Advertisement

ಉಡುಪಿ ನಗರಕ್ಕೆ ಟ್ಯಾಂಕರ್‌ ನೀರೇ ಗತಿ!

02:18 AM May 05, 2019 | Team Udayavani |

ಉಡುಪಿ: ಉಡುಪಿ ನಗರಸಭೆಗೆ ಕುಡಿಯುವ ನೀರು ಒದಗಿಸುವ ಬಜೆ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ.

Advertisement

ಡ್ರೆಜ್ಜಿಂಗ್‌ ಮೂಲಕ ನೀರು ಹಾಯಿಸಿ ನೀರು ಸರಬರಾಜು ಮಾಡಲು ಎರಡು ದಿನಗಳ ಕಾಲಾವಕಾಶ ಬೇಕಿದೆ. ಈ ಹಿನ್ನೆಲೆಯಲ್ಲಿ ಮೇ 5 ಮತ್ತು 6ರಂದು ನಗರಕ್ಕೆ ನೀರು ಸರಬರಾಜು ಇರುವುದಿಲ್ಲ. ಮೇ 7ರಿಂದ ಮತ್ತೆ ನೀರು ಸರಬರಾಜು ಮಾಡಲು ಪ್ರಯತ್ನಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಅಣೆಕಟ್ಟಿನಲ್ಲಿ ಶನಿವಾರ 1.25 ಮೀ. ಗೂ ಕಡಿಮೆ ನೀರಿತ್ತು. ಅನ್ಯ ಸಾಧ್ಯತೆಗಳ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ.

ಇಂದಿನಿಂದ ಬಿಗಡಾಯಿಸಲಿದೆ ಸಮಸ್ಯೆ
ರವಿವಾರದಿಂದ ನೀರಿನ ಮಹತ್ವದ ಬಗ್ಗೆ ಅರಿವಿಗೆ ಬರಲಿದೆ. ಪ್ರಸ್ತುತ 3 ದಿನಕ್ಕೊಮ್ಮೆ ನೀರು ಬರುತ್ತಿದ್ದರೂ ಕೂಡ ಬಹುತೇಕ ಕಡೆ ಅದಕ್ಕೂ ಕಾಯಬೇಕಾದ ಸ್ಥಿತಿಯಿದೆ. ಬಹುತೇಕ ಕಡೆ 1 ವಾರದಿಂದಲೂ ನೀರು ಬರುತ್ತಿಲ್ಲ. ಕೆಲವೆಡೆ ನೀರು ಬಂದರೂ ಕೂಡ ಎತ್ತರ ಪ್ರದೇಶಕ್ಕೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.

ಹೂಳೆತ್ತುವ ಕಾರ್ಯವೂ ನಡೆದಿಲ್ಲ
ಸ್ವರ್ಣಾ ನದಿಯಲ್ಲಿ ಪ್ರಸ್ತುತ 4 ಅಡಿಗೂ ಅಧಿಕ ಹೂಳು ತುಂಬಿದೆ. ಇದನ್ನು ತೆಗೆಯುವ ಕೆಲಸವೂ ನಡೆದಿಲ್ಲ. ಮಳೆಗಾಲ ಬರುವ ತನಕ ದಿನ ಮುಂದೂ ಡುತ್ತಿರುವಂತಿದೆ. ಮೊದಲೇ ಹೂಳು ತೆಗೆಯುವ ಕೆಲಸ ಆರಂಭಿಸಿದ್ದರೆ ಪರಿಸ್ಥಿತಿ ಇಷ್ಟೊಂದು ಗಂಭೀರ ಸ್ವರೂಪ ಪಡೆಯುತ್ತಿರಲಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

Advertisement

ವರುಣನ ಆಗಮನ ನಿರೀಕ್ಷೆ
2017 ಎಪ್ರಿಲ್- ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಗಂಭಿರವಾಗಿತ್ತು. 2018ರಲ್ಲಿ ಸಮಸ್ಯೆ ಆರಂಭವಾಗುತ್ತಿದ್ದಂತೆ ಮಳೆ ಸುರಿದ ಕಾರಣ ಗೋಚರಿಸಲಿಲ್ಲ. ಆದರೆ ಪ್ರಸ್ತುತ ಸಮಸ್ಯೆ ಗಂಭೀರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next