Advertisement

ಟೋಕಿಯೊ ಒಲಿಂಪಿಕ್ಸ್‌ ಗೆ ಪ್ರೇಕ್ಷಕರು ಅನುಮಾನ : ಆಯೋಜನಾ ಸಮಿತಿ ನಿರ್ಧಾರ

10:27 PM May 29, 2021 | Team Udayavani |

ಟೋಕಿಯೊ : ಕೋವಿಡ್‌-19 ನಿಯಂತ್ರಿಸಲು ಶುಕ್ರವಾರ ಪ್ರಧಾನಿ ಯೊಶಿಹಿಡೆ ಸುಗ ಅವರು ರಾಜಧಾನಿ ಟೋಕಿಯೊ ಸೇರಿದಂತೆ ಇತರ 8 ನಗರಗಳಲ್ಲಿ ತುರ್ತುಸ್ಥಿತಿ ವಿಸ್ತರಿಸಿದ್ದರು. ಇದರ ಬೆನ್ನಲ್ಲೇ ಒಲಿಂಪಿಕ್ಸ್‌ ಕೂಟವನ್ನು ಪ್ರೇಕ್ಷಕರಿಲ್ಲದೆ ನಡೆಸುವ ಸುಳಿವು ಲಭಿಸಿದೆ. ಆಯೋಜನಾ ಸಮಿತಿ ಇಂಥದೊಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisement

“ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಲೇ ಇದೆ. ಅದರಲ್ಲಿಯೂ ಪಶ್ಚಿಮ ಜಪಾನ್‌ನ ಒಸಾಕ ಪ್ರಾಂತ್ಯದಲ್ಲಿ ಸೋಂಕಿನ ಬಾಧೆ ಹೆಚ್ಚಿದೆ. ಇಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಇದೆ’ ಎಂದು ಪ್ರಧಾನಿ ಹೇಳಿದ್ದರು.

ಶೀಘ್ರವೇ ನಿರ್ಧಾರ
ಇದಕ್ಕೆ ಪ್ರತಿಕ್ರಿಕೆ ನೀಡಿದ ಸಮಿತಿ ಆಯೋಜನಾ ಸಮಿತಿಯ ಅಧ್ಯಕ್ಷೆ ಶೀಕೊ ಹಸಿಮೋಟೊ, “ನಮಗೆ ಸ್ಥಳೀಯರ ಆರೋಗ್ಯ ಮುಖ್ಯ. ಇಲ್ಲಿನ ಜನರಿಗೆ ಯಾವುದೇ ರೀತಿಯಲ್ಲೂ ವೈದ್ಯಕೀಯ ಸೌಲಭ್ಯಕ್ಕೆ ಅಡ್ಡಿಯಾಗಬಾರದು. ವಿದೇಶಿ ಪ್ರೇಕ್ಷಕರಿಗೆ ನಿರ್ಬಂಧ ನಿರ್ಧಾರವನ್ನು ಒಂದು ತಿಂಗಳ ಹಿಂದೆಯೇ ತೆಗದುಕೊಳ್ಳಲಾಗಿದೆ. ಅದೇ ರೀತಿ ಸ್ಥಳೀಯ ಪ್ರೇಕ್ಷಕರನ್ನೂ ಕೂಟದಿಂದ ದೂರವಿರಿಸುವ ಕುರಿತು ಶೀಘ್ರ ನಿರ್ಧಾರ ಪ್ರಕಟಿಸುತ್ತೇವೆ’ ಎಂದಿದ್ದಾರೆ. ಖಾಲಿ ಕ್ರೀಡಾಂಗಣಗಳಲ್ಲಿ ಕ್ರೀಡಾಕೂಟವನ್ನು ನಡೆಸುವ ಸುಳಿವನ್ನು ನೀಡಿದ್ದಾರೆ.

ಇದನ್ನೂ ಓದಿ :ಐಸಿಸಿ ಟೆಸ್ಟ್‌ ವಿಶ್ವಕಪ್‌ ಫೈನಲ್‌ : ಹಳೆಯ ಜೆರ್ಸಿಯಲ್ಲಿ ಮಿಂಚಿದ ಜಡೇಜ

Advertisement

Udayavani is now on Telegram. Click here to join our channel and stay updated with the latest news.

Next