Advertisement

ನಿಮ್ಮ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ಇಂದು ಮಂಗಲ ಕಾರ್ಯದ ಶುಭವಾರ್ತೆ

07:56 AM Jan 09, 2021 | Team Udayavani |

09-01-2021

Advertisement

ಮೇಷ: ಸ್ಥಾನ ಪ್ರಾಪ್ತಿಯೂ, ಮುಂಭಡ್ತಿಯು ದೊರಕುವುದರಿಂದ ಕೊಂಚ ನೆಮ್ಮದಿ ಕಂಡುಬರಲಿದೆ. ಸೋದರ ವರ್ಗದವರೊಡನೆ ಮನಸ್ತಾಪ ಕಂಡುಬಂದೀತು. ಬಂಧುವರ್ಗದವರಿಗೆ ಉಪಕಾರ ಮಾಡುವಿರಿ.

ವೃಷಭ: ಕಾರ್ಯ ಹೊರೆಯಿಂದ ಬೇಸರ, ಅಪವಾದದ ಭಯ ಕಂಡುಬಂದೀತು. ಸಾಹಸ ಪ್ರವೃತ್ತಿಯವರಿಗೆ ಸೂಕ್ತ ಅವಕಾಶ ಕಂಡುಬಂದೀತು. ಎಚ್ಚರ ತಪ್ಪಿದ್ದಲ್ಲಿ ಪತನ ಭಯವೂ ಕಂಡುಬಂದೀತು. ಶುಭವಾರ್ತೆ.

ಮಿಥುನ: ದೂರ ಪ್ರಯಾಣದಿಂದ ಆರೋಗ್ಯ ಹಾನಿ ಹಾಗೂ ಖರ್ಚಿನ ಬಾಬ್ತು ಹೆಚ್ಚು ಕಂಡುಬಂದೀತು. ಗೆಳೆತನದ ಸಹಾಯಹಸ್ತ ಕಂಡುಬರುವುದು. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾದೀತು. ಮಕ್ಕಳಿಂದ ಸಂತೋಷ.

ಕರ್ಕ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ವಿಳಂಬದಿಂದ ತೊಂದರೆ. ಕೃಷಿ ಕಾರ್ಯಕ್ಕೆ ಭಂಗ ಕಂಡುಬರಲಿದೆ. ಬರಬೇಕಾದ ಹಣವು ನಿಧಾನವಾದರೂ ಕೈಗೆ ಬರುವುದು. ಜಗಳ, ವಿವಾದಗಳ ಸಹವಾಸಕ್ಕೆ ಹೋಗದಿರುವುದು.

Advertisement

ಸಿಂಹ: ಆರೋಗ್ಯ ಹಾಗೂ ಮಾನಸಿಕವಾಗಿ ತುಂಬಾ ಚಿಂತೆಗೊಳಗಾಗಿರುವಿರಿ. ಶುಭ ಕಾರ್ಯ, ಧರ್ಮಕಾರ್ಯ ಗಳಲ್ಲಿ ವಿಘ್ನ ಕಂಡುಬರಲಿದೆ. ಅಧಿಕಾರಿ ವರ್ಗದವರಿಂದ ಕಿರಿಕಿರಿ ತೋರಿಬಂದು ಅಸಮಾಧಾನವಾದೀತು.

ಕನ್ಯಾ: ಮೋಸದ ವ್ಯವಹಾರದವರ ವ್ಯೂಹದಿಂದ ಹೊರಗೆ ಬರುವುದು ಉತ್ತಮ. ನೀವು ಸಿಕ್ಕಿ ಹಾಕಿಕೊಳ್ಳುವಿರಿ. ಹಣದ ಮುಗ್ಗಟ್ಟು ಕಾಡುತ್ತಿದ್ದರೂ ಸ್ಥಾನಮಾನಕ್ಕೆ ಸ್ಥಿರತೆ ಇರುವುದು. ಯಾತ್ರೆಯ ಸಂಭವವಿದೆ.

