Advertisement

ಬಿಲ್ಗಾರಿಕೆ: ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸಿದ ಅತನು ದಾಸ್

08:50 AM Jul 31, 2021 | Team Udayavani |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬಿಲ್ಗಾರಿಕೆ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ. ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಅತನು ದಾಸ್ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸಿದ್ದಾರೆ.

Advertisement

2012ರ​ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ವಿಜೇತ ಆಟಗಾರ ಜಪಾನ್ ನ ತಕಹರು ಫುರುಕವಾ ಅವರ ವಿರುದ್ಧ ಅತನು ದಾಸ್ 4-6 ಅಂತರದಿಂದ ಸೋಲನ್ನಪ್ಪಿದ್ದಾರೆ.

ಹಿಂದಿನ ಪಂದ್ಯದಲ್ಲಿ ಲಂಡನ್​ ಒಲಿಂಪಿಕ್ಸ್ ​ನ ಚಿನ್ನದ ಪದಕ ವಿಜೇತ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ರೋಚಕ ಗೆಲುವು ಸಾಧಿಸಿದ್ದ ಅತನು ದಾಸ್ ಪ್ರಿಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದರು. ಈ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು.

ಇದನ್ನೂ ಓದಿ:ವಾರದೊಳಗೆ ಮಂತ್ರಿಗಿರಿ? ಮೋದಿ, ಅಮಿತ್‌ ಶಾ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ಅತನು ದಾಸ್ ಪತ್ನಿ ದೀಪಿಕಾ ಕುಮಾರಿ ಅವರ ಟೋಕಿಯೊ ಒಲಿಂಪಿಕ್ಸ್ ಪ್ರಯಾಣವು ಅಂತ್ಯವಾಗಿದೆ. ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸಿದ್ದರು.

Advertisement

ಡಿಸ್ಕಸ್ ಥ್ರೋ ವಿಭಾಗದಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next