Advertisement

ಲಾಂಛನ ಬಿಡುಗಡೆ ಮಾಡಿದ ಜಪಾನ್‌

11:53 AM Jul 23, 2018 | Team Udayavani |

ಜಪಾನ್‌: 2020ರ ಟೋಕಿಯೊ ಒಲಿಂಪಿಕ್ಸ್‌ಗೆ ದೊಡ್ಡ ಮಟ್ಟದಲ್ಲಿ ಸಜ್ಜಾಗುತ್ತಿರುವ ಜಪಾನ್‌, ರವಿವಾರದ ವರ್ಣರಂಜಿತ ಸಮಾರಂಭದಲ್ಲಿ ಕೂಟದ ಲಾಂಛನವನ್ನು ಬಿಡುಗಡೆ ಮಾಡಿತು. ಜಪಾನೀ ಹೆಸರುಗಳನ್ನೊಳಗೊಂಡ 2 ಲಾಂಛನಗಳನ್ನು ಈ ಸಂದರ್ಭದಲ್ಲಿ ಜಗತ್ತಿನ ಮುಂದೆ ಅನಾವರಣಗೊಳಿಸಲಾಯಿತು.
ಒಂದರ ಹೆಸರು “ಮಿರೈತೋವಾ’. ಇದು ನೀಲಿ ಚೌಕಗಳ ಉಡುಗೆ ಧರಿಸಿದ ಗೊಂಬೆಯ ಮಾದರಿಯಲ್ಲಿದೆ. “ಭವಿಷ್ಯ ಮತ್ತು ಶಾಶ್ವತ’ ಎಂಬುದು ಇದರರ್ಥ. ಸದಾ ಕಾಲ ಉಜ್ವಲ ಭವಿಷ್ಯವನ್ನು ಹೊಂದಿರಲಿ ಎಂಬುದನ್ನು ಇದು ಧ್ವನಿಸುತ್ತದೆ ಎಂದು ಸಂಘಟಕರು ಈ ಸಂದರ್ಭದಲ್ಲಿ ಹೇಳಿದರು.ಪ್ಯಾರಾಲಿಂಪಿಕ್ಸ್‌ ಲಾಂಛನ ಕೂಡ “ಮಿರೈತೋವಾ’ವನ್ನೇ ಹೋಲುತ್ತಿದ್ದು, ಉಡುಗೆಯ ಬಣ್ಣದಲ್ಲಿ ಮಾತ್ರ ವ್ಯತ್ಯಾಸ ಕಾಣಬಹುದು. ಇದಕ್ಕೆ “ಸೊಮೀಟಿ’ ಎಂದು ನಾಮಕರಣ ಮಾಡಲಾಗಿದ್ದು, ಇದು ಗುಲಾಲಿ ಬಣ್ಣದ ಚೌಕುಳಿಯ ಉಡುಗೆಯನ್ನು ಧರಿಸಿದೆ. ಜಪಾನಿನ ಬಹು ಪ್ರಸಿದ್ಧ ಚೆರ್ರಿ ಮರದ ಹೋಲಿಕೆಯನ್ನು ಇಲ್ಲಿ ಕಾಣಬಹುದು. ಸೊಮೀಟಿ ಅಂದರೆ “ಭಾರೀ ಬಲಾಡ್ಯ’ ಎಂದರ್ಥ. 

Advertisement

ಜಪಾನ್‌ ಒಲಿಂಪಿಕ್ಸ್‌ ಸಂಘಟಕರ ಪ್ರಕಾರ ಮಿರೈತೋವಾ “ನ್ಯಾಯ ಪ್ರಜ್ಞೆ’ಯ ಸಂಕೇತ. ಸೊಮೀಟಿ “ಬಹಳ ತಣ್ಣಗಿನ ಸ್ವಭಾವ’ ದ್ದಾಗಿದ್ದು, ಅನಿವಾರ್ಯ ಸಂದರ್ಭಗಳಲ್ಲಿ ತನ್ನ ಬಲಿಷ್ಠ ಸ್ವಭಾವನ್ನು ಪರಿಚಯಿಸಲು ಹಿಂಜರಿಯದು ಎಂದು ಬಣ್ಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next