Advertisement

ಟೋಕಿಯೊ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ : ಮೇರಿ, ಮನ್‌ಪ್ರೀತ್‌ಗೆ ಧ್ವಜ ಗೌರವ

12:55 AM Jul 06, 2021 | Team Udayavani |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಾಗುವ ಗೌರವ ಬಾಕ್ಸರ್‌ ಮೇರಿ ಕೋಮ್‌ ಮತ್ತು ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಅವರಿಗೆ ಒಲಿದಿದೆ. ಆ. 8ರ ಮುಕ್ತಾಯ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿರುವವರು ಕುಸ್ತಿಪಟು ಭಜರಂಗ್‌ ಪುನಿಯ.

Advertisement

ಲಿಂಗ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಬ್ಬರು ಧ್ವಜಧಾರಿಗಳನ್ನು ಆರಿಸಲು ನಿರ್ಧರಿಸಿದ ಮೊದಲ ದೇಶವೇ ಭಾರತ. ಇದನ್ನು ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ ಒಲಿಂಪಿಕ್ಸ್‌ ಸಂಘಟನಾ ಸಮಿತಿಗೆ ವರ್ಷದ ಹಿಂದೆಯೇ ಸೂಚಿ ಸಿದ್ದರು. ಬಳಿಕ ಕಳೆದ ವರ್ಷದ ಐಒಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇದಕ್ಕೆ ಅನುಮತಿ ಲಭಿಸಿತು.

“ವಿಶ್ವ ಒಲಿಂಪಿಕ್‌ ಸಮಿತಿ ಇದನ್ನು ಅಂಗೀಕರಿಸಿದೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ದೇಶಗಳ ತಂಡಗಳಲ್ಲೂ ಓರ್ವ ಮಹಿಳಾ ಕ್ರೀಡಾಪಟು ಹಾಗೂ ಓರ್ವ ಪುರುಷ ಕ್ರೀಡಾಪಟುವಿಗೆ ಧ್ವಜ ಹಿಡಿದು ಸಾಗಲು ಐಒಸಿ ಕಾರ್ಯಕಾರಿ ಸಮಿತಿ ಅವಕಾಶ ನೀಡಿದೆ. 206 ತಂಡಗಳ ಜತೆಗೇ ಐಒಸಿ ನಿರಾಶ್ರಿತ ಒಲಿಂಪಿಕ್‌ ತಂಡವೊಂದು ಪಾಲ್ಗೊಳ್ಳುತ್ತಿರುವುದು ಇನ್ನೊಂದು ವಿಶೇಷ’ ಎಂದು ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಹೇಳಿದ್ದಾರೆ.

ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಭಾರತದ ಧ್ವಜಧಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next