Advertisement

ಬಡಕುಟುಂಬಗಳಿಗೆ ಶೌಚಾಲಯ ಹಸ್ತಾಂತರ

11:07 AM May 13, 2019 | Suhan S |

ಮಹಾನಗರ, ಮೇ 12: ಲಯನ್ಸ್‌ ಕ್ಲಬ್‌ ಮಂಗಳೂರು ವತಿಯಿಂದ ಶೌಚ್ ಕಾರ್ಯಕ್ರಮದ ಮೂಲಕ ಉಳ್ಳಾಲ ನಗರ ಸಭೆಯ ಕೋಡಿ ವಾರ್ಡ್‌ನಲ್ಲಿ ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವ ನಾಲ್ಕು ಕುಟುಂಬಗಳಿಗೆ ನಾಲ್ಕು ಶೌಚಾಲ ಯಗಳನ್ನು ನಿರ್ಮಿಸಿ ಉದ್ಘಾಟಿಸಿ ಹಸ್ತಾಂತ ರಿಸಲಾಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಲಯನ್ಸ್‌ ಜಿಲ್ಲೆ 317ಡಿಯ ಗವರ್ನರ್‌ ದೇವದಾಸ್‌ ಭಂಡಾರಿ, ಶೌಚಾಲಯವು ಮನುಷ್ಯನ ಮೂಲ ಸೌಕರ್ಯಗಳಲ್ಲಿ ಒಂದಾಗಿರುತ್ತದೆ. ಇದನ್ನು ಅಗತ್ಯವುಳ್ಳವರಿಗೆ ನಿರ್ಮಿಸಿಕೊಟ್ಟಿರುವುದು ಅತ್ಯುತ್ತಮ ಸೇವೆ ಎಂದು ಹೇಳಿದರು.

ಈ ಸಂದರ್ಭ ಕಾರ್ಮಿಕ ವಿಭಾಗದ ವೆಚ್ಚವನ್ನು ಉಚಿತವಾಗಿ ನೀಡಿದ ಗುತ್ತಿಗೆದಾರ ಆಸಿಕ್‌ ಅವರನ್ನು ಸಮ್ಮಾನಿ ಸಲಾಯಿತು.

ಜಿಲ್ಲೆಯ ಸಂಪುಟ ಕಾರ್ಯದರ್ಶಿ ಬಾಲಕೃಷ್ಣ ಹೆಗ್ಡೆ, ಲಯನ್ಸ್‌ ಗವರ್ನರ್‌ ಸಂಯೋಜಕಿ ಸೌಮ್ಯಾ ಶೆಟ್ಟಿ, ಕಾರ್ಯದರ್ಶಿ ಹೇಮ ರಾವ್‌, ಖಜಾಂಚಿ ಮನೋಹರ್‌ ಶೆಟ್ಟಿ, ಲಯನೆಸ್‌ ಅಧ್ಯಕ್ಷೆ ಜ್ಯೋತಿ ಎಂ. ಶೆಟ್ಟಿ, ನ್ಯಾನ್ಸಿ ಮಸ್ಕರೇನ್ಹಸ್‌, ಗುರುಪ್ರೀತ್‌ ಆಳ್ವ, ಗೋವರ್ಧನ್‌ ಶೆಟ್ಟಿ, ಎಸ್‌.ಎಸ್‌. ಪೂಜಾರಿ, ಸುಧಾಮ ರೈ ಉಪಸ್ಥಿತರಿದ್ದರು. ಲಯನ್ಸ್‌ ಕ್ಲಬ್‌ ಮಂಗಳೂರು ಅಧ್ಯಕ್ಷ ವಿಜಯ ವಿಷ್ಣು ಮಯ್ಯ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next