Advertisement

ಹಳ್ಳಗಳಿಗೆ ಶೌಚಾಲಯ ನೀರು!

09:47 AM Jul 09, 2019 | keerthan |

ಸುರತ್ಕಲ್‌: ಒಳಚರಂಡಿ ಅಥವಾ ಶೌಚಾಲಯ ಹೊಂಡಗಳಿಂದ ಯಂತ್ರದ ಮೂಲಕ ತೆಗೆಯುವ ತ್ಯಾಜ್ಯವನ್ನು ಟ್ಯಾಂಕರ್‌ನಲ್ಲಿ ತುಂಬಿ ಸಂಸ್ಕರಣಾ ಘಟಕಕ್ಕೆ ತೆಗೆದುಕೊಂಡು ಹೋಗುವುದು ಕ್ರಮ. ಆದರೆ ಟ್ಯಾಂಕರ್‌ ಚಾಲಕನೊಬ್ಬ ಜೋಕಟ್ಟೆ ರಸ್ತೆಯ ಹಳ್ಳಕ್ಕೆ ತ್ಯಾಜ್ಯವನ್ನು ಸುರಿಯುತ್ತಿರುವ ಕೃತ್ಯ ಪತ್ತೆಯಾಗಿದೆ.

Advertisement

ತ್ಯಾಜ್ಯ ಟ್ಯಾಂಕರ್‌ಗಳ ಚಾಲಕರು ನಿಯಮವನ್ನು ಉಲ್ಲಂಸಿ ದಾರಿ ಮಧ್ಯೆ ಸಿಗುವ ಹಳ್ಳಗಳು, ಮೋರಿಗಳ ಬಳಿ ಟ್ಯಾಂಕರ್‌ ನಿಲ್ಲಿಸಿ ಕೊಳಚೆ ತ್ಯಾಜ್ಯವನ್ನು ನಿಯಮ ಬಾಹಿರವಾಗಿ ಬಿಡುತ್ತಿದ್ದಾರೆ. ಇದರಿಂದ ಬಸ್‌, ಮತ್ತಿತರ ವಾಹನಗಳಲ್ಲಿ ಸಂಚರಿಸುವಾಗ ದುರ್ವಾಸನೆ ಬರುತ್ತದೆ ಮಾತ್ರವಲ್ಲ ಪರಿಸರದಲ್ಲಿ ರೋಗ ಹರಡುವಿಕೆಯ ಭೀತಿ ವ್ಯಕ್ತವಾಗಿದೆ.

ನಿಯಮ ಉಲ್ಲಂ ಸಿದ ಟ್ಯಾಂಕರ್‌ನ ಪರವಾನಿಗೆ ರದ್ದು ಪಡಿಸುವಂತೆ ಕೋರಿ ಪರಿಸರ ಮಾಲಿನ್ಯ ನಿಯಂತ್ರಣಾ ಧಿಕಾರಿ ರಾಜಶೇಖರ ಪುರಾಣಿಕ್‌ ಅವರು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರಿಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next