Advertisement

ಶೌಚಾಲಯ ಬಳಕೆ ಮುಖ್ಯ

12:28 PM Oct 06, 2018 | |

ಬೆಂಗಳೂರು: ಕಟ್ಟಿಸಿದ ಶೌಚಾಲಯಗಳನ್ನು ಜನರು ಬಳಕೆ ಮಾಡಿದಾಗ ಮಾತ್ರ ಸರ್ಕಾರದ “ಬಯಲು ಬಹಿರ್ದೆಸೆ ಮುಕ್ತ ರಾಜ್ಯ’ ಎಂಬ ಆಶಯ ಸಾಕಾರಗೊಳ್ಳಲು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

Advertisement

ಯೂನಿಸೆಫ್ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯು ಶುಕ್ರವಾರ ಹಮ್ಮಿಕೊಂಡಿದ್ದ “ಬಯಲು ಬಹಿರ್ದೆಸೆ ಮುಕ್ತ-ಸುಸ್ಥಿರತೆ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಬಯಲು ಬಹಿìದೆಸೆ ಮುಕ್ತ ಗುರಿಯನ್ನು ಸಾಧಿಸಲಿದೆ.

ನಮ್ಮ ಗುರಿಗೆ ಅನುಗುಣವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಾಣ ಆಗಲಿವೆ. ಕೇವಲ ಶೌಚಾಲಯಗಳ ನಿರ್ಮಾಣ ಮಾಡಿದ್ದರಷ್ಟೇ ಗುರಿ ಸಾಧಿಸಿದಂತಾಗುವುದಿಲ್ಲ ಎಂದು ತಿಳಿಸಿದರು.

ಕಟ್ಟಿಸಿದ ಶೌಚಾಲಯಗಳನ್ನು ಬಳಸುವುದು ಮುಖ್ಯ. ಜನರು ಶೌಚಾಲಯಗಳ ಬಳಕೆ ಆರಂಭಿಸಿದಾಗ ಮಾತ್ರ ಯೋಜನೆ ಸಾರ್ಥಕ ಮತ್ತು ಸಾಕಾರಗೊಳ್ಳುತ್ತದೆ. ಈ ದಿಸೆಯಲ್ಲಿ ಜನರ ಆಲೋಚನೆ ಮತ್ತು ಜೀವನ ಶೈಲಿ ಬದಲಾವಣೆ ಆಗಬೇಕಾಗಿದೆ. ಇದಕ್ಕಾಗಿ ಜಾಗೃತಿ ಆಂದೋಲನವನ್ನು ಆಯೋಜನೆ ಅಗತ್ಯ ಎಂದು ಹೇಳಿದರು.

ಗ್ರಾಮೀಣ ಭಾಗಗಳಲ್ಲಿ ಸ್ವತ್ಛತೆಯನ್ನು ಸುಸ್ಥಿರವಾಗಿ ಕಾಪಾಡಲು ಸಂಘಟಿತ ಪ್ರಯತ್ನ ಮುಖ್ಯ. ಇದಕ್ಕಾಗಿ ಹಳ್ಳಿಗಳಲ್ಲಿ ಮೊಬೈಲ್‌ ಬಳಕೆದಾರರ ಒಂದು ವ್ಯವಸ್ಥಿತ ನೆಟ್‌ವರ್ಕ್‌ ರೂಪಿಸಬೇಕಾಗಿದೆ. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ಬಳಕೆದಾರರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ.

Advertisement

ರಾಜ್ಯದ ಎಲ್ಲ ಗ್ರಾಪಂ ಸದಸ್ಯರು ಹಾಗೂ ಅವರ ಸಂಪರ್ಕದಲ್ಲಿರುವ ಮೊಬೈಲ್‌ ಬಳಕೆದಾರರು ಈ ಸ್ವತ್ಛತೆಯ ಅಭಿಯಾನದಲ್ಲಿ ಮೊಬೈಲ್‌ ಮಾಹಿತಿ ಮೂಲಕ ಪಾಲ್ಗೊಂಡರೆ ದೊಡ್ಡ ಪ್ರಮಾಣದಲ್ಲಿ ನಾವು ಜನರನ್ನು ತಲುಪಬಹುದಾಗಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಯೂನಿಸೆಫ್ ಪ್ರತಿನಿಧಿ ಮಿಟಲ್‌ ರೂಸಾಡಿಯಾ, ಕರ್ನಾಟಕ ಸರ್ಕಾರದ ಬಯಲು ಬಹಿರ್ದೆಸೆ ಮುಕ್ತ ಕಾರ್ಯಕ್ರಮಕ್ಕೆ ಯೂನಿಸೆಫ್ ಎಲ್ಲಾ ರೀತಿಯ ನೆರವನ್ನು ನೀಡಲು ಸಿದ್ಧವಿದೆ. ಶೌಚಾಲಯಗಳ ನಿರ್ಮಾಣದ ಜೊತೆಗೆ ಅವುಗಳ ನಿರ್ವಹಣೆಗೂ ಸಹ ಗಮನಹರಿಸಬೇಕು ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಲ್‌.ಕೆ. ಅತೀಕ್‌, ಯೂನಿಸೆಫ್ನ ಪ್ರತಿನಿಧಿ ಸುಜೊಯ್‌ ಮುಜುಂದಾರ್‌, ಇಲಾಖೆಯ ಆಯುಕ್ತ ಡಾ.ಆರ್‌. ವಿಶಾಲ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next