Advertisement

ಕಾರ್ಮಿಕರ ಹಿತಾಸಕ್ತಿ ಸಂರಕ್ಷಣೆಯಾಗಲಿ

10:22 AM May 01, 2019 | Naveen |

ಮೇ 1 ವಿಶ್ವಾದ್ಯಂತ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಕ್ಷೇಮಾಭ್ಯುದಯ, ಉನ್ನತಿಗಾಗಿ ಈ ದಿನವನ್ನು ಮೀಸಲಿಡಲಾಗುತ್ತದೆ.

Advertisement

ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡುವುದಕ್ಕಾಗಿ ಕಾರ್ಮಿಕರ ದಿನವನ್ನು ವಿಶ್ವಾದ್ಯಂತ ಆಚರಿಸ ಲಾಗುತ್ತಿದೆ. ದಿನದಲ್ಲಿ ಸುಮಾರು ಹತ್ತರಿಂದ ಹದಿ ನೆಂಟು ಗಂಟೆ ಕಾಲ ಕೆಲಸ ಮಾಡುವ ಶ್ರಮಿಕ ವರ್ಗದ ಕ್ಷೇಮಾಭ್ಯುದಯಕ್ಕಾಗಿ ಈ ಆಚರಣೆ ಜಾರಿಗೆ ಬಂದಿತು.

ಕೇವಲ ದಿನವಲ್ಲ, ಬಲಿದಾನ
ಮೇ 1ರಂದು ಕಾರ್ಮಿಕರ ದಿನವನ್ನಾಗಿ ಆಚರಣೆ ಮಾಡಲು ಒಂದು ಬಲವಾದ ಉದ್ದೇಶ, ಅದರ ಹಿಂದೆ ಬಲಿದಾನವಿದೆ. 1886 ರಲ್ಲಿ ಜಿನೇವಾದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕರ ಸಮ್ಮೇಳನದಲ್ಲಿ ಕಾರ್ಮಿಕರ ಕ್ಷೇಮಾಭ್ಯುದಯ ಹಾಗೂ ಜೀವನ ಭದ್ರತೆಯ ಬಗ್ಗೆ ಬಲವಾಗಿ ಪ್ರತಿಪಾದಿಸಲಾಯಿತು. ಇನ್ನು ಕಾರ್ಲ್ಮಾಕ್ಸ್‌, ಏಂಗೇಲ್ಸ್ ಅವರು ವಾದಿಸಿದ್ದ, ಪ್ರತಿಯೊಬ್ಬ ಕಾರ್ಮಿಕ ದಿನದಲ್ಲಿ 8 ಗಂಟೆಗಳು ಮಾತ್ರ ಕೆಲಸ ನಿರ್ವಹಿಸಬೇಕೆಂಬುದು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ನೀತಿಯನ್ನು ಕಡ್ಡಾಯ ಕಾನೂನುನಾಗಿ ತರಬೇಕು ಎಂದು ಒಕ್ಕೂರಲಿನ ಅಭಿಪ್ರಾಯಕ್ಕೆ ಬರಲಾಯಿತು. ಈ ಸಂಬಂಧವಾಗಿ ಸುಮಾರು 60 ಕಾರ್ಮಿಕ ಸಂಘಟನೆಗಳು ಹಾಗೂ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೂಡ ಒಪ್ಪಿಕೊಂಡರು. ಕಾರ್ಮಿಕರ ಭದ್ರತೆ ಹಾಗೂ ಕ್ಷೇಮವನ್ನು ಕಡೆಗಣಿಸ ಲಾಗಿತ್ತು. ಅಲ್ಲದೇ ಸುಮಾರು ದಿನದ 24 ಘಂಟೆ ಗಳಲ್ಲಿ ಹೆಚ್ಚಿನ ಅನಿರ್ಧಿಷ್ಟ ಅವಧಿಯವರೆಗೆ ದುಡಿಸಿಕೊಳ್ಳಲಾಗಿತ್ತು.

