Advertisement

ಪ್ರಬುದ್ಧ ಭಾರತ ನಿರ್ಮಾಣ ಇಂದಿನ ಅಗತ್ಯ

09:52 PM Apr 28, 2019 | Lakshmi GovindaRaju |

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆದು ಪ್ರಬುದ್ದ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್‌ ಕುಮಾರ್‌ ಹೇಳಿದರು.

Advertisement

ತಾಲೂಕಿನ ಬೇಡರಪುರ ಸಮೀಪವಿರುವ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಹಾಗೂ ಆಕೃತಿ -2019ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ನಮ್ಮದು ಎಂಬ ರಾಷ್ಟ್ರ ಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ದೇಶದಲ್ಲಿ ವರ್ಷಪೂರ್ತಿ ಸ್ಮರಣೆ ಮಾಡುವ ವ್ಯಕ್ತಿ ಇದ್ದರೆ ಅದು ಅಂಬೇಡ್ಕರ್‌ ಮಾತ್ರ. ಅಂಬೇಡ್ಕರ್‌ ಜಯಂತಿ, ಅಂಬೇಡ್ಕರ್‌ ಪರಿನಿಬ್ಟಾಣ ದಿನ, ಅವರು ಬೌದ್ಧ ಧರ್ಮಕ್ಕೆ ಸೇರಿದ ದಿನ, ಪುಸ್ತಕ ದಿನ, ಜ್ಞಾನ ದಿನ, ಸಂವಿಧಾನ ಅಂಗೀಕಾರವಾದ ದಿನ ಸೇರಿದಂತೆ ಹಲವಾರು ದಿನಗಳನ್ನು ಆಚರಿಸುವ ಮೂಲಕ ಅಂಬೇಡ್ಕರ್‌ ಸ್ಮರಣೆ ವರ್ಷಪೂರ್ತಿ ಮಾಡಲಾಗುತ್ತಿದೆ. ಅಲ್ಲದೇ ವಿಚಾರ ಸಂಕಿರಣಗಳನ್ನು ನಡೆಸಿ ಶ್ಲಾಘನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ಶೇ. 3ರಷ್ಟು ಶಿಕ್ಷಣ ಪ್ರಮಾಣವಿದ್ದಾಗ ವಿಶ್ವದ ಹಲವಾರು ದೇಶಗಳ ಸಂವಿಧಾನವನ್ನು ಕರಗತ ಮಾಡಿಕೊಂಡು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಟ್ಟ ಮಹಾನ್‌ ಜ್ಞಾನಿ ಅಂಬೇಡ್ಕರ್‌. ದೇಶದ ಜನರಿಗಾಗಿ ಮತದಾನದ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ರಾಜಕೀಯ ಹಕ್ಕು , ಮಹಿಳೆಯರಿಗೆ ಸಮಾನತೆಯ ಹಕ್ಕುಗಳ ಕೊಡುಗೆಯನ್ನು ನೀಡಿದ್ದಾರೆ.

ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಂಬೇಡ್ಕರ್‌ರಂತೆ ಜ್ಞಾನವನ್ನು ಪಡೆದು ಪ್ರಬುದ್ಧ ಭಾರತ ಸ್ಥಾಪನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯ ಬಹದ್ದೂರ್‌ ಇನ್ಸ್‌ಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಡೀನ್‌ ಪ್ರೊ. ಡಿ. ಆನಂದ್‌ ಮಾತನಾಡಿ, ದೇಶದ ಎಲ್ಲಾ ಸಮಸ್ಯೆಗಳಿಗೂ ತಾತ್ವಿಕ ಪರಿಹಾರವನ್ನು ಸೂಚಿಸಿದ ಮಹಾನ್‌ ಮನವತಾವಾದಿ ಅಂಬೇಡ್ಕರ್‌ ಎಂದು ಹೇಳಿದರು.

Advertisement

ದೇಶ, ದೇಶದ ಭವಿಷ್ಯ ನನ್ನದು ಎಂದು ತಿಳಿದುಕೊಂಡಾಗ ದೇಶದ ಬದಲಾವಣೆ, ಸಮಾಜದ ಬದಲಾವಣೆ ಸಾಧ್ಯವಾಗುತ್ತದೆ ಇದು ಯುವಕರಿಂದ ಸಾಧ್ಯ. ದೇಶದ ಸಂಪತ್ತು ಯುವಜನಾಂಗ. ದೇಶದಲ್ಲಿ ಅಸಹನೆ, ಅಸಮಾನತೆ, ಹಿಂಸಾಚಾರ ನಾಶವಾಗಬೇಕು ಇಲ್ಲದಿದ್ದರೆ 2030ರ ವರಗೆ 2ನೇ ಸೂಪರ್‌ ಪವರ್‌ ಹೊಂದಿರುವ ದೇಶವಾಗಲು ಸಾಧ್ಯವಿಲ್ಲ ಆದ್ದರಿಂದ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಡಾ. ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೌರವ ಪ್ರಾಧ್ಯಾಪಕ ಪ್ರೊ. ಕೃಷ್ಣಮೂರ್ತಿ ಹನೂರು, ಪ್ರೊ. ಎಚ್‌.ಎನ್‌. ರಾಮಸ್ವಾಮಿ, ಪ್ರೊ. ಕೆ.ಪಿ. ಪರಮಶಿವಯ್ಯ, ಉದ್ಧಮ್‌ ಟ್ರಸ್ಟ್‌ ಅಧ್ಯಕ್ಷೆ ಸುಜಿನಿ ಅರಸ್‌, ಉಪನ್ಯಾಸಕ ಬಸವಣ್ಣ ಇದ್ದರು.

ಅಂಬೇಡ್ಕರ್‌ ಅವರನ್ನು ಸಾಮಾನ್ಯವಾಗಿ ನೋಡಿದಾಗ ಅಂಬೇಡ್ಕರ್‌ ಅವರ ತತ್ವಾದರ್ಶಗಳು ಪಾಲನೆಯಾಗುತ್ತವೆ. ತಮ್ಮಲ್ಲಿದ್ದ ಕುತೂಹಲದಿಂದ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ಕಂದಾಚಾರಗಳನ್ನು ವಿರೋಧಿಸಿ ಸಮಂಜಸವಾದ ಉತ್ತರವನ್ನು ಅಂಬೇಡ್ಕರ್‌ ನೀಡಿದರು.
-ಪ್ರೊ. ಡಿ. ಆನಂದ್‌, ಬಹದ್ದೂರ್‌ ಇನ್ಸ್‌ಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಡೀನ್‌

Advertisement

Udayavani is now on Telegram. Click here to join our channel and stay updated with the latest news.

Next