ಬೆಂಗಳೂರು/ಅಹ್ಮದಾಬಾದ್: ಭಾರೀ ರಾಜಕೀಯ ಹೈಡ್ರಾಮಾಗಳಿಗೆ ಕಾರಣವಾಗಿದ್ದ ಗುಜರಾತ್‌ನ ಕಾಂಗ್ರೆಸ್ ಶಾಸಕರ ಬೆಂಗಳೂರು “ರೆಸಾರ್ಟ್ ಯಾನ’ ಸೋಮವಾರಕ್ಕೆ ಅಂತ್ಯವಾಗ ಲಿದೆ. ಬೆಳಗಿನ ಜಾವದಿಂದಲೇ ಹಂತ ಹಂತವಾಗಿ ಶಾಸಕರೆಲ್ಲರೂ ಗುಜರಾತ್‌ನ ಅಹ್ಮದಾಬಾದ್‌ಗೆ ತೆರಳಲಿದ್ದಾರೆ. ಎಲ್ಲರಿಗೂ ಒಟ್ಟಿಗೆ ವಿಮಾನ ಟಿಕೆಟ್ ಸಿಗದಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಸಮಯದಲ್ಲಿ ಪ್ರಯಾಣ ಬೆಳೆಸಲಿದ್ದಾರೆ.
ಮಂಗಳವಾರ ರಾಜ್ಯಸಭೆ ಚುನಾವಣೆ ನಡೆಯ ಲಿದ್ದು, ಶಾಸಕರೆಲ್ಲರೂ ನೇರವಾಗಿ ಗುಜರಾತ್‌ಗೆà ತೆರಳಲಿದ್ದಾರೆ. ದಿಲ್ಲಿಗೆ ಹೋಗುವ ಸುದ್ದಿಗಳನ್ನು ಅಲ್ಲಗಳೆದಿರುವ ಕಾಂಗ್ರೆಸ್ ವಕ್ತಾರ ಶಕ್ತಿಸಿನ್ಹ ಗೋಹಿಲ್, ಶಾಸಕ ರೆಲ್ಲರೂ ಅಹ್ಮದಾಬಾದ್‌ಗೇ ತೆರಳಲಿದ್ದಾರೆ ಎಂದಿದ್ದಾರೆ.
ಅಹ್ಮದಾಬಾದ್‌ನಲ್ಲೂ ರೆಸಾರ್ಟ್ ವಾಸ: ಸೋಮವಾರ ಬೆಳಗ್ಗೆ ತೆರಳಲಿರುವ ಶಾಸಕರು ಅಹ್ಮದಾಬಾದ್‌ನ ಹೊರವಲಯದ ಆನಂದ ನಿಧಾನಂದ ರೆಸಾರ್ಟ್ ನಲ್ಲಿ ಉಳಿಯಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಈ ರೆಸಾರ್ಟ್‌ನರೂಂಗಳನ್ನು ಬುಕ್ ಮಾಡಲಾಗಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಅಹ್ಮದ್ ಪಟೇಲ್ ಮತ್ತು ನೋಟಾ: ಮಂಗಳ ವಾರ ನಡೆಯಲಿರುವ ರಾಜ್ಯಸಭೆ ಚುನಾವಣೆ ಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ಅವರ ಗೆಲುವು ನಿರಾಯಾಸ. ಆದರೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲುವಿನ ಹಾದಿಯನ್ನು ಕಠಿನ ಮಾಡಿದೆ.
ಈಗಾಗಲೇ ಕಾಂಗ್ರೆಸ್ ಮೇಲೆ ಬೇಸರಗೊಂಡಿರುವ ಶಂಕರ್ ಸಿಂಗ್ ವಘೇಲಾ ಅವರ ಬೆಂಬಲಿತ ಆರು ಶಾಸಕರು ರಾಜೀನಾಮೆ ನೀಡಿದ್ದು, ಕೈ ಬಲ 51ಕ್ಕೆ ಕುಸಿದಿದೆ. ಅಹ್ಮದ್ ಪಟೇಲ್ ಅವರ ಗೆಲುವಿಗೆ 45 ಮತ ಬೇಕು. ಆದರೆ ಕೇಂದ್ರ ಚುನಾವಣಾ ಆಯೋಗ ಈ ಬಾರಿಯ ಚುನಾವಣೆಯಲ್ಲಿ ನೋಟಾ ಜಾರಿ ಮಾಡಿದ್ದು, ಇದು ಅಹ್ಮದ್ ಪಟೇಲ್ ಅವರ ಗೆಲುವಿನ ಹಾದಿಯನ್ನು ಮತ್ತಷ್ಟು ಕಠಿನ ಮಾಡಿದೆ. ಒಂದು ವೇಳೆ ಕಾಂಗ್ರೆಸ್ ವಿಪ್ ಉಲ್ಲಂ ಸಿ ಅಡ್ಡ ಮತದಾನ ಮಾಡಿದಲ್ಲಿ ಶಾಸಕ ಸ್ಥಾನದಿಂದ ಅನರ್ಹವಾಗುವ ಭೀತಿ ಇದ್ದು, ನೋಟಾ ಮತ ಹಾಕಿದರೆ ಈ ಅನರ್ಹ ಭೀತಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.