Advertisement

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.

07:41 AM Apr 13, 2021 | Team Udayavani |

13-04-2021

Advertisement

ಮೇಷ: ಅಷ್ಟಮದ ಶನಿಯ ಸೆಣಸಾಟದಿಂದ ಆಗಾಗ ಮಾನಸಿಕವಾಗಿ ಕ್ಲೇಶವನ್ನು ಅನುಭವಿಸುವಂತಾದೀತು. ತೋರಿಕೆಯ ಆತ್ಮೀಯರ ಪ್ರೀತಿ ಹಾಗೂ ವಿಶ್ವಾಸದ ಘಾತಕತನವಾದೀತು. ಹೆಚ್ಚು ನಂಬಿಕೆ ಬೇಡ.

ವೃಷಭ: ಕಾರ್ಯಕ್ಷೇತ್ರದಲ್ಲಿ ಆಗಾಗ ಅಪಜಯ ಎದುರಾದೀತು. ಆರೋಗ್ಯದ ವಿಷಯದಲ್ಲಿ ನೆಮ್ಮದಿ ಕೆಡುತ್ತಾ ಹೋಗುವುದು. ಆದರೆ ನಿಧಾನವಾಗಿ ಸುಧಾರಣೆಯಾಗಲಿದೆ. ಭೂವ್ಯವಹಾರದಲ್ಲಿ ವಂಚನೆ ಸಾಧ್ಯತೆ ಇದೆ.

ಮಿಥುನ: ಕೃಷಿಯಲ್ಲಿ ಸಾಫ‌ಲ್ಯ ನಿರೀಕ್ಷೆ ಸಂತಸ ತರುತ್ತದೆ. ಯಂತ್ರ, ಉಕ್ಕು, ಕಬ್ಬಿಣ ವಸ್ತುಗಳ ವ್ಯಾಪಾರದಲ್ಲಿ ಅಧಿಕ ಲಾಭ ಕಂಡು ಬರುವುದು. ಗೃಹದಲ್ಲಿ ಬಂಧುಗಳ ಆಗಮನದಿಂದ ಸಂತಸ, ಸಮಾಧಾನವಾದೀತು.

ಕರ್ಕ: ಕಾರ್ಯರಂಗದಲ್ಲಿ ಶತ್ರುಪೀಡೆ ಕೊಂಚ ಮರೆಯಾದೀತು. ಅಧಿಕಾರಿ ವರ್ಗದವರಿಗೆ ಮುಂಭಡ್ತಿಯು ದೊರಕಿ ಸಂತಸವಾಗಲಿದೆ. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಪ್ರಗತಿ ಹೊಂದುವರು. ಉದ್ಯೋಗವೂ ದೊರಕೀತು.

Advertisement

ಸಿಂಹ: ಆಗಾಗ ಚಂಚಲತೆ, ಇಬ್ಬಗೆಯ ಮನದ ಹೊಯ್ದಾಟದಿಂದ, ಕೆಲಸ ಕಾರ್ಯಗಳು ವಿಳಂಬಗತಿಯಿಂದ ಮುಂದು ವರಿಯಲಿವೆ. ಪುರೋಹಿತ ವರ್ಗದವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಕನ್ಯಾ: ದುರ್ಜನರ ಸಂಗದಿಂದ ಅಪವಾದ ದೋಷಗಳು ಬಂದಾವು. ಆದಾಯವು ಉತ್ತಮವಿದ್ದು ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.

ತುಲಾ: ಗೆಳೆಯರೊಂದಿಗೆ ಯಾತ್ರೆ, ಪ್ರವಾಸ ಮಾಡಿ ನಿಮ್ಮ ಸಮಯವನ್ನು ಸಂತೋಷದಿಂದ ಕಳೆಯುವಿರಿ. ವೃತ್ತಿರಂಗದಲ್ಲಿ ಅಭಿವೃದ್ಧಿಯು ಮುನ್ನಡೆಗೆ ಸಾಧಕವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮ ಹಾಕಿದರೆ ಯಶಸ್ಸು.

ವೃಶ್ಚಿಕ: ರಾಜಕೀಯ ರಂಗದಲ್ಲಿಯೂ ಆಗಾಗ ಸ್ಪರ್ಧೆಗಿಳಿಯಬೇಕಾದೀತು. ಕೆಟ್ಟ ಜನರ ಸಹವಾಸದಿಂದ ದೂರವಿದ್ದರೆ ಒಳ್ಳೆಯದು. ನಿಮ್ಮ ಚಿಂತೆಯು ಅನಾವಶ್ಯಕವಾಗಲಿದೆ. ಇಬ್ಬಗೆಯ ಮನದ ಹೊಯ್ದಾಟದಿಂದ ಕೆಲಸ ಕೆಡಲಿದೆ.

ಧನು: ಕೆಲಸ ಕಾರ್ಯಗಳು ವಿಳಂಬಗತಿಯಿಂದ ಮುಂದುವರಿಯಲಿವೆ. ನಿರುದ್ಯೋಗಿಗಳ ಪ್ರಯತ್ನಬಲ ಫ‌ಲಿಸಲಿದೆ. ಆರ್ಥಿಕ ಬಿಕ್ಕಟ್ಟಿನ ಲಕ್ಷಣವು ಕಾಣಿಸಲಿದೆ. ಜಾಗ್ರತೆ ವಹಿಸಿರಿ. ಧಾರ್ಮಿಕ ಕೆಲಸ ಕಾರ್ಯಗಳು ನಡೆಯಲಿವೆ.

ಮಕರ: ಹಂತಹಂತವಾಗಿ ಗಳಿಕೆಯು ವೃದ್ಧಿಯಾದರೂ ನಿಮಗೆ ಸಮಾಧಾನವಿರದು. ಕೆಲವೊಮ್ಮೆ ದೈಹಿಕವಾಗಿ ಸಮಸ್ಯೆಗಳು ಕಾಡಬಹುದು. ಗಣ್ಯ ಮಹನೀಯರ ಸಹಕಾರ ದೊರೆತು ಮುನ್ನಡೆ ಸಾಧಕವಾಗಲಿದೆ. ಜಾಗ್ರತೆ ಇರಲಿ.

ಕುಂಭ: ಗೃಹದಲ್ಲಿ ಅಲಂಕಾರಿಕ, ಮನೋರಂಜನೆ ಸಾಮಾಗ್ರಿಗಳ ಖರೀದಿಗಾಗಿ ಖರ್ಚು ಬರಲಿದೆ. ಆಕಸ್ಮಿಕ ಧನಾಗಮನದಿಂದ ಇಚ್ಛಿತ ಕಾರ್ಯಗಳ ಸಿದ್ಧಿಯಾಗಲಿದೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುದು.

ಮೀನ: ಉದ್ಯೋಗ ಅರಸುವವರಿಗೆ ಸಮಾಧಾನದ ಉದ್ಯೋಗ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನ ಗಳು ಲಭಿಸಿದರೂ ಸಮಾಧಾನವಿರದು. ವಿದ್ಯಾರ್ಥಿಗಳ ಜಾಣ್ಮೆಗೆ ಇದು ಪರೀಕ್ಷಾ ಕಾಲ. ಮುನ್ನಡೆಯಿರಿ. ಶುಭವಿದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next