Advertisement
ಆರ್‌ಸಿಬಿ ಹೈದ್ರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸನ್ ರೈಸರ್ ವಿರುದ್ಧ ಸೋಲು ಕಂಡಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಮೆರೆದಿತ್ತು. ಸದ್ಯಕಿಂಗ್ಸ್ ಇಲೆವೆನ್ ಪಂಜಾಬ್‌ಗ ಸರಿಸಾಟಿಯಾಗಲು ಆರ್‌ಸಿಬಿ ತೊಡೆತಟ್ಟಿ ನಿಂತಿದೆ. ಹಾಗಂತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಹಗುರವಾಗಿ ಕಾಣುವಂತಿಲ್ಲ, ಆಡಿದ ಮೊದಲ ಪಂದ್ಯದಲ್ಲಿ ರೈಸಿಂಗ್ ಪುಣೆ ತಂಡಕ್ಕೆ ಸೋಲುಣಿಸಿದ ಆತ್ಮವಿಶ್ವಾಸದಲ್ಲಿದೆ. ಜತೆಗೆ ತವರಿನ ಪಿಚ್ ಆಗಿರುವುದರಿಂದ ಪಂಜಾಬ್‌ಗ ಹೆಚ್ಚು ಅನುಕೂಲ. ಅಲ್ಲದೆ ಅಪಾರ ಅಭಿಮಾನಿಗಳ ಬೆಂಬಲವೂ ಇದೆ. ಎಲ್ಲ ಪ್ಲಸ್ ಆದರೆ ಪಂಜಾಬ್ ತಂಡವನ್ನು ನಿಯಂತ್ರಿಸುವುದು ಆರ್‌ಸಿಬಿಗೆ ಕಷ್ಟವಾಗಬಹುದು.
ಬೆಂಗಳೂರು: ರಾಯಲ್ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡ 10ನೇ ಆವೃತ್ತಿ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಸೋಲು ಕಂಡಿತ್ತು. 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಬಳಿಕ ಸ್ವತಃ ತಂಡದ ಹಂಗಾಮಿ ನಾಯಕ ವಾಟ್ಸನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು
ನೀಡಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯಕ್ಕೆ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ ಲಭ್ಯವಾಗಲಿದ್ದಾರೆ ಎನ್ನುವ ಸೂಚನೆ ನೀಡಿದ್ದಾರೆ. ಪಂದ್ಯದ ಬಳಿಕ ಮಾಜಿ ಕ್ರಿಕೆಟಿಗ ಹಾಲಿ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಾಂಜ್ರೆàಕರ್ ವಾಟ್ಸನ್‌ಗೆ ಪ್ರಶ್ನೆ ಕೇಳಿದಾಗ ವಾಟ್ಸನ್ ಮೇಲಿನಂತೆ ಉತ್ತರಿಸಿದರು. ಈ ಮಾಹಿತಿಯನ್ನು ನಂಬಬಹುದೇ ಎಂಬ ಸಂಜಯ್ ಪ್ರಶ್ನೆಗೆ ಇಲ್ಲ ಎನ್ನುತ್ತಾ ಗೊಂದಲವನ್ನೂ ಮೂಡಿಸಿದರು.