Advertisement

ಸಚಿವರ ಆದೇಶದ ಬಳಿಕವೂ ಟೋಲ್ ಸಂಗ್ರಹ: ಸತೀಶ ಪಿ. ನಾಯ್ಕ ಖಂಡನೆ

05:20 PM Jul 16, 2023 | Team Udayavani |

ಶಿರಸಿ: ಜಿಲ್ಲಾ ಉಸ್ತುವಾರಿ ಸಚಿವ‌ ಮಂಕಾಳ್ ವೈದ್ಯ ಅವರು ಟೋಲ್ ಸಂಗ್ರಹವನ್ನು ನಿಲ್ಲಿಸುವಂತೆ ಆದೇಶ ನೀಡಿದ್ದರೂ, ಟೋಲ್ ಅನ್ನು ಕಾನೂನು ಬಾಹಿರವಾಗಿ ರಸ್ತೆ ಗುತ್ತಿಗೆ ಪಡೆದ ಐಆರ್ ಬಿ ಕಂಪನಿಯವರು ಸಂಗ್ರಹಿಸುತ್ತಿರುವುದನ್ನು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಸತೀಶ ಪಿ. ನಾಯ್ಕ ಖಂಡಿಸಿದ್ದಾರೆ.

Advertisement

ಈ ವಿಚಾರದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಹೆದ್ದಾರಿ ರಸ್ತೆಯನ್ನು ಪೂರ್ಣಗೋಳಿಸದೆ ಟೋಲ್ ಸಂಗ್ರಹ ಮಾಡುತ್ತಿರುವ ಗುತ್ತಿಗೆ ಕಂಪನಿಯ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ರೀತಿ ಪಿಐಎಲ್ ದಾಖಲಿಸಲು ಕಾನೂನು ತಜ್ಞರ ಜೊತರ ಚರ್ಚಿಸಿದ್ದು ಅವಶ್ಯ ದಾಖಲಾತಿಗಳನ್ನು ಕ್ರೋಢೀಕರಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟೀಯ ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಉದ್ಭವಿಸಿರುವ ಸಮಸ್ಯೆಯನ್ನು ಶಮನ ಮಾಡವ ನಿಟ್ಟಿನಲ್ಲಿ ಗುತ್ತಿಗೆದಾರ ಕಂಪನಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೆ ತೆರೆವುಗೋಳಿಸಿರುವ ಬಸ್ ಸ್ಟಾಂಡ್ ಗಳ ಜಾಗದಲ್ಲಿ ಹೋಸ ಬಸ್ಸಸ್ಟಾಂಡಗಳು ಇಲ್ಲದೆ ಜನರು ಪರದಾಡುವಂತಾಗಿದೆ. ಹೊಸ ರಸ್ತೆ ನಿರ್ಮಾಣದಿಂದ ನೀರು ಹರಿದು ಹೋಗಲು ಸರಿಯಾಗಿ ವ್ಯವಸ್ಥೆ ಮಾಡಿಕೊಟ್ಟಿರುವುದಿಲ್ಲ. ನಿರ್ಮಾಣಗೊಂಡಿರುವ ಸುರಂಗಗಳು ಸೋರುತ್ತಿದ್ದರೆ ಅವೈಜ್ಞಾನಿಕವಾಗಿ ಕೊರೆದ ಗುಡ್ಡಗಳು ಕುಸಿಯುತ್ತಿವೆ. ಹೆಚ್ಚಿನ ಭಾಗದಲ್ಲಿ ರಸ್ತೆ ನಿರ್ಮಾಣವೆ ಆಗಿಲ್ಲ ಎಲ್ಲಿ ಆಗಿವೆಯೊ ಅಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ, ದೀಪಗಳಿಲ್ಲ. ಇಂಥ ಅವ್ಯವಸ್ಥೆಯ ಆಗರವಾದರೂ ಟೋಲ್ ವಸೂಲಿ ನಿರಾತಂಕವಾಗಿ ಮುಂದುವರೆಸಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next