ಕೆ.ಆರ್.ಪೇಟೆ: ದೇಶದ ಪ್ರಧಾನ ಮಂತ್ರಿಗಳಾಗಿ ವಿಶ್ವವೇ ಮೆಚ್ಚುವಂತಹ ಕಾರ್ಯ ಮಾಡುತ್ತಿರುವ ನರೇಂದ್ರಮೋದಿಯವರು ಮತ್ತೂಮ್ಮೆ ದೇಶದ ಪ್ರಧಾನ ಮಂತ್ರಿಗಳಾ ಗಬೇಕು ಎಂದು ಯುವಜನತೆ ಸೇರಿದಂತೆ ಎಲ್ಲರ ಆಶಯವಾಗಿದ್ದು ಅದಕ್ಕಾಗಿ ಮೋದಿ ಯವರು ಸಾಧನೆಗಳ ಕಿರುಹೊತ್ತಿಗೆಯನ್ನು ಹೊಂದಿರುವ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಮಂಗಳವಾರ, ಬುಧವಾರ ಎರಡು ದಿನಗಳಕಾಲ ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಮಂಡ್ಯ ಜಿಲ್ಲೆಯ ಟೀಮ್‌ಮೋದಿ ತಂಡದ ಸದಸ್ಯ ಪ್ರಮೋದ್ ತಿಳಿಸಿದ್ದಾರೆ.
ಮೋದಿ ಪ್ರಧಾನ ಮಂತ್ರಿಗಳಾದ ಮೇಲೆ ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ ಗಣಿನೀಯವಾಗಿ ಕಡಿಮೆಯಾಗಿದೆ. ಪಾಕಿಸ್ತಾನದ ವಿರುದ್ಧ ಸರ್ಜಿಲಕ್‌ಸ್ಟ್ರೈಕ್ ಮತ್ತು ನೋಟು ಅಮಾನ್ಯ ಎರಡು ರೀತಿಯ ದಾಳಿಮಾಡಿದ್ದರಿಂದ ಪಾಕಿಸ್ತಾನ ನಮ್ಮ ದೇಶವನ್ನು ಎದುಸಿರಲಾಗಿದೆ ಮೂಲೆ ಸೇರುವಂತೆ ಮಾಡಿದ್ದಾರೆ.
ಮಾತೆಯರು ಗೌರವದಿಂದ ಶೌಚಾಲಯ ಬಳಸುವಂತೆ ಕ್ರಾಂತಿ, ಉಚಿತ ಅಡುಗೆ ಅನಿಲ ಸಂಪರ್ಕ, ಆರೋಗ್ಯ ಕಾರ್ಡ್ ಸೇರಿದಂತೆ ಬಡಕು ಟುಂಬಗಳಿಗೆ ಹತ್ತಾರು ಯೋಜನೆಗಳನ್ನು ತಂದಿದ್ದಾರೆ. ವಿಶ್ವದ ಬಲಿಷ್ಠ ದೇಶಗಳನ್ನು ನಮ್ಮ ಸ್ನೇಹವನ್ನು ಬಯಸುವಂತೆ ಮಾಡಿರುವ ಮೋದಿಯವರು ಮತ್ತೂಮ್ಮೆ ಪ್ರಧಾನಿ ಯಾಗಬೇಕು ಎಂದು ಉದ್ದೇಶದಿಂದ ನಾವುಗಳು ಪಕ್ಷಾತೀತವಾಗಿ ಮೋದಿ ಟೀಮ್ ರಚಿಸಿಕೊಂಡು ರಾಜ್ಯದಲ್ಲಿ ರಥಯಾತ್ರೆ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಮದ್ದೂರಿನಿಂದ ಚಾಲನೆ: ಮತ್ತೂಮ್ಮೆ ಮೋದಿ ರಥ 29 ಮಂಗಳವಾರ ಬೆಳಗ್ಗೆ 9 ಗಂಟೆಗೆ ಮದ್ದೂರು ತಲುಪಿ ಸಾರ್ವಜನಿಕ ಪ್ರದರ್ಶನ ನೀಡಿದ ನಂತರ 11 ಗಂಟೆಗೆ ಮಂಡ್ಯ, 1.30 ಗಂಟೆಗೆ ಕೆರಗೋಡು, 3 ಗಂಟೆಗೆ ಬಸರಾಳು, 4 ಗಂಟೆಗೆ ನಾಗಮಂಗಲ, 5.30 ಗಂಟೆಗೆ ಬೆಳ್ಳೂರು, 7 ಗಂಟೆಗೆ ಕೆ.ಆರ್.ಪೇಟೆ ತಲುಪಲಿದೆ.
30 ನೇ ಬುಧವಾರ 9 ಗಂಟೆಗೆ ಹರಳಕುಪ್ಪೆ, 10 ಗಂಟೆಗೆ ಕ್ಯಾತನಹಳ್ಳಿ, 10.15 ಗಂಟೆಗೆ ಪಾಂಡವಪುರ, 12.30 ಗಂಟೆಗೆ ಶ್ರೀರಂಗಪಟ್ಟಣ, 2 ಗಂಟೆಗೆ ಅರಕೆರೆ, 3.30 ಗಂಟೆಗೆ ಬನ್ನೂರು, 5 ಗಂಟೆಗೆ ಕಿರಗಾವಲು, 7 ಗಂಟೆಗೆ ಮಳವಳ್ಳಿ ತಲುಪಲಿದೆ. ಎಲ್ಲಾ ಸ್ಥಳಗಳಲ್ಲಿಯೂ ಮೋದಿ ಸಾಧನೆಗಳನ್ನು ಸಾರ್ವಜನಿಕರ ಪ್ರದರ್ಶನವನ್ನು ನೀಡಲಾ ಗುತ್ತದೆ ಎಂದು ಪ್ರಮೋದ್ ತಿಳಿಸಿದರು.
ಆಧುನಿಕ ಸ್ಪರ್ಶ ಹೊಂದಿರುವ ರಥ: ಮತ್ತೂಮ್ಮೆ ಮೋದಿ ರಥಯಾತ್ರಗೆ ಸಿದ್ಧಪಡಿಸಿರುವ ರಥವನ್ನು ಆತ್ಯಾಧುನಿಕವಾಗಿ ಸಿದ್ಧಪಡಿಸಲಾಗಿದ್ದು, ವಾಹನದಲ್ಲಿ ದೊಡ್ಡ ಟಿ.ವಿ. ಪರದೆ ಇದ್ದು ಮೋದಿಯವರ ಸಾಧನೆಯನ್ನು ವಿಡಿಯೋ ಚಿತ್ರ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ.
ಪೂರ್ಣ ವಿದ್ಯುತ್ ವ್ಯವಸ್ಥೆ ಮಾಡಿರುವುದರಿಂದ ರಾತ್ರಿ ವೇಳೆಯಲ್ಲಿಯೂ ಸಾರ್ವಜನಿಕರನ್ನು ಆಕರ್ಷಿಸುವ ಜೊತೆಗೆ ಮೋದಿಯವರು ಸಾಧನೆಯನ್ನು ಜನರಿಗೆ ತಲುಪಿಸುವಂತೆ ರಥದಲ್ಲಿಯೇ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಮೋದ್ ತಿಳಿಸಿದ್ದಾರೆ.