Advertisement

Horscope: ಅವಿವಾಹಿತ ಯುವಜನರಿಗೆ ವಿವಾಹ ಯೋಗ

07:43 AM Aug 27, 2024 | Team Udayavani |

ಮೇಷ: ಉದ್ಯಮ ಸ್ಥಾನದಲ್ಲಿ ವ್ಯವಸ್ಥೆ ಪರಿಷ್ಕರಣೆ. ಉದ್ಯೋಗ ಸ್ಥಾನದಲ್ಲಿ ಉತ್ಸಾಹದ ಅನುಭವ.ಅವಿವಾಹಿತ ಯುವಜನರಿಗೆ ವಿವಾಹ ಯೋಗ. ವ್ಯವಹಾರ ಸಂಬಂಧ ತಿರುಗಾಟ.ಹಿರಿಯರು ಮತ್ತು ಗೃಹಿಣಿಯರಿಗೆ ಉಲ್ಲಾಸ.

Advertisement

ವೃಷಭ: ಉದ್ಯೋಗ ಅರಸುತ್ತಿರುವವರಿಗೆ ಶುಭವಾರ್ತೆ. ಹಿರಿಯರ ಆರೋಗ್ಯ ಕ್ಷಿಪ್ರ ಸುಧಾರಣೆ ಎಂಜಿನಿಯರ್‌, ಲೆಕ್ಕ ಪರಿಶೋಧಕರು ಮೊದಲಾದ ವೃತ್ತಿಪರರ ಕ್ಷೇತ್ರ ವಿಸ್ತರಣೆ. ಗೃಹಿಣಿಯರ ಉದ್ಯಮಗಳ ಆದಾಯ ವೃದ್ಧಿ.

ಮಿಥುನ: ವಧೂವರಾನ್ವೇಷಿಗಳಿಗೆ ಜೋಡಿ ಸಿಗುವ ಸಾಧ್ಯತೆ. ಸ್ವತಂತ್ರ ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ಕುಟುಂಬಸಹಿತ ತೀರ್ಥಯಾತ್ರೆಯ ಯೋಚನೆ.

ಕರ್ಕಾಟಕ: ಕುಟುಂಬದ ಹಿರಿಯ ವ್ಯಕ್ತಿಯ ಆಗಮನ. ಶಿಕ್ಷಿತರ ನಿರುದ್ಯೋಗ ಸಮಸ್ಯೆ ನಿವಾರಣೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ಅನುಕೂಲ ವಾತಾವರಣ.ಕೃಷಿಭೂಮಿ ಖರೀದಿಗೆ ಮಾತುಕತೆ.

ಸಿಂಹ: ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸಿನ ಅನುಭವ. ಶೇರು ವ್ಯವಹಾರದಲ್ಲಿ ಉತ್ತಮ ಲಾಭ. ಇಲಾಖೆಗಳ ಸಕಾಲಿಕ ಸ್ಪಂದನದಿಂದ ಕಾರ್ಯಗಳು ಶೀಘ್ರ ಮುಕ್ತಾಯ. ಯಂತ್ರೋಪಕರಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.

Advertisement

ಕನ್ಯಾ: ಸಮುದಾಯದಲ್ಲಿ ಗೌರವದ ಸ್ಥಾನ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಮುನ್ನಡೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ದೀರ್ಘಾವಧಿ ಹೂಡಿಕೆಗಳಲ್ಲಿ ಲಾಭ.

ತುಲಾ: ಉದ್ಯೋಗ ಅರಸುವವರಿಗೆ ಮಾರ್ಗದರ್ಶನ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನದ ದಿನ. ಇಷ್ಟದೇವರ ಆಲಯಕ್ಕೆ ಭೇಟಿ.

ವೃಶ್ಚಿಕ: ವಸ್ತ್ರ, ಅಲಂಕಾರ ಸಾಮಗ್ರಿ ಖರೀದಿ ಸಂಭವ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿಗೆ ಅನುಕೂಲ.

ಧನು: ಹಿರಿಯ ಅಧಿಕಾರಿಗಳಿಗೆ ಅಪವಾದದ ಸಾಧ್ಯತೆ. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ.ಪಾರದರ್ಶಕ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಗೃಹಿಣಿಯರ ಸ್ಯೋದ್ಯೋಗ ಯೋಜನೆಗಳಿಗೆ ಶುಭಕಾಲ.

ಮಕರ: ಕಾರ್ಯರಂಗದಲ್ಲಿ ಗೌರವಾದರವೃದ್ಧಿ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಶಸ್ತ್ರವೈದ್ಯರಿಗೆ ಕೀರ್ತಿ. ದ್ರವಪದಾರ್ಥ ವ್ಯಾಪಾರಿಗಳಿಗೆ ಉತ್ತಮ ಲಾಭ.ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ.

ಕುಂಭ: ಕಾರ್ಯನಿರ್ವಹಣೆಗೆ ವರಿಷ್ಠರ ಮೆಚ್ಚುಗೆ. ಸಮಾಜ ಸೇವೆಯಿಂದ ಜನಪ್ರಿಯತೆ ವೃದ್ಧಿ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಲಾಭ. ವಾಸಸ್ಥಾನ ನವೀಕರಣ ಆರಂಭ. ವ್ಯವಹಾರ ಸಂಬಂಧ ಪ್ರಯಾಣ ಮುಂದೂಡಿಕೆ.

ಮೀನ: ಸತ್ಕಾರ್ಯಗಳಲ್ಲಿ ಪಾಲುಗೊಳ್ಳಲು ಆಹ್ವಾನ. ಕಳೆದುಹೋದ ಸುಸಂದರ್ಭ ಮರಳಿ ಬರುವ ಸಾಧ್ಯತೆ.ಕಾರ್ಯ ಯಶಸ್ಸಿಗೆ ಸಂಬಂಧಪಟ್ಟವರ ಸಹಕಾರ. ದ್ರವ ವ್ಯಾಪಾರಿಗಳಿಗೆ ಶುಭಕಾಲ. ಮನೆಯಲ್ಲಿ ದೇವತಾರ್ಚನೆಯ ಸಂಭ್ರಮ.

Advertisement

Udayavani is now on Telegram. Click here to join our channel and stay updated with the latest news.