ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯುವ ಒಲಿಂಪಿಕ್ಸ್‌ಗಾಗಿ ಕಳೆದ ವಾರವೇ ಭಾರತದ 16 ಸದಸ್ಯರ ಹಾಕಿ ತಂಡವನ್ನು ಪ್ರಕಟಿಸಲಾಗಿತ್ತು. ಆದರೆ ನಾಯಕನನ್ನು ಆಯ್ಕೆ ಮಾಡಿರಲಿಲ್ಲ.
Advertisement
“3ನೇ ಬಾರಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವು ದರಿಂದ, ಜತೆಗೆ ಈ ಬಾರಿ ನಾಯಕತ್ವದ ಜವಾಬ್ದಾರಿ ವಹಿಸಿ ರುವುದರಿಂದ ವಿನೀತಭಾವ ಮೂಡಿದೆ. ಇದು ನನಗೆ ಅತ್ಯಂತ ಹೆಮ್ಮೆಯ ಕ್ಷಣ’ ಎಂದು ಮನ್‌ಪ್ರೀತ್ ಸಂಭ್ರಮಿಸಿದ್ದಾರೆ.“ಕಳೆದ ಕೆಲವು ವರ್ಷಗಳಿಂದ ನಾವು ಪ್ರಬಲ ನಾಯಕತ್ವದ ಗುಂಪನ್ನು ರೂಪಿಸಿಕೊಂಡಿದ್ದೇವೆ. ಸಾಂಕ್ರಾಮಿಕ ಪಿಡುಗು ತಂದೊಡ್ಡಿದ ಸವಾಲಿನ ನಡುವೆಯೂ ಆಟದ ಗುಣಮಟ್ಟ ಕುಸಿಯದಂತೆ ಯಶಸ್ವಿಯಾಗಿ ನೋಡಿಕೊಂಡಿದ್ದೇವೆೆ’ ಎಂದು ಮನ್‌ಪ್ರೀತ್ ಹೇಳಿದ್ದಾರೆ.