Advertisement

ಇಂದು ಜೀಯಲ್ಲಿ ಹೆಮ್ಮೆಯ ಕನ್ನಡಿಗ 2019

02:47 PM Mar 31, 2019 | Lakshmi GovindaRaju |

ಕನ್ನಡ ನಾಡು ನುಡಿಗಾಗಿ, ಕನ್ನಡ ರಾಜ್ಯದ ಹಿರಿಮೆಯನ್ನು ಎಲ್ಲೆಡೆ ಪ್ರಚುರ ಪಡಿಸಲು ಪ್ರತಿ ದಿನ ಶ್ರಮಿಸುತ್ತಿರುವ ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮವನ್ನು ಜೀ ವಾಹಿನಿ ಆಯೋಜಿಸಿದ್ದು, ಈಗಾಗಲೇ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿದೆ.

Advertisement

ಶನಿವಾರ (ಇಂದು) ಹಾಗೂ ಭಾನುವಾರ ಸಂಜೆ 7ಗಂಟೆಗೆ ಜೀ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಕಳೆದ ವರ್ಷದ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮಕ್ಕೆ ಯಶಸ್ಸಿನ ನಂತರ ಈಗ ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮವನ್ನು ಜೀ ನಡೆಸಿದೆ.

ತಮ್ಮ ಮಹಾನ್‌ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿರುವ ಸಾಧಕರಿಗೆ, ಬೆಳ್ಳಿ ಪರದೆ ಹಾಗೂ ಸಿನಿಮಾ ರಂಗದಲ್ಲಿ ಸಾಧನೆ ಮಾಡಿರುವ ಎಲ್ಲಾ ಸಾಧಕರಿಗೂ ಗೌರವ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಹೆಮ್ಮೆಯ ಸಾಹಿತಿ, ಹೆಮ್ಮೆಯ ಪತ್ರಕರ್ತ, ಹೆಮ್ಮೆಯ ಮಹಿಳಾ ಸಾಧಕಿ, ಹೆಮ್ಮೆಯ ರೈತ ಸೇರಿದಂತೆ 20 ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವ ಸಾಧಕರನ್ನು ಆಹ್ವಾನಿಸಿ, ಅಭಿನಂದಿಸಲಾಗಿದೆ.

ಈ ಎಲ್ಲಾ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯಾತಿಗಣ್ಯರೇ ಈ ಸಾಧಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದ್ದು ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದಾಗಿತ್ತು. ಇಂದು ಆ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next