Advertisement
ತನ್ನ ಮೊದಲ ಪಂದ್ಯದಲ್ಲಿ ಪಾಟ್ನಾ ತಂಡವು ತೆಲುಗು ತಂಡವನ್ನು 35-29 ಅಂಕಗಳಿಂದ ಉರುಳಿಸಿತ್ತು. ಪಾಟ್ನಾ ಗೆಲುವಿನಲ್ಲಿ ಪ್ರದೀಪ್ ನರ್ವಾಲ್ ಅವರ ಆಟ ನಿರ್ಣಾಯಕವಾಗಿತ್ತು. 15 ಅಂಕ ಗಳಿಸಿದ್ದ ನರ್ವಾಲ್ ತಂಡದ ಗೆಲುವಿನ ರೂವಾರಿಯಾಗಿದ್ದರು. ಆರಂಭದಲ್ಲಿ ಆತಿಥೇಯ ತೆಲುಗು ಮೇಲುಗೈ ಸಾಧಿಸಿದ್ದರೂ ಪಂದ್ಯ ಸಾಗುತಿªದ್ದಂತೆ ಪಾಟ್ನಾ ಹಿಡಿತ ಸಾಧಿಸುತ್ತ ಹೋಯಿತು. ಅಂತಿಮ ಹಂತದಲ್ಲಿ ಹಲವು ಅಂಕಗಳನ್ನು ಪಡೆಯುವ ಮೂಲಕ ಪಾಟ್ನಾ ಜಯಭೇರಿ ಬಾರಿಸಿತ್ತು. ಗುರುವಾರದ ಪಂದ್ಯ ದಲ್ಲಿಯೂ ಪಾಟ್ನಾ ಮತ್ತೆ ಜಯದ ವಿಶ್ವಾಸದಲ್ಲಿದೆ.
Related Articles
Advertisement
ತವರಿನ ಪಂದ್ಯಗಳಲ್ಲಿ ಆತಿಥೇಯ ತಂಡ ಮೇಲುಗೈ ಸಾಧಿಸಬೇಕಿತ್ತು. ತವರಿನ ಅಂಗಣ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಪಂದ್ಯಗಳು ನಡೆಯುವ ಕಾರಣ ತೆಲುಗು ಟೈಟಾನ್ಸ್ ಭರ್ಜರಿ ಆಟ ಆಡಬೇಕಿತ್ತು. ಆದರೆ ಟೈಟಾನ್ಸ್‌ಗೆ ಅದೃಷ್ಟ ಕೈಕೊಟ್ಟಿದೆ. ಪಾಟ್ನಾ ಮತ್ತು ಬೆಂಗಳೂರು ಬುಲ್ಸ್ ವಿರುದ್ಧ ಸೋತಿದ್ದ ಟೈಟಾನ್ಸ್ ತಂಡವು ಮಂಗಳವಾರ ಇದೇ ಮೊದಲ ಬಾರಿ ಪ್ರೊ ಕಬಡ್ಡಿಯಲ್ಲಿ ಆಡಿದ ಯುಪಿ ಯೋಧಾಸ್ ವಿರುದ್ಧ ಸೋತಿದೆ.
ಈ ಸೋಲಿನಿಂದ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟಾಗಿದೆ. ನಮ್ಮ ತಪ್ಪುಗಳೇನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ ತೆಲುಗು ಟೈಟಾನ್ಸ್ ತಂಡದ ಕೋಚ್ ನವೀನ್ ಕುಮಾರ್ ವೈಯಕ್ತಿಕ ಆಟಗಾರರ ವೈಫಲ್ಯಕ್ಕಿಂತ ನಮ್ಮ ಆಟದ ತಂತ್ರಗಳಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯ ಕಾಣುತ್ತಿದೆ ಎಂದರು.