ತುಲಾ: ದೇಹಾರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ. ಪ್ರವಾಸದಿಂದ ನಿರೀಕ್ಷೆಗೆ ಮೀರಿ ಖರ್ಚು ಬಂದೀತು. ಆದರೂ ಸಂತೃಪ್ತಿ ಇದೆ. ಅವಿವಾಹಿತರಿಗೆ ಮಂಗಲ ಕಾರ್ಯದ ಶುಭವಾರ್ತೆ. ಸಂತಾನ ಲಾಭ ಕಂಡುಬರುವುದು.

ವೃಶ್ಚಿಕ: ಮುಂಗೋಪವನ್ನು ಕಡಿಮೆ ಮಾಡಿಕೊಳ್ಳಿರಿ. ಪೋಷಕರ ಆರೋಗ್ಯಕ್ಕಾಗಿ ಖರ್ಚು ಬರಲಿದೆ. ಭಡ್ತಿಯ ಸಂಭವವೂ ದೂರವಾದೀತು. ಮಂಗಲ ಕಾರ್ಯದ ಸಂಭ್ರಮ ತಂದೀತು. ಹಿತಶತ್ರುಗಳಿಂದ ದೂರವಿರಿ.

ಧನು: ಕ್ಷುಲ್ಲಕ ವಿಷಯಕ್ಕಾಗಿ ಜಗಳ ಮಾಡಿ ಸಂಬಂಧವನ್ನು ಕೆಡಿಸಿಕೊಳ್ಳದಿರಿ. ತೂಕತಪ್ಪಿ ಮಾತನಾಡದಿರುವುದೇ ಲೇಸು. ಧಾರ್ಮಿಕ ಪ್ರಕ್ರಿಯೆಗಳಿಗೆ ವಿಘ್ನ ಮೂಡಿ ಬಂದು ನಿಶ್ಚಿತ ಸಮಯದಲ್ಲಿ ನಡೆಯಲಾರದು.

ಮಕರ: ಕಲಾವಿದರಿಗೆ ಸಾಫ‌ಲ್ಯವಿದೆ. ಆದರೂ ಯೋಗ್ಯ ಪುರಸ್ಕಾರ ದೊರೆಯದು. ವೈವಾಹಿಕ ಹಾಗೂ ಮಂಗಲ ಕಾರ್ಯ ಮುಂದೆ ಹೋಗಲಿದೆ. ದೀರ್ಘ‌ಕಾಲೀಕ ಧನವಿನಿಯೋಗ ಸಾಫ‌ಲ್ಯ ತಂದುಕೊಡಲಿದೆ. ಆಕಸ್ಮಿಕ ಪ್ರಯಾಣವಿದೆ.

ಕುಂಭ: ಕರ ಸಂದಾಯದ ಚಿಂತೆಯಿದ್ದರೂ ಗೃಹಕೃತ್ಯದಲ್ಲಿ ತೃಪ್ತಿ ಇದೆ. ಉಷ್ಣಭಾದೆಯಿಂದಲೋ,ರಕ್ತದೋಷದಿಂದಲೋ ಆರೋಗ್ಯ ಹಾನಿಯಿದೆ. ಹೊಸದಾಗಿ ಉದ್ಯೋಗ ಪ್ರಾಪ್ತಿ ಸಂಭವವಿದೆ. ದೂರದೂರಿಗೆ ಪ್ರಯಾಣವಿದೆ.

ಮೀನ: ಕಾರ್ಯಬಾಹುಳ್ಯದಿಂದ ದೇಹಭಾದೆ, ಶಿಕ್ಷಣಕ್ಕಾಗಿ ಧನವಿನಿಯೋಗ, ಗೃಹ ಪರಿಹಾರಕ್ಕಾಗಿ ಖರ್ಚು ಹೆಚ್ಚಲಿದೆ. ನೆಂಟರಿಷ್ಟರ ಆಗಮನದಿಂದ ಕೊಂಚ ಸಂತಸವಿದ್ದರೂ ಬೇಡಿಕೆಗೂ, ಪೂರೈಕೆಗೂ ಅಜಗಜಾಂತರ. ಚಿಂತೆ ತಪ್ಪದು.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next