Advertisement

ಟೋಕಿಯೊ ಒಲಿಂಪಿಕ್ಸ್‌ : ಟೋಕಿಯೊ ಬೀದಿಯಲ್ಲಿ ಟಾರ್ಚ್‌ ರಿಲೇ ರದ್ದು

12:11 AM Jul 08, 2021 | Team Udayavani |

ಟೋಕಿಯೊ: ಕೊರೊನಾ ಮುನ್ನೆ ಚ್ಚರಿಕೆಯ ಕಾರಣ ಟೋಕಿಯೊ ಒಲಿಂಪಿಕ್ಸ್‌ ಸಂಘಟನಾ ಸಮಿತಿ ಇನ್ನೊಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಟೋಕಿಯೊ ಬೀದಿಗಳಲ್ಲಿ ಸಾಗುವ ಒಲಿಂಪಿಕ್ಸ್‌ ಜ್ಯೋತಿ ರಿಲೇ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

Advertisement

ಶುಕ್ರವಾರದಿಂದ ರಿಲೇಯನ್ನು ಸಾರ್ವಜನಿಕ ಸ್ಥಳಗಳ ಬದಲು ಆಯ್ದ ಕೆಲೆವà ಸ್ಥಳಗಳಲ್ಲಿ ತೀರಾ ಖಾಸಗಿಯಾಗಿ ನಡೆಸಲು ಉದ್ದೇಶಿಸಲಾಗಿದೆ. ಬುಧವಾರ ಟೋಕಿಯೊ ಸಿಟಿ ಗವರ್ನ್ಮೆಂಟ್‌ ಈ ಪ್ರಕಟನೆ ಹೊರಡಿಸಿದ್ದು, ಜು. 23ರ ಉದ್ಘಾಟನಾ ಸಮಾರಂಭದ ವೇಳೆ ಬೆಳಗಲಾಗುವ ಒಲಿಂಪಿಕ್ಸ್‌ ಜ್ಯೋತಿಯನ್ನು ಮನೆಯಲ್ಲೇ ಕುಳಿತು ವೀಕ್ಷಿಸುವಂತೆ ಸೂಚಿಸಿದೆ.

ಇದನ್ನೂ ಓದಿ : ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ : ಪ್ರಮುಖ ಖಾತೆಗಳ ವಿವರ : ಯಾರ್ ಯಾರಿಗೆ ಯಾವ ಖಾತೆ.?

 ಸಾರ್ವಜನಿಕರಿಗೆ ಬೇಸರ
ಒಲಿಂಪಿಕ್ಸ್‌ ಟಾರ್ಚ್‌ ರಿಲೇಗೆ ಆರಂಭದಿಂದಲೂ ವಿಘ್ನ ಒಂದೆರಗಿದ್ದು, ಇದರ ಮಹತ್ವವೇ ಹೊರಟು ಹೋಗಿದೆ ಎಂದು ಸಾರ್ವಜನಿಕರದು ಹಾಗೂ ಸಂಘಟಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಜಪಾನಿನ ಪ್ರಮುಖ ಪ್ರವಾಸಿ ತಾಣಗಳಾದ ಕೊÂಟೊ, ಹಿರೋಶಿಮಾ ನಗರಗಳಲ್ಲಿ ಒಲಿಂಪಿಕ್ಸ್‌ ಜ್ಯೋತಿ ರಿಲೇ ಸಂಚರಿಸಲೇ ಇಲ್ಲ ಎಂಬುದು ಉಲ್ಲೇಖನೀಯ.

ಮಹಿಳೆ ವಶಕ್ಕೆ
ಈ ನಡುವೆ ರಿಲೇ ಓಟಗಾರ್ತಿಯತ್ತ ವಾಟರ್‌ ಗನ್‌ನಿಂದ ದ್ರವ ಪದಾರ್ಥವನ್ನು ಚಿಮ್ಮಿಸಿದ 53 ವರ್ಷದ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದ ಘಟನೆಯೂ ಸಂಭವಿಸಿದೆ. ರವಿವಾರ ಇಂಥದೊಂದು ಅನಪೇಕ್ಷಿತ ವಿದ್ಯಮಾನ ಸಂಭವಿಸಿದ ಬಳಿಕ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಸಾರ್ವಜನಿಕರನ್ನು ದೂರ ಇರಿಸಲು ಇದೂ ಒಂದು ಕಾರಣವಾಗಿದೆ.

Advertisement

ಮ್ಯಾರಥಾನ್‌ ನಿರ್ಬಂಧ
ಇದೇ ವೇಳೆ ಒಲಿಂಪಿಕ್ಸ್‌ ಮ್ಯಾರಥಾನ್‌ ಸ್ಪರ್ಧೆ ವೇಳೆ ಮಾರ್ಗದಲ್ಲಿ ಕಾಣಿಸಿಕೊಳ್ಳದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಜನರು ಗುಂಪುಗೂಡುವುದರಿಂದ ಕೊರೊನಾ ಸೋಂಕು ಹಬ್ಬಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ಆತಂಕಕ್ಕೆ ಕಾರಣ.
ಉದ್ಘಾಟನಾ ಸಮಾರಂಭದಲ್ಲಿ ಕೇವಲ ಆಯ್ದ ವಿಐಪಿಗಳಿಗಷ್ಟೇ ಅವಕಾಶ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next