Advertisement

ನಾಮಪತ್ರ ಸಲ್ಲಿಸುವ 24 ಗಂಟೆ ಮುಂಚೆ ಸ್ಪರ್ಧಿಸಲು ಹೇಳಲಾಗಿತ್ತು: ಖರ್ಗೆ

07:56 PM Oct 11, 2022 | Team Udayavani |

ಪಾಟ್ನಾ: ‘ನಾಮಪತ್ರ ಸಲ್ಲಿಸುವ 24 ಗಂಟೆಗೂ ಮುನ್ನವೇ ಪಕ್ಷದ ಉನ್ನತ ಹುದ್ದೆಗೆ ಚುನಾವಣೆಗೆ ಸ್ಪರ್ಧಿಸುವಂತೆ ನನ್ನನ್ನು ಕೇಳಲಾಗಿತ್ತು’ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.

Advertisement

ಬಿಹಾರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ನಾಮಪತ್ರ ಸಲ್ಲಿಕೆಗೆ 18 ಗಂಟೆಗಳ ಮೊದಲು ಅಧ್ಯಕ್ಷೀಯ ಚುನಾವಣೆಯಲ್ಲಿ ಹೋರಾಡಲು ನನ್ನನ್ನು ಕೇಳಲಾಯಿತು. ನನ್ನನ್ನು ಕಣಕ್ಕೆ ಇಳಿಸಲು ಏಕೆ ಹೇಳಲಾಗುತ್ತಿದೆ ಎಂದು ನಾನು ಪ್ರಶ್ನಿಸಿದಾಗ, ರಾಹುಲ್ ಗಾಂಧಿ ತನ್ನ ಕುಟುಂಬದ ಯಾವುದೇ ಸದಸ್ಯರು ಪಕ್ಷದ ಹುದ್ದೆಯನ್ನು ಬಯಸುವುದಿಲ್ಲ ಎಂದು ನನಗೆ ತಿಳಿಯಿತು’ ಎಂದು ಹೇಳಿದರು.

ಪಕ್ಷದೊಂದಿಗೆ ಹಲವಾರು ದಶಕಗಳ ಹಳೆಯ ಒಡನಾಟವನ್ನು ಹೆಮ್ಮೆಯಿಂದ ಸ್ಮರಿಸಿದ ಖರ್ಗೆ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಹೊಂದಿದ್ದಾಗ ನಾನು ಚುನಾವಣಾ ಕಣಕ್ಕೆ ಇಳಿದಿರುವುದಾಗಿ ಒತ್ತಿ ಹೇಳಿದರು.

“ಪಕ್ಷಕ್ಕೆ ರಾಹುಲ್ ಗಾಂಧಿ ಮತ್ತು ಅವರ ನಾಯಕತ್ವದ ಅಗತ್ಯವಿದೆ ಎಂಬ ನಂಬಿಕೆ ನನಗಿದೆ. ಅವರು ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಬೇಕಿತ್ತು. ಆದರೆ ಅವರ ಭಾವನೆಗಳ ಉದಾತ್ತತೆಯನ್ನು ನಾನು ಗೌರವಿಸುತ್ತೇನೆ” ಎಂದು ಖರ್ಗೆ ಹೇಳಿದ್ದಾರೆ.

ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರೆ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಚುನಾವಣೆಯಲ್ಲಿ ಶೇಕಡಾ 50 ರಷ್ಟು ಟಿಕೆಟ್ ಸೇರಿದಂತೆ ‘ಉದಯಪುರ ಘೋಷಣೆ’ಯ ಅನುಷ್ಠಾನವನ್ನು ಖಚಿತಪಡಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು.

Advertisement

‘ಉದಯಪುರ ಘೋಷಣೆ’ ಎಂಬುದು ಈ ವರ್ಷದ ಮೇನಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಚಿಂತನ್ ಶಿವರ್’ ದಲ್ಲಿ ಅಂಗೀಕರಿಸಲ್ಪಟ್ಟ ಪ್ರಸ್ತಾಪಗಳ ಒಂದು ಗುಂಪಾಗಿದೆ.

ಖರ್ಗೆ ಅವರು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಅಥವಾ ಮಾಧ್ಯಮಗಳಲ್ಲಿ ಹೆಚ್ಚಿನ ಸಂದರ್ಶನಗಳನ್ನು ನೀಡುವ ಅಗತ್ಯವಿಲ್ಲ ಎಂದು ಹೇಳಿ, ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ತಿರುವನಂತಪುರಂ ಸಂಸದ ಶಶಿ ತರೂರ್ ಗೆ ಪರೋಕ್ಷ ಟಾಂಗ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next