Advertisement

100 ದಿನದಲ್ಲಿ ಒಲಿಂಪಿಕ್‌ ಟಾರ್ಚ್‌ ರಿಲೇ ಆರಂಭ

10:28 PM Dec 15, 2020 | mahesh |

ಟೋಕಿಯೊ: ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್‌ ಪಂದ್ಯಾವಳಿಯ ಟಾರ್ಚ್‌ ರಿಲೇ ಇನ್ನು 100 ದಿನಗಳಲ್ಲಿ ಆರಂಭವಾಗಲಿದೆ.

Advertisement

ಮಾ. 25ರಂದು ಈಶಾನ್ಯ ಜಪಾನಿನ ಫುಕುಶಿಮಾದಿಂದ ಹೊರಡುವ ಈ ರಿಲೇಯಲ್ಲಿ ಒಟ್ಟು 10 ಸಾವಿರ ಓಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ಮಂಗಳವಾರ ತಿಳಿಸಿದರು.

ಒಲಿಂಪಿಕ್ಸ್‌ ಮುಂದೂಡಲ್ಪಡುವುದಕ್ಕಿಂತ ಮೊದಲು ಫುಕುಶಿಮಾವೇ ರಿಲೇಯ ಆರಂಭಿಕ ಕೇಂದ್ರವಾಗಿತ್ತು. ಈ ಪ್ರಾಂತ್ಯ 10 ವರ್ಷಗಳ ಹಿಂದ ಪ್ರಬಲ ಭೂಕಂಪ ಮತ್ತು ಸುನಾಮಿ ಹೊಡೆತಕ್ಕೆ ಸಿಲುಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next