Advertisement

ಮೇ 24ಕ್ಕೆ ಪ್ರಧಾನಿ ನರೇಂದ್ರ ಮೋದಿ ಜಪಾನ್‌ ಭೇಟಿ

11:55 PM Apr 17, 2022 | Team Udayavani |

ಹೊಸದಿಲ್ಲಿ/ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಜಪಾನ್‌ ರಾಜಧಾನಿ ಟೋಕಿಯೋ ದಲ್ಲಿ ನಡೆಯಲಿರುವ ಕ್ವಾಡ್‌ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

Advertisement

ಭೌತಿಕವಾಗಿ ನಡೆಯಲಿರುವ ಈ ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಭಾರತ, ಅಮೆರಿಕ, ಆತಿಥೇಯ ಜಪಾನ್‌ ಸರಕಾರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ಇಂಡೋ-ಫೆಸಿಫಿಕ್‌ ವಲಯದಲ್ಲಿ ಹೆಚ್ಚುತ್ತಿರುವ ಚೀನ ಪ್ರಾಬಲ್ಯ ನಿಯಂತ್ರಿಸುವ ಬಗ್ಗೆ ಅದರಲ್ಲಿ ಪರಾಮರ್ಶೆ ನಡೆಸಲಾಗುತ್ತದೆ.

2017ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಕ್ವಾಡ್‌ ರಾಷ್ಟ್ರಗಳ ಸರಕಾರಿ ಮುಖ್ಯಸ್ಖರು ಖುದ್ದಾಗಿ ಭೇಟಿಯಾಗಿ ಸಭೆ ನಡೆಸುತ್ತಿರುವುದು ಇದು 2ನೇ ಬಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next