Advertisement
ಸೋಮವಾರ ಕೆನಡಿಯನ್ ಒಲಿಂಪಿಕ್ ಕಮಿಟಿ (ಸಿಒಸಿ) ಮತ್ತು ಕೆನಡಿಯನ್ ಪ್ಯಾರಾಲಿಂಪಿಕ್ ಕಮಿಟಿ (ಸಿಪಿಸಿ) ಸೇರಿಕೊಂಡು ಒಲಿಂಪಿಕ್ಸ್ ನಿಂದ ದೂರ ಉಳಿಯುವ ತೀರ್ಮಾನ ತೆಗೆದುಕೊಂಡವು. ಇದಕ್ಕೆ ದೇಶದ ಆ್ಯತ್ಲೀಟ್ಸ್ ಕಮಿಷನ್ಸ್, ರಾಷ್ಟ್ರೀಯ ಕ್ರೀಡಾ ಸಂಘಟನೆಗಳು, ಕೆನಡಾ ಸರಕಾರ ಸಂಪೂರ್ಣ ಬೆಂಬಲ ಸೂಚಿಸಿವೆ. ಇದೊಂದು ಕಠಿನ ನಿರ್ಧಾರವಾಗಿದ್ದು, ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮುಂದೂಡಬೇಕೆಂಬುದೇ ತಮ್ಮ ಪ್ರಮುಖ ಉದ್ದೇಶ ಎಂದು ಸಿಒಸಿ ಸ್ಪಷ್ಟಪಡಿಸಿದೆ.
ಕೆನಡಾದ ಈ ನಿರ್ಧಾರದಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಿದಂತಾಗಿದೆ. ಅದು ಮುಂದಿನ 4-5 ವಾರಗಳಲ್ಲಿ, ಎಲ್ಲ ರಾಷ್ಟ್ರಗಳ ಒಲಿಂಪಿಕ್ ಸಮಿತಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದಿನ ನಿರ್ಧಾರಕ್ಕೆ ಬರುವುದಾಗಿ ಹೇಳಿತ್ತು. ಆದರೆ ಅಲ್ಲಿಯ ತನಕ ಕಾಯಲು ತಾನು ಸಿದ್ಧವಿಲ್ಲ ಎಂಬುದಾಗಿ ಕೆನಡಿಯನ್ ಒಲಿಂಪಿಕ್ ಕಮಿಟಿ ಸ್ಪಷ್ಟಪಡಿಸಿದೆ.
ಐಒಸಿ ಒಲಿಂಪಿಕ್ಸ್ ಕೂಟವನ್ನು ಕನಿಷ್ಠ ಒಂದು ವರ್ಷದ ಮಟ್ಟಿಗೆ ಮುಂದೂಡಲಿ, ಇದಕ್ಕೆ ತಾನು ಸಂಪೂರ್ಣ ಬೆಂಬಲ ನೀಡುವುದಾಗಿ ಸಿಒಸಿ ತಿಳಿಸಿದೆ. “ಕ್ರೀಡಾಪಟುಗಳ ಹಾಗೂ ಸಾರ್ವ ಜನಿಕರ ಆರೋಗ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಕೊರೊನಾ ವೈರಸ್ ಇಷ್ಟೊಂದು ಭೀಕರವಾಗಿ ವಿಶ್ವಾದ್ಯಾಂತ ಕಾಡುತ್ತಿರುವಾಗ ಯಾರೂ ರಿಸ್ಕ್ ತೆಗೆದು ಕೊಳ್ಳಲು ಬಯಸುವುದಿಲ್ಲ. ಕ್ರೀಡಾಳುಗಳ, ಅವರ ಕುಟುಂಬದವರ ಹಾಗೂ ಇಡೀ ಕೆನಡಾದ ಹಿತ ಇದರಲ್ಲಿ ಅಡಗಿದೆ. ಇದು ಐಒಸಿಗೂ ಅರ್ಥವಾಗಬೇಕಿದೆ’ ಎಂಬುದಾಗಿ ಕೆನಡಿಯನ್ ಒಲಿಂಪಿಕ್ ಕಮಿಟಿ ಹೇಳಿದೆ.
Related Articles
“ಐಒಸಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದುಗೊಳಿಸಿಲ್ಲ, ಮುಂದೂಡಿಕೆಯ ಸಾಧ್ಯತೆಯನ್ನು ತೆರೆದಿರಿಸಿದೆ. ಇದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಕೊರೊನಾ ಎಂಬುದೊಂದು ಜಾಗತಿಕ ಬಿಕ್ಕಟ್ಟು. ಆರೋಗ್ಯ ಸುಧಾರಣೆ ಹಾಗೂ ವೈರಸ್ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಮಾನವ ಸಂಕುಲವನ್ನು ರಕ್ಷಿಸುವುದು ಸಾಂ ಕ ಜವಾಬ್ದಾರಿ. ಹೀಗಾಗಿ ಟೋಕಿಯೊ ಒಲಿಂಪಿಕ್ಸ್ ಮುಂದೂಡುವ ಪ್ರಸ್ತಾವವನ್ನು ಐಒಸಿ ಒಪ್ಪಿಕೊಳ್ಳಲಿದೆ ಎಂದು ನಾವು ನಂಬಿದ್ದೇವೆ’ ಎಂದು ಕೆನಡಿಯನ್ ಒಲಿಂಪಿಕ್ ಕಮಿಟಿ ಹೇಳಿದೆ.
Advertisement