Advertisement

ಇಂದು ರಕ್ಷಾ ಬಂಧನ

09:59 AM Aug 16, 2019 | mahesh |

ಸಮಯ ಮತ್ತು ಹಣವು ಅನೇಕ ವಿಷಯಗಳನ್ನು ಬದಲಾಯಿಸುತ್ತದೆ. ಆದರೆ ನಾವು ಹಂಚಿಕೊಳ್ಳುವ ಪ್ರೀತಿ ಮತ್ತು ಬಾಂಧವ್ಯ ಎಂದಿಗೂ ಬದಲಾಗುವುದಿಲ್ಲ. ಈ ರಾಖೀ ನಿಮಗೆ ಪ್ರೀತಿ ಮತ್ತು ಕಾಳಜಿಯನ್ನು ತರುತ್ತದೆ. ನೆನಪುಗಳು ಸಮಯದೊಂದಿಗೆ ಮಸುಕಾಗ ಬಹುದು. ಆದರೆ ನಾವು ಹಂಚಿಕೊಳ್ಳುವ ಪ್ರೀತಿ ಮತ್ತು ವಿಶೇಷ ಬಂಧವು ಪ್ರತಿದಿನವೂ ಸಮೃದ್ಧವಾಗಿ ಬೆಳೆಯುತ್ತದೆ. ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಅಣ್ಣಾ…

Advertisement

ಮಣಿಪಾಲ: ರಕ್ಷಾ ಬಂಧನ ವಿಶ್ವದಲ್ಲಿ ಭ್ರಾತೃತ್ವದ ಸಂಕೇತವಾಗಿ ಆಚರಿಸಲ್ಪಡುವ ಏಕೈಕ ಹಬ್ಬ. ಭಾರತೀಯ ಆಚರಣೆಗಳಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವಂತಹ ವಿಶೇಷ ಆಚರಣೆ. ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬವನ್ನು ಮೊದಲು ಉತ್ತರ ಭಾರತದಲ್ಲಿ ಮಾತ್ರ ಆಚರಿಸುತ್ತಿದ್ದು, ಕಾಲ ಕ್ರಮೇಣ ಭಾರತಾದ್ಯಂತ ವ್ಯಾಪಿಸಿತು. ವಿಶೇಷವೆಂದರೆ ಹಿಂದೂ ಧರ್ಮದಲ್ಲಿ ಆಚರಣೆಯಲ್ಲಿದ್ದ ಈ ರಕ್ಷಾಬಂಧನ ಈಗ ಜಾತಿ, ಧರ್ಮಗಳನ್ನು ಮೀರಿ ಆಚರಣೆಯಲ್ಲಿದೆ.

ಸಹೋದರ ಅಥವಾ ಸಹೋದರಿ ಇಲ್ಲವೆಂದು ಕೊರಗುವವರಿಗೆ ಈ ರಕ್ಷಾ ಬಂಧನದ ಆಚರಣೆ ಆ ಕೊರಗು ಇನ್ನಿಲ್ಲದಂತೆ ಮಾಡುತ್ತದೆ. ಈ ಮೂಲಕ ಅಮೂಲ್ಯ ಬೆಸುಗೆಗೆ ರಕ್ಷಾಬಂಧನ ಸಾಕ್ಷಿಯಾಗುತ್ತಿದೆೆ. ರಕ್ಷಾಬಂಧನವು ತನ್ನ ಆಚರಣೆಯ ಜೀವಂತಿಕೆ ಯನ್ನು ಇಂದಿಗೂ ಕಳೆದುಕೊಳ್ಳದೆ ಅರ್ಥಪೂರ್ಣ ವಾಗಿ ಆಚರಿಸಲ್ಪಡುತ್ತಿದೆ.

ದೇಶಾದ್ಯಂತ ಈ ಆಚರಣೆಯಿದ್ದರೂ ಒಂದೊಂದು ಕಡೆಗಳಲ್ಲಿ ಇದರ ಪೌರಾಣಿಕ ಹಿನ್ನೆಲೆ ಬೇರೆ ಬೇರೆ ಇದೆ. ಸಲೂನೊ, ಸಿಲೋನೊ, ರಾಕ್ರಿ ಮೊದಲಾದ ಹೆಸರುಗಳಲ್ಲಿ ಇರುವ ರಾಖೀ ಕಟ್ಟುವ ಸಂಪ್ರದಾಯವು ಅರ್ಥಪೂರ್ಣ ಆಚರಣೆಯಾಗಿದೆ. ಕೆಲವು ಕಡೆ ಅಣ್ಣನಿಗೆ ರಾಖೀ ಕಟ್ಟ ಬಯಸುವ ತಂಗಿಯು ಹಿಂದಿನ ದಿನ ಉಪವಾಸವಿದ್ದು ಮರುದಿನ ಬೆಳಗ್ಗೆ ಸ್ನಾನ ಮಾಡಿ ರಾಖೀ ಕಟ್ಟುವವರೆಗೂ ಅನ್ನ ಸೇವಿಸುವಂತಿಲ್ಲ.

ರಾಖಿ ಕಟ್ಟಿಸಿಕೊಂಡ ಅಣ್ಣ ಎಲ್ಲ ಸಂದರ್ಭದಲ್ಲೂ ನಿನ್ನ ರಕ್ಷಣೆಯ ಜವಾಬ್ದಾರಿ ತನ್ನದು ಎಂದು ಶಪಥ ಮಾಡುತ್ತಾನೆ. ಇನ್ನೂ ಕೆಲವು ಕಡೆಗಳಲ್ಲಿ ತಂಗಿಯಾದವಳು ಉಪವಾಸ ವಿದ್ದು ಮುಂಜಾನೆ ರಾಖೀಯನ್ನು ದೀಪ, ತಿಲಕ, ಅಕ್ಷತೆಯ ಜತೆಗೆ ಅಣ್ಣನಿಗೆ ತಿಲಕವನ್ನಿಟ್ಟು ನೆತ್ತಿಯ ಮೇಲೆ ಅಕ್ಷತೆ ಹಾಕಿ ರಕ್ಷೆಯನ್ನು ಕಟ್ಟಿದ ಅನಂತರ ಆರತಿ ಬೆಳಗುತ್ತಾ ಅವನಿಂದ ಆಶೀರ್ವಾದ ಪಡೆಯುತ್ತಾಳೆ. ಅಣ್ಣನಾದವನು ತಂಗಿಗೆ ಸಿಹಿ ತಿನಿಸು ಕೊಟ್ಟು ಹಬ್ಬವನ್ನು ಆಚರಿಸುತ್ತಾರೆ.

Advertisement

•ಮಾಹಿತಿ: ಉಡುಪಿ/ಕುಂದಾಪುರ/ಕಾರ್ಕಳ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next