Advertisement

ಒಲಿಂಪಿಕ್ಸ್‌ ಖಚಿತ: ಗವರ್ನರ್‌ ಕೊಯಿಕೆ

08:10 AM Jul 14, 2020 | mahesh |

ಟೋಕಿಯೊ: ಕೋವಿಡ್ ಹಾವಳಿಯನ್ನು ಮೆಟ್ಟಿನಿಂತು, ಜಾಗತಿಕ ಒಗ್ಗಟ್ಟಿನ ದ್ಯೋತಕವಾಗಿ ಮುಂದಿನ ವರ್ಷ ಒಲಿಂಪಿಕ್ಸ್‌ ಪಂದ್ಯಾವಳಿ ನಡೆದೇ ನಡೆಯುತ್ತದೆ ಎಂಬುದಾಗಿ ಟೋಕಿಯೊ ಗವರ್ನರ್‌ ಯುರಿಕೊ ಕೊಯಿಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ಇಂಥ ಕಠಿನ ಸನ್ನಿವೇಶದಲ್ಲಿ ಜಗತ್ತು ಒಗ್ಗಟ್ಟಾಗಿ ನಿಲ್ಲಬೇಕು, ಮನುಕುಲದ ಸಂಬಂಧವನ್ನು ದೃಢಗೊಳಿಸಬೇಕು. ಒಲಿಂಪಿಕ್ಸ್‌ ಆಯೋಜನೆಯಿಂದ ಇದು ಸಾಧ್ಯವಾಗಲಿದೆ’ ಎಂದು ರಾಯರ್‌ಗೆ ನೀಡಿದ ಆನ್‌ಲೈನ್‌ ಸಂದರ್ಶನದಲ್ಲಿ ಯುರಿಕೊ ಕೊಯಿಕೆ ಹೇಳಿದರು.

ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ವಿವಿಧ ಸಮೀಕ್ಷೆಗಳಲ್ಲಿ ಮುಂದಿನ ವರ್ಷವೂ ಟೋಕಿಯೋದಲ್ಲಿ ಒಲಿಂಪಿಕ್ಸ್‌ ನಡೆಯುವುದು ಅಸಂಭವ ಎಂಬ ರೀತಿಯಲ್ಲಿ ಸಾರ್ವಜನಿಕರು ಪ್ರತಿಕ್ರಿಯಿಸಿದ್ದರು. ಈ ಹಿನ್ನೆಲೆಯಲ್ಲಿ ಟೋಕಿಯೊ ಗವರ್ನರ್‌ ಹೇಳಿಕೆ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next