Advertisement

ಫೈನಲ್‌ ಪ್ರವೇಶದ ಕನಸಿನಲ್ಲಿ ಬುಲ್ಸ್‌

12:26 AM Oct 16, 2019 | Team Udayavani |

ಅಹ್ಮದಾಬಾದ್‌: ಪ್ರೊ ಕಬಡ್ಡಿ 7ನೇ ಆವೃತ್ತಿ ಸೆಮಿಫೈನಲ್‌ ಕಾಳಗ ಬುಧವಾರ ಜರಗಲಿದೆ. ಅಹ್ಮದಾಬಾದ್‌ನ ಟ್ರಾನ್ಸ್‌ ಸ್ಟೇಡಿಯಾದಲ್ಲಿನ ಪಂದ್ಯ ಭಾರೀ ಕುತೂಹಲ
ಕೆರಳಿಸಿದೆ.

Advertisement

ಸೆಮಿಫೈನಲ್‌ ಒಂದರಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವು ಅಂಕಪಟ್ಟಿಯ ಅಗ್ರಸ್ಥಾನಿ ಬಲಿಷ್ಠ ದಬಾಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ ಎರಡರಲ್ಲಿ ಯು ಮುಂಬಾ ತಂಡವು ಬೆಂಗಾಲ್‌ ವಾರಿಯರ್ ವಿರುದ್ಧ ಸೆಣಸಲಿದೆ. ಸೋಮವಾರ ನಡೆದಿದ್ದ ಮೊದಲ ಎಲಿಮಿನೇಟರ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡವು ಯುಪಿ ಯೋಧಾವನ್ನು ಮಣಿಸಿದ್ದರೆ, ಎರಡನೇ ಎಲಿಮಿನೇಟರ್‌ನಲ್ಲಿ ಯು ಮುಂಬಾ ತಂಡವು ಹರ್ಯಾಣ ಸ್ಟೀಲರ್ ತಂಡಕ್ಕೆ ಆಘಾತ ನೀಡಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು.

ಗೆಲುವಿಗಾಗಿ ಹಾತೊರೆಯುತ್ತಿರುವ ಅಗ್ರ ನಾಲ್ಕು ತಂಡಗಳು ಇದೀಗ ಅ.19ರಂದು ನಡೆಯಲಿರುವ ಫೈನಲ್‌ಗೆ ಪ್ರವೇಶಿಸುವತ್ತ ಚಿತ್ತ ನೆಟ್ಟಿವೆ. ಆದರೆ ಬುಲ್ಸ್‌ ತಂಡವನ್ನು ಎದುರಿಸುತ್ತಿರುವ ಡೆಲ್ಲಿ ಹಾಗೂ ಯು ಮುಂಬಾ ತಂಡಕ್ಕೆ ಎದುರಾಗುತ್ತಿರುವ ಬೆಂಗಾಲ್‌ ತಂಡವನ್ನು ಅಷ್ಟು ಸುಲಭದಲ್ಲಿ ಮಣಿಸುವುದು ಅಸಾಧ್ಯ, ಇದು ಕಬಡ್ಡಿ ಪಂಡಿತರ ಲೆಕ್ಕಾಚಾರ.

ಪವನ್‌ ಬಲಿಷ್ಠ ಆಟಗಾರ
ಪವನ್‌ ಸೆಹ್ರಾವತ್‌ ಬಲಿಷ್ಠ ಆಟಗಾರರಾಗಿ ಮೂಡಿ ಬಂದಿದ್ದಾರೆ. ಎದುರಾಳಿ ತಂಡಕ್ಕೆ ಬಿಡಿಸಲಾರದ ಒಗಟಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ “ವನ್‌ ಮ್ಯಾನ್‌ ಆರ್ಮಿ’. ರೈಡಿಂಗ್‌ನಲ್ಲಿ ಮಿಂಚಿನಂತೆ ಅಂಕ ಕಲೆ ಹಾಕಬಲ್ಲ ವೇಗದೂತ. ಅಂತಹ ಆಟಗಾರನನ್ನು ನಿಯಂತ್ರಿಸುವುದು ಸುಲಭವಲ್ಲ. ಇದನ್ನು ಈಗಾಗಲೇ ಎದುರಾಳಿ ತಂಡವು ಸರಿಯಾಗಿ ಅರಿತುಕೊಂಡಂತಿದೆ. ಪಂದ್ಯದಿಂದ ಪಂದ್ಯಕ್ಕೆ ಪವನ್‌ ರೈಡಿಂಗ್‌ ಗುಣಮಟ್ಟ ದ್ವಿಗುಣಗೊಂಡಿದೆ. ಪವನ್‌ ಹೆಚ್ಚು ಆಕ್ರಮಣಕಾರಿ ಆಟ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ, ಕೊನೆಯ 10 ನಿಮಿಷ ಇರುವಾಗ ಹಲವು ಪಂದ್ಯಗಳನ್ನು ಬುಲ್ಸ್‌ಗೆ ಗೆಲ್ಲಿಸಿಕೊಟ್ಟಿದ್ದಾರೆ. ಒಟ್ಟಾರೆ ಕೊನೆಯ 10 ನಿಮಿಷ ಇರುವಾಗ ಅವರು ದಾಖಲಿಸಿರುವ ಒಟ್ಟಾರೆ ರೈಡಿಂಗ್‌ ಅಂಕಗಳ ಸಂಖ್ಯೆ 100. ಇದು ಪವನ್‌ ಎಷ್ಟು ಆಕ್ರಮಣಕಾರಿ ಎನ್ನುವುದಕ್ಕೆ ಸಾಕ್ಷಿ.

ರಕ್ಷಣಾ ವಿಭಾಗದಲ್ಲಿ ಬುಲ್‌ಗೆ ಸೌರಭ್‌, ಅಮಿತ್‌ ಹಾಗೂ ಮಹೇಂದರ್‌ ಸಾಥ್‌ ನೀಡಿದ್ದೇ ಆದರೆ ಬೆಂಗಳೂರು ಫೈನಲ್‌ಗೆ ಲಗ್ಗೆ ಇಡುವುದರಲ್ಲಿ ಯಾವುದೇ ಅನುಮಾನ ಬೇಡ.

Advertisement

ಡೆಲ್ಲಿ ಪ್ರಬಲ ಸ್ಪರ್ಧಿ
ಡೆಲ್ಲಿ ತಂಡವು ಸಂಘಟಿತ ಆಟವಾಡುತ್ತಿದೆ. ಈ ಲೆಕ್ಕದಲ್ಲಿ ನೋಡುವುದಾದರೆ ಬೆಂಗಳೂರಿಗಿಂತ ಡೆಲ್ಲಿಗೆ ಗೆಲುವಿನ ಅವಕಾಶ ಹೆಚ್ಚಿದೆ. ನವೀನ್‌ ಕುಮಾರ್‌ ರೈಡಿಂಗ್‌ನಲ್ಲಿ ಡೆಲ್ಲಿ ತಂಡದ ಬೆನ್ನೆಲುಬು, ಅವರನ್ನು ಕಟ್ಟಿಹಾಕುವುದು ಸುಲಭವಲ್ಲ. ಚಂದ್ರನ್‌ ರಂಜಿತ್‌, ವಿಜಯ್‌, ಮೆರಾಜ್‌ ಶೇಖ್‌ ಅಪ್ರತಿಮ ಫಾರ್ಮ್ನಲ್ಲಿದ್ದು ಡೆಲ್ಲಿ ಗೆಲುವಿನ ಸಾಧ್ಯತೆ ಹೆಚ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next