Advertisement
ಈ ಗೆಲುವಿನೊಂದಿಗೆ ಸಿಂಧು ತಮ್ಮ ಗ್ರೂಪ್ ಅಭಿ ಯಾನವನ್ನು ಅಜೇಯವಾಗಿ ಮುಗಿಸಿದರು. “ಜೆ’ ವಿಭಾಗದ ಅಗ್ರಸ್ಥಾನಿಯಾಗಿ ನಾಕೌಟ್‌ಗೆ
Related Articles
Advertisement
ಆರ್ಚರಿ: ಭರವಸೆಯ ದೀಪಿಕಾ ಕುಮಾರಿ:
ಟೋಕಿಯೊ: ಭಾರತದ ಬಹುತೇಕ ಬಿಲ್ಲುಗಾರರೆಲ್ಲ ಗುರಿ ತಪ್ಪಿರುವಾಗ ವಿಶ್ವದ ನಂ.1 ಆರ್ಚರ್ ದೀಪಿಕಾ ಕುಮಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ವನಿತಾ ವೈಯಕ್ತಿಕ ಸ್ಪರ್ಧೆಯಲ್ಲಿ ಅವರು ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಬುಧವಾರದ ಮೊದಲ ಸುತ್ತಿನ ಪಂದ್ಯದಲ್ಲಿ ದೀಪಿಕಾಗೆ ಕಠಿನ ಸವಾಲೇನೂ ಎದುರಾಗಲಿಲ್ಲ. ಭೂತಾನ್‌ನ 193ರಷ್ಟು ಕೆಳ ರ್‍ಯಾಂಕಿಂಗ್‌ನ ಕರ್ಮಾ ವಿರುದ್ಧ 6-0 ಅಂತರದ ಭರ್ಜರಿ ಜಯ ಸಾಧಿಸಿದರು. ಆದರೆ ದ್ವಿತೀಯ ಸುತ್ತಿನಲ್ಲಿ ಅಮೆರಿಕದ ಯುವ ಆರ್ಚರ್ ಜೆನ್ನಿಫರ್ ಮ್ಯುಕಿನೊ ಫೆರ್ನಾಂಡೆಜ್ ವಿರುದ್ಧ ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು. ಆದರೆ ಲಕ್ ಭಾರತೀಯಳ ಪರ ಇತ್ತು. 6-4 ಅಂತರದ ಗೆಲುವು ಒಲಿಯಿತು.
ಜಿದ್ದಾಜಿದ್ದಿ ಸ್ಪರ್ಧೆ:
ಮೊದಲ ಸೆಟ್ ಅನ್ನು ಕೇವಲ ಒಂದಂಕದಿಂದ ಕಳೆದುಕೊಂಡ ದೀಪಿಕಾ ಕುಮಾರಿ, ಬಳಿಕ ಹಂತ ಹಂತವಾಗಿ ತಿರುಗಿ ಬಿದ್ದರು. ಮೂರು ಪರಿಪೂರ್ಣ “ಟೆನ್ಸ್’ನೊಂದಿಗೆ ಮುನ್ನಡೆ ಗಳಿಸಿದರು.
4ನೇ ಸೆಟ್‌ನ ದ್ವಿತೀಯ ಬಾಣದಿಂದ ಕೇವಲ 6 ಅಂಕ ಗಳಿಸಿದಾಗ ದೀಪಿಕಾಗೆ ಆತಂಕ ಎದುರಾಯಿತು. ಇದು ಕೂಡ ಕೇವಲ ಒಂದಂಕದಿಂದ ಅಮೆರಿಕನ್ನಳ ಪಾಲಾಯಿತು. 5ನೇ ಸೆಟ್‌ನಲ್ಲಿ ದೀಪಿಕಾ ಎರಡು “ನೈನ್ಸ್’ ಹಾಗೂ ಕೊನೆಯಲ್ಲಿ 8ಕ್ಕೆ ಗುರಿ ಇರಿಸಿದರು. ಈ ಸ್ಪರ್ಧೆಯನ್ನು ಶೂಟ್ ಆಫ್ಗೆ ಕೊಂಡೊಯ್ಯಲು ಜೆನ್ನಿಫರ್ ಕೊನೆಯ ಬಾಣದಲ್ಲಿ ಪರಿಪೂರ್ಣ 10 ಅಂಕ ಸಂಪಾದಿಸಬೇಕಿತ್ತು. ಇಲ್ಲಿ 9 ಅಂಕ ಗಳಿಸಿ ಶರಣಾದರು.
ಇಂದು ಅತನು ಸ್ಪರ್ಧೆ :
ಪುರುಷರ ಸಿಂಗಲ್ಸ್‌ನಲ್ಲಿ ದೀಪಿಕಾ ಕುಮಾರಿ ಅವರ ಪತಿ ಅತನು ದಾಸ್ ಸ್ಪರ್ಧೆಯಲ್ಲಿ ಉಳಿದಿರುವ ಭಾರತದ ಮತ್ತೋರ್ವ ಆರ್ಚರ್. ಇವರು ಗುರುವಾರ ಕಣಕ್ಕಿಳಿಯಲಿದ್ದಾರೆ. ಇವರ 64ರ ಸುತ್ತಿನ ಎದುರಾಳಿ, ಚೈನೀಸ್ ತೈಪೆಯ ಡೆಂಗ್ ಯು ಚೆಂಗ್.