ಇದರ ವಿರುದ್ಧವಾಗಿ ಅಮೆರಿಕದ ಕಾರ್ಮಿಕರು ಬಂಡಾಯವೆದ್ದರು. 1886ರ ಮೇ 1 ರಂದು ಚಿಕಾಗೋದ ಹೇ ಮಾರ್ಕೇಟ್ ಸ್ಕೈರ್‌ನಲ್ಲಿ ಕಾರ್ಮಿಕರು ಬೀದಿಗಿಳಿದು ದಿನಕ್ಕೆ 8 ಘಂಟೆ ಅವಧಿ ಮಾತ್ರ ಕಾರ್ಮಿಕರು ದುಡಿಯುವ ಅವಧಿಯ ಕಾನೂನಿನ ಜಾರಿಗೆ ಬೀದಿಗಿಳಿದು ಪ್ರತಿಭಟಿಸಿದರು. ಹೋರಾಟ ತೀವ್ರಗೊಂಡಿತು. ಅಲ್ಲಿನ ಬಂಡವಾಳಶಾಹಿಗಳು ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಪೊಲೀಸ್‌ ವ್ಯವಸ್ಥೆಯನ್ನು ಬಳಸಿಕೊಂಡರು. ಪೊಲೀಸರು ಹಾಗೂ ಕಾರ್ಮಿಕರು ನಡುವಿನ ಹೋರಾಟದ ಮುಸುಕಿನ ಗುದ್ದಾಟದಲ್ಲಿ ಮುಂದೆ ಬಂದೂಕಿನ ನಳಿಕೆಯನ್ನು ಸಿಡಿಯುವಂತೆ ಮಾಡಿ, ಸುಮಾರು ನೂರಕ್ಕೂ ಹೆಚ್ಚು ಕಾರ್ಮಿಕರು ಹತರಾದರೂ. ಕಾರ್ಮಿಕ ಮುಖಂಡರಾದ ಅಲ್ಬರ್ಟ್‌ ಪಾರ್ಸ್‌ನ್ಸ್‌ ಹಾಗೂ ಆಗಸ್ಟ್‌ ಸ್ಪೈಸ್‌ ರ ಮೇಲೆ ಸರ್ಕಾರವು ಖೊಟ್ಟಿ ಕೇಸ್‌ ದಾಖಲಿಸಿ ಅವರಿಗೆ ಜೀವಾವಧಿ ಶಿಕ್ಷೆ‌್ಷಯನ್ನು ವಿಧಿಸಿತು. ಕಾರ್ಮಿಕರ ಈ ಬಲಿದಾನ ದಿನವಾಗಿ ಮೇ 1 ರಂದು ಜಗತ್ತಿನಾದ್ಯಂತ ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ.

ಕಾರ್ಮಿಕ ವಿವಿಧ ಸಂಘಟನೆ
ಭಾರತದಲ್ಲಿ ಕಾರ್ಮಿಕ ಚಳವಳಿ ಪ್ರಖರಗೊಂಡ ಬಳಿಕ ಅನೇಕ ಸಂಘಟನೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಇಂಡಿಯನ್‌ ನ್ಯಾಶನಲ್ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌, ಆಲ್ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌, ಹಿಂದ್‌ ಮುಜ್ದೂರ್‌ ಸಂಘ, ಭಾರತೀಯ ಮುಜ್ದೂರ್‌ ಸಂಘ, ಸಿಐಟಿಯು, ಯುಟಿಟಿಸಿ, ಹಾಗೂ ಕರ್ನಾಟಕ ಟ್ರೇಡ್‌ ಯೂನಿಯನ್‌ ಸೆಂಟರ್‌ನಂತ ಇನ್ನು ಹಲವು ಸಂಘಟನೆಗಳು ಇಂದಿಗೂ ಕಾರ್ಮಿಕರ ಹಕ್ಕು ಬಾದ್ಯತೆಗಳ ಹಾಗೂ ಕಾರ್ಮಿಕರನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿವೆ.

Advertisement

ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ರಕ್ಷಣೆ, ಹಿತಾಸಕ್ತಿ ಕಾಪಾಡುವ ಸಲುವಾಗಿಯೇ ಹಲವಾರು ಕಾಯ್ದೆ ಕಾನೂನುಗಳನ್ನು ರಚಿಸಲಾಗಿದೆ.

ಪ್ರಸ್ತುತ ಸ್ಥಿತಿಗತಿ
ಕಾಲ ಬದಲಾದಂತೆ ಪರಿಸ್ಥಿತಿಗಳು ಬದಲಾಗಿವೆ. ಶ್ರಮಿಕ ವರ್ಗ ಆಚರಿಸಬೇಕಾಗಿದ್ದ ಈ ದಿನ ಕೇವಲ ಕಚೇರಿ ಕೆಲಸಗಾರರಿಗೆ ಸೀಮಿತವಾಗಿದೆ. ಯಾರು ದಿನಪೂರ್ತಿ ಬಿಸಿಲಿನಲ್ಲಿ ಒಣಗುತ್ತಾರೋ, ಯಾರು ಬೆವರು ಸುರಿಸಿ, ದೈಹಿಕ ಶ್ರಮದೊಂದಿಗಿನ ಬದುಕನ್ನು ನೆಚ್ಚಿಕೊಂಡಿದ್ದಾರೋ ಅವರು ದಿನದ 365 ದಿನವೂ ದುಡಿದು ಜೀವನ ನಡೆಸಬೇಕಾದ ಸ್ಥಿತಿಯಿದೆ.

ಭುವನ ಬಾಬು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next