Advertisement
“ನಿಜ, ಕೋವಿಡ್ 19 ವೈರಸ್ ವಿಶ್ವಾದ್ಯಂತ ವ್ಯಾಪಿಸಿದೆ. ಆದರೆ ಇದು ಒಂದೆರಡು ತಿಂಗಳಲ್ಲಿ ನಿಯಂತ್ರಣಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ಚೀನದಲ್ಲಿ ಇದು ಈಗಾಗಲೇ ಹತೋಟಿಗೆ ಬಂದಿದೆ. ಒಲಿಂಪಿಕ್ಸ್ ಆರಂಭಕ್ಕೆ ಇನ್ನೂ 4 ತಿಂಗಳಿವೆ. ಹೀಗಾಗಿ ಈ ಕೂಟ ನಿಗದಿತ ವೇಳೆಯಲ್ಲೇ ನಡೆಯಲಿದೆ ಎಂಬ ವಿಶ್ವಾಸ ನಮ್ಮದು’ ಎಂದು ಐಒಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಒಲಿಂಪಿಕ್ಸ್ ತಯಾರಿ ಮತ್ತು ಅರ್ಹತೆಗೆ ಕೊರೊನಾದಿಂದ ಭಾರೀ ಹಿನ್ನಡೆಯಾಗಿದೆ. ಆದರೆ ಇದು ಕೇವಲ ಭಾರತದ ಸಮಸ್ಯೆಯಲ್ಲ. ಎಲ್ಲ ದೇಶಗಳೂ ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ಹೀಗಾಗಿ ನಮ್ಮ ನಿರೀಕ್ಷೆಯಲ್ಲೇನೂ ಬದಲಾವಣೆ ಇಲ್ಲ, ಟೋಕಿಯೊದಲ್ಲಿ ಭಾರತ ಹತ್ತಕ್ಕೂ ಹೆಚ್ಚು ಪದಕ ಗೆಲ್ಲಲಿದೆ…’ ಎಂದು ಐಒಎ ಅಧಿಕಾರಿ ಪಿಟಿಐ ಜತೆ ಹೇಳಿದ್ದಾರೆ.
ಆದರೆ ಐಒಎ ಅಧಿಕಾರಿಯ ಈ ಹೇಳಿಕೆಗೆ ಭಾರತದ ಕ್ರೀಡಾವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಅವರೇನು ನಮ್ಮ ಪ್ರಾಣವನ್ನು ಒತ್ತೆಯಿಟ್ಟು ಟೋಕಿಯೊಗೆ ಕಳುಹಿಸುವರೇ ಎಂಬಂಥ ತೀಕ್ಷ್ಣ ಅಭಿಪ್ರಾಯಗಳು ಕೇಳಿಬಂದಿವೆ.