Advertisement
ಟೋಕಿಯೊ ಒಲಿಂಪಿಕ್ಸ್ ಮೇಲೆ ಭಾರತೀಯರಿಗೆ ಭಾರೀ ನಿರೀಕ್ಷೆಯಿದೆ. 2016ರ ರಿಯೊ ಡಿ ಜನೆರೊ ಒಲಿಂಪಿಕ್ಸ್ ನಲ್ಲಿ ಪದಕ ಬೇಟೆಯಲ್ಲಿ ತುಸು ಹಿಂದೆ ಬಿದ್ದ ಕೊರಗು ಟೋಕಿಯೊದಲ್ಲಿ ನೀಗಬೇಕೆನ್ನುವುದು ಭಾರತೀಯರ ಬಯಕೆ. ಈ ಹಿನ್ನೆಲೆಯಲ್ಲಿ ಟೋಕಿಯೊಗೆ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಲಿದೆ.
ಭಾರತದ ಜನಸಂಖ್ಯೆ ಮತ್ತು ಕ್ರೀಡಾಸಕ್ತರ ಸಂಖ್ಯೆಗೆ ಹೋಲಿಸಿ ದರೆ ಒಲಿಂಪಿಕ್ಸ್ ವೀಕ್ಷಣೆಗೆ ಸಿಗುವ ಟಿಕೆಟ್‌ಗಳು ಅತ್ಯಲ್ಪ. ಈ ಹಿನ್ನೆಲೆಯಲ್ಲಿ ಸಿಗುವಷ್ಟು ಟಿಕೆಗಳನ್ನು ನ್ಯಾಯಯು ತವಾಗಿ ಹಂಚಿಕೆ ಮಾಡುವ ಸಲುವಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಭಾರತಕ್ಕೆ ಫನಾಟಿಕ್ ನ್ಪೋರ್ಟ್ಸ್ ಸಂಸ್ಥೆಯನ್ನು ಅಧಿಕೃತ ಟಿಕೆಟ್ ಮರುಮಾರಾಟ ಪ್ರತಿನಿಧಿಯಾಗಿ ನೇಮಿಸಿದೆ. ಕ್ರೀಡಾಸಕ್ತರು ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಲಾಗಿದೆ.