Advertisement

Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

07:33 AM Jan 07, 2025 | Team Udayavani |

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸರ್ವರ ಪ್ರಶಂಸೆಗೆ ಪಾತ್ರರಾಗುವ ಯೋಗವಿದೆ. ಸ್ವಂತ ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸು. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ. ಹೊಸ ಕ್ಷೇತ್ರ ಪ್ರವೇಶಿಸಲು ಕಾಲ ಪಕ್ವ.

Advertisement

ವೃಷಭ: ಎಚ್ಚರಿಕೆಯಿಂದ ಮುಂದುವರಿದರೆ ಯಶಸ್ಸು ಖಚಿತ. ಉದ್ಯೋಗಸ್ಥರಿಗೆ ಪ್ರಗತಿ ಸ್ಥಿರ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ  ಸಮಾಧಾನ. ಗೃಹಿಣಿಯರಿಗೆ ಪುಟ್ಟ ಉದ್ಯಮ ಆರಂಭಿಸುವ ಉತ್ಸಾಹ.

ಮಿಥುನ: ನಿರ್ಧಾರ ಬದಲಾವಣೆ ಬೇಡ. ಪ್ರಾಮಾಣಿಕ ಅಧಿಕಾರಿಗಳ ಸತ್ವಪರೀಕ್ಷೆ. ಪೂರ್ವ ದಿಕ್ಕಿನಿಂದ ಶತ್ರುಬಾಧೆ. ವೃತ್ತಿಪರರಿಗೆ ಹೆಚ್ಚು ಜವಾಬ್ದಾರಿ. ಹಿರಿಯರು, ಮಹಿಳೆಯರು, ಮಕ್ಕಳಿಗೆ ನೆಮ್ಮದಿಯ ದಿನ.

ಕರ್ಕಾಟಕ: ಆರೋಗ್ಯದ ಕುರಿತು ಅತಿಯಾಗಿ ಚಿಂತಿಸದಿರಿ. ಮಿಶ್ರಫ‌ಲಗಳ ದಿನವಾಗಿದ್ದರೂ  ಶುಭಫ‌ಲಗಳೇ ಅಧಿಕ. ಸ್ವಂತ ಉದ್ಯಮಗಳವರಿಗೆ  ಪಂಥಾಹ್ವಾನಗಳು. ಉದ್ಯೋಗಸ್ಥರಿಗೆ ಉತ್ತೇಜನದ ವಾತಾವರಣ.

ಸಿಂಹ: ಆಕಸ್ಮಿಕ ಧನಲಾಭ. ಅರಿಚಿತರಲ್ಲದ ವ್ಯಕ್ತಿಗಳಿಂದ ದೂರವಿರುವುದು ಉತ್ತಮ. ನೆಂಟಸ್ತಿಕೆಯ ಮಾತುಕತೆಯಲ್ಲಿ ಭಾಗಿಯಾಗುವ ಅವಕಾಶ. ಆರೋಗ್ಯದ ಬಗ್ಗೆ  ಸ್ವಲ್ಪ ಕಾಳಜಿ ವಹಿಸಿ. ದೇವಾಲಯ ಭೇಟಿಯಿಂದ ನೆಮ್ಮದಿ.

Advertisement

ಕನ್ಯಾ: ಉದ್ಯೋಗ ರಂಗದಲ್ಲಿ ನಿರಾತಂಕದ ಮುನ್ನಡೆ. ನೆನೆದದ್ದು ನೆನೆದಂತೆ ಆದರೆ ಪರಮಾನಂದ. ವ್ಯವಹಾರಸ್ಥರಿಗೆ ನಿರೀಕ್ಷಿತ ವಲಯಗಳಿಂದ ಸಕಾಲಿಕ ನೆರವು. ಗೃಹಿಣಿಯರ ಮಹತ್ವಾಕಾಂಕ್ಷೆಗೆ ಪೂರಕ ವಾತಾವರಣ.

ತುಲಾ:  ಪಂಚಮ ಶನಿಯ ಪ್ರಭಾವ ಇದ್ದರೂ ಅಂಜಬೇಕಾಗಿಲ್ಲ.  ದೇವತಾರ್ಚನೆ, ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಹತ್ತಿರದ ದೇವತಾ ಸಾನ್ನಿಧ್ಯ ಸಂದರ್ಶನ. ಉದ್ಯೋಗ, ವ್ಯವಹಾರಗಳಲ್ಲಿ ಸುಧಾರಣೆ. ಆಪ್ತವಲಯದಲ್ಲಿ ಶುಭಕಾರ್ಯಕ್ಕೆ ಸಿದ್ಧತೆ.

ವೃಶ್ಚಿಕ: ಬಯಸಿದ್ದು ಬಯಸಿದಂತೆ ಆಗದಿದ್ದರೂ ಒಟ್ಟಿನಲ್ಲಿ ಉದ್ಯೋಗ ರಂಗದಲ್ಲಿ ಪ್ರತಿಭೆ ತೋರಿಸಲು  ಅವಕಾಶ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ. ಮಿತ್ರರಿಂದ ಶುಭವಾರ್ತೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಕ್ಷೇಮ.

ಧನು: ಎಣಿಸಿದ ಸಮಯಕ್ಕೆ ಸರಿಯಾಗಿ ಕಾರ್ಯ ಮುಕ್ತಾಯ. ಹಿರಿಯರ ಮತ್ತು ಗೃಹಿಣಿಯರಿಗೆ ಸ್ವಾವಲಂಬನೆಯ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಸಾಮರ್ಥ್ಯ ವೃದ್ಧಿಗೆ ಪ್ರಯತ್ನ. ಅಲ್ಪಕಾಲೀನ ಹೂಡಿಕೆಗಳಿಂದ ಲಾಭ.

ಮಕರ: ಅನಿರೀಕ್ಷಿತ ಬೆಳವಣಿಗೆಗಳಿಂದ  ಆತಂಕಗೊಳ್ಳಬೇಡಿ. ಖಾಸಗಿ ರಂಗದ ಉದ್ಯೋಗಸ್ಥರಿಗೆ  ಕೆಲಸದ  ಒತ್ತಡ. ಉದ್ಯೋಗಾ ನ್ವೇಷಣೆ ಫ‌ಲಿಸುವ ನಿರೀಕ್ಷೆ. ಜ್ಯೋತಿಷಿಗಳ ಲೆಕ್ಕಾಚಾರ ತಪ್ಪುವ ಸಾಧ್ಯತೆ. ಸಂಸಾರದಲ್ಲಿ  ಮಾನಸಿಕ ನೆಮ್ಮದಿ.

ಕುಂಭ: ನಿರಾತಂಕದ ದಿನಚರಿಗಳು.ಉದ್ಯೋಗ, ವ್ಯವಹಾರಗಳಲ್ಲಿ ನಾವೀನ್ಯ. ಸಮಾಜದಲ್ಲಿ ವಿಶೇಷ ಗೌರವ ಪ್ರಾಪ್ತಿ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ. ಮನೆಯಲ್ಲಿ  ಉಲ್ಲಾಸದ ವಾತಾವರಣ.

ಮೀನ:  ಏಳೂವರೆ ಶನಿಯ ಪ್ರಭಾವವಿದ್ದರೂ ಶುಭಫ‌ಲಗಳೇ ಅಧಿಕ. ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಸ್ಥಿರ ಆದಾಯ. ಸಂಗಾತಿಯಿಂದ ಎಲ್ಲ ವ್ಯವಹಾರಗಳಿಗೆ ಪ್ರೋತ್ಸಾಹ. ತಾಯಿಯ, ಮಾತೃಸಮಾನರ ಆರೋಗ್ಯ ಉತ್ತಮ. ಹತ್ತಿರದ ಕ್ಷೇತ್ರ ದರ್ಶನದಿಂದ ಮನಸ್ಸಿಗೆ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next