ಟೋಕಿಯೊ ಆರ್ಚರಿ ಸ್ಪರ್ಧೆಯಲ್ಲಿ ಅತನು-ದೀಪಿಕಾ ದಂಪತಿ ಭಾರತದ ಕಟ್ಟಕಡೆಯ ಪದಕ ಭರವಸೆಯಾಗಿ ಉಳಿದಿದ್ದಾರೆ.
ಬಾಕ್ಸಿಂಗ್: ಪೂಜಾ ರಾಣಿ ಪವರ್ :
ಟೋಕಿಯೊ: ಇದೇ ಮೊದಲ ಸಲ ಒಲಿಂಪಿಕ್ಸ್‌ಗೆ ಕಾಲಿಟ್ಟಿರುವ ಪೂಜಾ ರಾಣಿ 75 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಮತ್ತೂಂದು ಬಾಕ್ಸಿಂಗ್ ಆಶಾಕಿರಣವಾಗಿ ಗೋಚರಿಸಿದ್ದಾರೆ. 30 ವರ್ಷದ ಪೂಜಾ ಬುಧವಾರದ ಸ್ಪರ್ಧೆಯಲ್ಲಿ ತನಗಿಂತ 10 ವರ್ಷ ಕಿರಿಯಳಾದ ಆಲ್ಜಿರಿಯಾದ ಇಶ್ರಾಕ್ ಚೈಬ್ ಅವರನ್ನು 5-0 ಅಂತರದಿಂದ ಮಣಿಸಿದರು. ಇದಕ್ಕೂ ಮೊದಲು ಲವಿÉನಾ ಬೊರ್ಗೊಹೈನ್ ಕೂಡ ವನಿತಾ ವಿಭಾಗದಿಂದ ಕ್ವಾರ್ಟರ್ ಫೈನಲ್ ತಲುಪಿದ್ದರು.
ಚೈಬ್ ಪಾಲಿಗೂ ಇದು ಚೊಚ್ಚಲ ಒಲಿಂಪಿಕ್ಸ್ ಆಗಿತ್ತು. ಆದರೆ ಭಾರತೀಯ ಬಾಕ್ಸರ್ ಅನುಭವಕ್ಕೆ ಸಾಟಿಯಾಗಲು ಇವರಿಂದ ಸಾಧ್ಯವಾಗಲಿಲ್ಲ. ಎರಡು ಬಾರಿಯ ಏಶ್ಯನ್ ಚಾಂಪಿಯನ್ ಆಗಿರುವ ಪೂಜಾ ರಾಣಿ ಮೂರೂ ಸುತ್ತುಗಳಲ್ಲಿ ಅಮೋಘ ಮೇಲುಗೈ ಸಾಧಿಸಿದರು.
ಚೀನದ ಕ್ವಿಯಾನ್ ಎದುರಾಳಿ:
ಪೂಜಾ ರಾಣಿ ಕ್ವಾರ್ಟರ್ ಫೈನಲ್‌ನಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಮಾಜಿ ವಿಶ್ವ ಚಾಂಪಿಯನ್ ಖ್ಯಾತಿಯ ಚೀನದ ಲೀ ಕ್ವಿಯಾನ್ ವಿರುದ್ಧ ಸೆಣಸಬೇಕಿದೆ. ಕ್ವಿಯಾನ್‌ಗೆ ಮೊದಲ ಸುತ್ತಿನ ಬೈ ಲಭಿಸಿದ್ದು, ನೇರವಾಗಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪೂಜಾ ಪಾಲಿಗೆ ಇದು ಅತ್ಯಂತ ಕಠಿನ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. 2014ರ ಏಶ್ಯಾಡ್ ಸೆಮಿಫೈನಲ್, 2020ರ ಏಶ್ಯ ಓಶಿಯಾನಿಯ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಈ ಚೀನೀ ಎದುರಾಳಿಗೆ ಪೂಜಾ ಶರಣಾಗಿದ್ದರು.
ಸವಾಲು ಮೆಟ್ಟಿನಿಂತ ಸಾಧಕಿ:
ಭವಿಷ್ಯವನ್ನೇ ಭಯಭೀತಗೊಳಿಸಿದ ಭುಜದ ನೋವು, ಸುಟ್ಟು ಹೋದ ಕೈ ಹಾಗೂ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದ ಪೂಜಾ ರಾಣಿ ಅವರ ಒಲಿಂಪಿಕ್ಸ್ ಪ್ರವೇಶವೇ ಒಂದು ಸ್ಫೂರ್ತಿದಾಯಕ ಕತೆ. ಪೊಲೀಸ್ ಅಧಿಕಾರಿಯಾಗಿರುವ ತಂದೆ ಕೂಡ ಮಗಳ ಕ್ರೀಡೆಗೆ ಪ್ರೋತ್ಸಾಹ ನೀಡಿರಲಿಲ್ಲ. ಇದರಿಂದ ನಿನಗೆ ಪೆಟ್ಟಾಗುತ್ತದೆ, ಬಾಕ್ಸಿಂಗ್ ಕ್ರೀಡೆಯೇನಿದ್ದರೂ ಆಕ್ರಮಣಕಾರಿ ಸ್ವಭಾವದವರಿಗೇ ಹೊರತು ನಿನಗಲ್ಲ ಎಂದು ತಂದೆ ಪದೇಪದೆ ಎಚ್ಚರಿಸಿದ್ದನ್ನು ಪೂಜಾ ರಾಣಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.