Advertisement

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡ ಈಜುಪಟು ಶ್ರೀಹರಿ

12:38 AM Jul 01, 2021 | Team Udayavani |

ಹೊಸದಿಲ್ಲಿ : ಭಾರತದ ಈಜುಪಟು ಶ್ರೀಹರಿ ನಟರಾಜ್‌ ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದ್ದಾರೆ.

Advertisement

ವಿಶ್ವ ಈಜು ಕ್ರೀಡಾ ಆಡಳಿತ ಮಂಡಳಿ ಅಂತಾರಾಷ್ಟ್ರೀಯ ಈಜು ಸಂಸ್ಥೆ “ಫಿನಾ’ ಶ್ರೀಹರಿಗೆ “ಎ’ ಟೈಮ್‌ ಪ್ರಮಾಣಿತ ಪ್ರಮಾಣ ಪತ್ರ ನೀಡಿರುವುದರಿಂದ ಅವರಿಗೆ ಟೋಕಿಯೊ ಬಾಗಿಲು ತೆರೆಯಲ್ಪಟ್ಟಿತು.

“ಟೋಕಿಯೊ ಒಲಿಂಪಿಕ್ಸ್‌ಗೆ ಶ್ರೀಹರಿ ನಟರಾಜ್‌ 53.77 ಸೆಕೆಂಡ್ಸ್‌ ಅರ್ಹತಾ ಸಮಯದೊಂದಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸಾಜನ್‌ ಪ್ರಕಾಶ್‌ ಬಳಿಕ “ಎ’ ಸ್ಟಾಂಡರ್ಡ್‌ ಅರ್ಹತೆ ಪಡೆದ ಹಾಗೂ ಒಲಿಂಪಿಕ್ಸ್‌ ಕೋಟಾ ಗಳಿಸಿದ ಎರಡನೇ ಭಾರತೀಯ ಈಜುಪಟು ಎಂಬ ಹೆಗ್ಗಳಿಕೆಗೆ ಶ್ರೀಹರಿ ಪಾತ್ರರಾಗಿದ್ದಾರೆ’ ಎಂದು ಭಾರತದ ಈಜು ಒಕ್ಕೂಟ ಟ್ವೀಟ್‌ ಮಾಡಿದೆ.

ಇದನ್ನೂ ಓದಿ :ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದ ದ್ಯುತಿ, ಅನ್ನು ರಾಣಿ, ಜಬೀರ್‌

Advertisement

Udayavani is now on Telegram. Click here to join our channel and stay updated with the latest news.

Next