Advertisement

ಭಾರತಕ್ಕೆ ಟೋಕಿಯೊ ಟಿಕೆಟ್‌

12:36 PM Nov 03, 2019 | Team Udayavani |

ಭುವನೇಶ್ವರ: ಭಾರತದ ಪುರುಷರ ಮತ್ತು ವನಿತಾ ಹಾಕಿ ತಂಡಗಳೆರಡೂ 2020ರ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿವೆ. ಇದರೊಂದಿಗೆ ಮುಂದಿನ ವರ್ಷದ ಟೋಕಿಯೊ ಕೂಟವನ್ನು ಭಾರತದ ಕ್ರೀಡಾಭಿಮಾನಿಗಳು ಹೆಚ್ಚು ಕುತೂಹಲದಿಂದ ವೀಕ್ಷಿಸಬಹುದಾಗಿದೆ.

Advertisement

ಶನಿವಾರ ಇಲ್ಲಿನ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯಗಳಲ್ಲಿ ವನಿತಾ ತಂಡ ಅಮೆರಿಕಕ್ಕೆ 1-4 ಅಂತರದಿಂದ ಸೋತರೂ 2 ಪಂದ್ಯಗಳ ಒಟ್ಟು ಗೋಲು ಗಳಿಕೆಯಲ್ಲಿ 6-5 ಅಂತರದ ಮುನ್ನಡೆ ಸಾಧಿಸಿತು.

ಅನಂತರ ನಡೆದ ಪುರುಷರ ಮುಖಾಮುಖೀಯಲ್ಲಿ ಭಾರತ 7-1 ಗೋಲುಗಳಿಂದ ರಶ್ಯವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ 4-2 ಅಂತರದಿಂದ ಜಯಿಸಿದ್ದ ಭಾರತ ಒಟ್ಟು 11-3 ಮುನ್ನಡೆಯೊಂದಿಗೆ ಪ್ರಭುತ್ವ ಸಾಧಿಸಿತು.

ರಾಣಿ ಗೋಲು ತಂದ ಅದೃಷ್ಟ
ಮೊದಲ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದ ವನಿತೆಯರು ಅಮೆರಿಕ ವಿರುದ್ಧ 5-1 ಅಂತರದ ಜಯಭೇರಿ ಮೊಳಗಿಸಿದ್ದರು. ಆದರೆ ಶನಿವಾರದ ಪಂದ್ಯದಲ್ಲಿ ಅಮೆರಿಕ ತಿರುಗೇಟು ನೀಡಿತು. 4-1 ಅಂತರದಿಂದ ಭಾರತವನ್ನು ಮಣಿಸಿತು. ಆದರೆ ಎರಡೂ ಪಂದ್ಯಗಳ ಒಟ್ಟು ಗೋಲು ಲೆಕ್ಕಾಚಾರದಲ್ಲಿ ಭಾರತ 6-5 ಅಂತರದ ಮುನ್ನಡೆ ಕಾಯ್ದುಕೊಂಡು ಟೋಕಿಯೊ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಯಿತು. ಇದು ಭಾರತಕ್ಕೆ ಲಭಿಸಿದ ಸತತ 2 ಒಲಿಂಪಿಕ್‌ ಟಿಕೆಟ್‌.

ಅರ್ಧ ಹಾದಿ ಕ್ರಮಿಸುವಾಗ ಅಮೆರಿಕ 4-0 ಅಂತರದ ಭರ್ಜರಿ ಮುನ್ನಡೆಯಲ್ಲಿತ್ತು. 48ನೇ ನಿಮಿಷದಲ್ಲಿ ನಾಯಕಿ ರಾಣಿ ರಾಮ್‌ಪಾಲ್‌ ಬಾರಿಸಿದ ಮಹತ್ವದ ಗೋಲು ಭಾರತದ ಅದೃಷ್ಟವನ್ನು ತೆರೆದಿರಿಸಿತು. ಅಕಸ್ಮಾತ್‌ ಇತ್ತಂಡಗಳ ಎರಡೂ ಪಂದ್ಯಗಳ ಗೋಲುಗಳು ಸಮನಾಗಿದ್ದರೆ ಪೆನಾಲ್ಟಿ ಶೂಟೌಟ್‌ ಮೂಲಕ ವಿಜೇತರನ್ನು ನಿರ್ಧರಿಸಬೇಕಿತ್ತು.

Advertisement

ಪುರುಷರಿಗೆ 7-1 ಜಯ
ಶುಕ್ರವಾರ ನಿರೀಕ್ಷಿತ ಮಟ್ಟದ ಆಟವಾಡದ ಭಾರತದ ಪುರುಷರು ದ್ವಿತೀಯ ಪಂದ್ಯದಲ್ಲಿ ರಶ್ಯದ ಮೇಲೆರಗಿ ಹೋದರು. ರಶ್ಯ ಮೊದಲ ನಿಮಿಷದಲ್ಲೇ ಗೋಲು ಬಾರಿಸಿದರೂ ಬಳಿಕ ಭಾರತ ಮುನ್ನುಗ್ಗಿ ಹೋಯಿತು. ಸತತ 7 ಗೋಲು ಬಾರಿಸಿ ಮೆರೆದಾಡಿತು.

Advertisement

Udayavani is now on Telegram. Click here to join our channel and stay updated with the latest news.

Next