Advertisement

ತೋಳನಕೆರೆ ಅಭಿವೃದ್ಧಿ: ಸಾರ್ವಜನಿಕರೊಂದಿಗೆ ಸಮಾಲೋಚನೆ

12:06 PM Nov 17, 2017 | |

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ರಾಮಲಿಂಗೇಶ್ವರ ನಗರದ ಬಳಿ ಇರುವ ತೋಳನಕೆರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಮಾಡುವ ಕುರಿತು ಗುರುವಾರ ಕೆರೆಯ ಸುತ್ತಲಿನ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಅವರಿಂದ ಮಾಹಿತಿ ಕಲೆ ಹಾಕಲಾಯಿತು. 

Advertisement

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಸ್ಥಳೀಯರು, ಈಗಾಗಲೇ ಅಭಿವೃದ್ಧಿಯಾದ ತೋಳನಕೆರೆ ಸರಿಯಾದ ನಿರ್ವಹಣೆ ಇಲ್ಲದೇ ಸಂಪೂರ್ಣ ಹಾಳಾಗಿದೆ. ಅದರ ಕುರಿತು ಗಮನ ಹರಿಸಿ ಕೆರೆಯ ಕಾಂಪೌಂಡ್‌ ಗೋಡೆ ಎತ್ತರಿಸಬೇಕು, ಸಿಸಿ ಟಿವಿ ಅಳವಡಿಸಬೇಕು, ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು,

ಈಗಿರುವ ಕೆರೆಯ ನೀರಿನ ಮಟ್ಟ ಹೆಚ್ಚಿಸಲು ಕ್ಯಾಚ್‌ ಮೆಂಟ್‌ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸ್ವತ್ಛಗೊಳಿಸಿ ಕೆರೆಗೆ ಸಂಪರ್ಕ ಕಲ್ಪಿಸಬೇಕು, ತಾಂತ್ರಿಕವಾಗಿ ಪರಿಶೀಲನೆ ನಡೆಸಿ ಈಜಗೋಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು, ಧ್ಯಾನ ಮಂದಿರ, ಯೋಗಶಾಲೆ, ಪಕ್ಷಿಧಾಮ ಸ್ಥಾಪನೆಗೆ ಬೇಕಾದ ಕ್ರಮ ಕೈಗೊಳ್ಳಬೇಕು,

ಉಚಿತ ಪ್ರವೇಶ ಕಲ್ಪಿಸಬೇಕು, ಕೆರೆಯಲ್ಲಿ ಕಾರಂಜಿ ವ್ಯವಸ್ಥೆ ಮಾಡಬೇಕು, ಸ್ಥಳೀಯ ಸಮಿತಿ ರಚನೆ ಮಾಡಬೇಕು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು, ಪ್ರಾಣಿಗಳು ಒಳಬರದಂತೆ ಎಚ್ಚರವಹಿಸಬೇಕು ಎಂಬ ಸಲಹೆ, ಸೂಚನೆಗಳು ಸಮಾಲೋಚನೆ ಸಭೆಯಲ್ಲಿ ಕೇಳಿ ಬಂದವು. 

ನಂತರ ಮಾತನಾಡಿದ ಸ್ಮಾರ್ಟ್‌ಸಿಟಿ ಸಂಸ್ಥೆಯ ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್ಲ ಅವರು, ಸಾರ್ವಜನಿಕರು ನೀಡಿರುವ ಸಲಹೆ-ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಡಿಪಿಆರ್‌ನಲ್ಲಿ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು. 

Advertisement

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸಂತೋಷ ಹಿರೇಕೆರೂರ, ಮಹೇಶ ಬುರ್ಲಿ, ಡಾ| ಯಾದವಾಡ, ಡಾ| ವಿ.ಬಿ. ನಿಟಾಲಿ, ಮುರಳಿ ಕರ್ಜಗಿ, ನಗರ ಯೋಜನೆ ಉಪನಿರ್ದೇಶಕ ಹಿರೇಮಠ, ವಲಯಾಧಿಕಾರಿ ಪ್ರಕಾಶ ಗಾಳೇಮ್ಮನವರ, ಸಂತೋಷ ನರಗುಂದ ಸೇರಿದಂತೆ ಸುತ್ತಲಿನ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next