Advertisement

Dengue Cases: ರಾಜ್ಯದಲ್ಲಿ 19 ಸಾವಿರ ಗಡಿದಾಟಿದ ಡೆಂಘೀ ಪ್ರಕರಣ

08:57 PM Aug 03, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶನಿವಾರ (ಆ.3ರಂದು) 337 ಮಂದಿಯಲ್ಲಿ ಡೆಂಘೀ ವರದಿಯಾಗಿದ್ದು, ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 19313ಕ್ಕೆ ಏರಿಕೆಯಾಗಿದೆ. 415 ಮಂದಿ ಡೆಂಘೀಯಿಂದ ಗುಣಮುಖರಾಗಿದ್ದಾರೆ.

Advertisement

ಕಳೆದ 24 ಗಂಟೆಯಲ್ಲಿ 224 ಮಂದಿ ಮನೆಯಲ್ಲಿ, 113 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ವರ್ಷದೊಳಗಿನ 10 ಮಕ್ಕಳು, 18 ವರ್ಷದೊಳಗಿನ 133 ಹಾಗೂ 18 ವರ್ಷ ಮೇಲ್ಪಟ್ಟ 194 ಮಂದಿಗೆ ಡೆಂಘೀ ದೃಢವಾಗಿದೆ.

ಬಿಬಿಎಂಪಿ 123, ತುಮಕೂರು 24, ಮೈಸೂರು 23, ಕಲಬುರಗಿ 22, ಹಾಸನ 18, ಮಂಡ್ಯ 12, ಬಳ್ಳಾರಿ, ಬೆಳಗಾವಿಯಲ್ಲಿ ತಲಾ 11, ಬಾಗಲಕೋಟೆಯಲ್ಲಿ 10 ಪ್ರಕರಣಗಳು ವರದಿಯಾಗಿವೆ. ಉಳಿದಂತೆ 5 ಜಿಲ್ಲೆಗಳಲ್ಲಿ ಡೆಂಘೀ ಪರೀಕ್ಷೆ ಕೈಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next