Advertisement
ಜೂ. 18ರ ಬೆಳಗ್ಗೆ 8 ಗಂಟೆಯ ಸುಮಾರಿಗೆ ನೇತ್ರಾವತಿ ಅವರು ಮಗು ಶಾನ್ಯಾಳಿಗೆ ಎದೆ ಹಾಲು ಕುಡಿಸಿ ಕೊಠಡಿಯಲ್ಲಿ ಮಲಗಿಸಿ ಹೊರಗೆ ಬಂದಿದ್ದರು. ಸ್ವಲ್ಪ ಸಮಯದ ಬಳಿಕ ನೇತ್ರಾವತಿಯವರ ತಂದೆ ಲಕ್ಷ್ಮಣ ಅವರು ಮಗುವನ್ನು ನೋಡಲು ಕೊಠಡಿಗೆ ಹೋದಾಗ ಮಗು ಉಸಿರಾಡದೇ, ಮೈ ತಣ್ಣಗಾಗಿರುವುದು ಕಂಡು ಬಂದಿತ್ತು. ಮುಟ್ಟಿದಾಗಲೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಲಕ್ಷ್ಮಣ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ಮಹಿಳೆ ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಸಾವನ್ನಪ್ಪಿದ ಘಟನೆ ಗಂಗೊಳ್ಳಿ ಗ್ರಾಮದ ಇಂಧುದರ ದೇವಸ್ಥಾನದ ಬಳಿ ಜೂ. 19ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದೆ. ಗಂಗೊಳ್ಳಿಯ ನಿವಾಸಿ ಸವಿತಾ (28) ಸಾವನ್ನಪ್ಪಿದವರು. ಅವರು ಬೆಳಗ್ಗೆ 9.45ರ ಸುಮಾರಿಗೆ ಎಸ್.ವಿ. ಅಂಗನವಾಡಿಯಿಂದ ಮಗಳನ್ನು ವಾಪಸು ಕರೆದುಕೊಂಡು ಬರುತ್ತಿರುವಾಗ ಇಂಧುದರ ದೇವಸ್ಥಾನದ ಬಳಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಆ ಕೂಡಲೇ ಅವರನ್ನು ಗಂಗೊಳ್ಳಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರ ಸೂಚನೆಯಂತೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು, ಸವಿತಾ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
Related Articles
Advertisement
ಇದನ್ನೂ ಓದಿ: Tragedy: ಭದ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗ ಮೂಲದ ಮೂವರು ನೀರುಪಾಲು