿ, ಈರಯ್ಯ ಕಂಬಾಳಿಮಠ ಮತ್ತಿತರರು ಇದ್ದರು.