Advertisement
1902 ಶಾಲೆ ಸ್ಥಾಪನೆ ಹುಲ್ಲಿನ ಮಾಡಿನಡಿ ಸ್ಥಾಪನೆಯಾಗಿದ್ದ ಶಾಲೆ
Related Articles
ಶಾಲೆಗೆ ಹಲವರು ಸಂಚಾಲಕರಾಗಿದ್ದು, ಶತಮಾನ ಸಂಭ್ರಮವನ್ನು ಕಂಡಿದೆ. ಪ್ರಸ್ತುತ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಚುಕ್ಕಾಣಿಯಲ್ಲಿ ಶಾಲೆ ಯು ಮುನ್ನಡೆಯುತ್ತಿದೆ. ಒಂದರಿಂದ ಏಳನೆ ತರಗತಿ ವರೆಗೆ 5 ಮಂದಿ ಖಾಯಂ ಶಿಕ್ಷಕಿಯರು, ಮೂರು ಮಂದಿ ಗೌರವ ಶಿಕ್ಷಕಿ ಯರು 207 ವಿದ್ಯಾರ್ಥಿಗಳಿಗೆ ಜ್ಞಾನ ಬೋಧನೆ ಮಾಡುತ್ತಿದ್ದಾರೆ. 1988-1995ರಲ್ಲಿ ಸಂಚಾಕರಾಗಿದ್ದ ವಂ| ತಾವ್ರೋ ಅವರ ದೂರಾಲೋಚನೆ, ದಾನಿಗಳ ಸಹಕಾರದಿಂದ 1994ರಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಪ್ರಸ್ತುತ ಉತ್ತಮ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಕ್ಷರ ದಾಸೋಹ ಕೊಠಡಿ, ಆಟದ ಮೈದಾನ, ಸಿ.ಸಿ. ಕೆಮರಾ ಅಳವಡಿಕೆ, ದೂರದರ್ಶನ, ಶಾಲಾ ವಾಹನದ ಸವಲತ್ತು, ದಾನಿಗಳ ಸಹಕಾರದಿಂದ ಕೈತೊಳೆಯುವ ಹಾಗೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದೆ.
Advertisement
ಮಲ್ಲಿಗೆ ನಾಡಿನ ಶಿಕ್ಷಣದ ಕಂಪು ಪ್ರಪಂಚಕ್ಕೆಮಲ್ಲಿಗೆ ನಾಡಿನ ಕಂಪಿನಲ್ಲಿ ಶಿಕ್ಷಣ ಪಡೆದಿದ್ದ ಪ್ರಸ್ತುತ ಬೆಂಗಳೂರಿನ ಆರ್ಚ್ ಬಿಷಪ್ ಡೊ|ಅಲೊ#àನ್ಸಸ್ ಮಥಾಯಸ್, ಕೆನಡಾದಲ್ಲಿ ಪ್ರೋಫೆಸರ್ ಮತ್ತು ಕೆನಾನ್ ಲಾ ಎಕ್ಸ್‌ಪರ್ಟ್ ಫಾ|ಆಗಸ್ಟಿನ್ ಮೆಂಡೋನ್ಸ, ಯು.ಎಸ್.ಎ.ಯಲ್ಲಿ ನಿವೃತ್ತ ಎಂಜಿನಿಯರ್ ಡಾ|ನರಸಿಂಹ ಭಟ್, ಐ-ಸ್ಪೆಷಲಿಸ್ಟ್ ಡಾ| ಜನಾರ್ದನ ಭಟ್, ಮಾನಸಿಕ ತಜ್ಞ ಡಾ|ವೇದವ್ಯಾಸ ಭಟ್, ಕರ್ನಾಟಕ ಯುನಿವರ್ಸಿಟಿಯ ಪ್ರೋಫೆಸರ್ ರಾಮದಾಸ ಭಟ್, ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದ ಆಲ್ಬರ್ಟ್ ವಿಲ್ಫೆಡ್ ಡಿಸೋಜ, ಬ್ಯಾಂಕಿಂಗ್ ಕ್ಷೇತ್ರದ ದಿ| ಎಲ್.ಜೆ. ಮಾರ್ಟಿಸ್, ಚಿಕಾಗೋ ರಿಸರ್ಚ್ ಬಾಕ್ಸರ್ ಲ್ಯಾಬ್ ನಿರ್ದೇಶಕ ಲಿಯೊ ಮಾರ್ಟಿಸ್ ಲಿಯೋ ಮಾರ್ಟಿಸ್ ಹಾಗೂ ಮಣಿಪಾಲ ಕೆಎಂಸಿ ಬ್ಲಿಡ್ ಬ್ಯಾಂಕ್ ಫಾರ¾ರ್ ಡೈರೆಕ್ಟರ್ ಡಾ|ಕೆ. ಸತೀಶ್ ಶೆಟ್ಟಿ ಸಹಿತ ಇಲ್ಲಿನ ಹಳೆ ವಿದ್ಯಾರ್ಥಿಗಳ ಗಡಣವೇ ಜಗತ್ತಿನಾದ್ಯಂತ ಉನ್ನತ ಹುದ್ದೆ, ಉದ್ಯಮಗಳಲ್ಲಿ ಭಾರತೀಯ ಶಿಕ್ಷಣದ ಪರಿಮಳವನ್ನು ಪಸರಿಸಿದ ಸಾಧಕರಾಗಿದ್ದಾರೆ. ರ್‍ಯಾಂಕ್ ಸಾಧಕ ಹಳೆ ವಿದ್ಯಾರ್ಥಿ
ಶಂಕರಪುರದ ಪ್ರಥಮ ಎಂಜಿನಿಯರ್ ಆಗಿ ಮೂಡಿ ಬಂದಿದ್ದ ಜೋನ್ ಪಿ. ಮೆಂಡೋನ್ಸ ಎಸ್.ಎಸ್.ಎಲ್.ಸಿ.(ಇನ್ನಂಜೆ)ಯಲ್ಲಿ 7ನೇ ರ್‍ಯಾಂಕ್ ಪಡೆದಿದ್ದ ಈ ಶಾಲೆಯ ಸಾಧಕ ಹಳೆ ವಿದ್ಯಾರ್ಥಿಯಾಗಿದ್ದರು. ಅಂಗ ಸಂಸ್ಥೆಗಳ ಸಹಕಾರದಿಂದ ಶಾಲೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬರುವ ಪ್ರತಿಯೊಂದು ಮಗುವಿಗೂ ವಿದ್ಯೆಯ ಮಹತ್ವ ಮತ್ತು ಮೌಲ್ಯಗಳನ್ನು ಕಲಿಸುವುದೇ ಉನ್ನತ ಗುರಿಯಾಗಿದೆ.
-ಐರಿನ್ ಕ್ಲಾರಾ ಡಿ’ಸೋಜಾ, ಪ್ರಭಾರ ಮುಖ್ಯ ಶಿಕ್ಷಕಿ ಈ ಶಾಲೆಗೆ 1947ರಲ್ಲಿ ಎಡ್ಮಿಷನ್ ಆಗಿದ್ದೆ. ಕಲಿಕೆಗೆ ಪೂರಕ ವಾತಾವರಣ. ಶಿಸ್ತು ಬದ್ಧ. ಉತ್ತಮ ಶಿಕ್ಷಣ ಪಡೆದು ಪ್ರಸ್ತುತ ಕೆ.ಎಂ.ಸಿ. ಮಣಿಪಾಲದಲ್ಲಿ ಬ್ಲಿಡ್ ಬ್ಯಾಂಕ್ ಫಾರ¾ರ್ ಡೈರೆಕ್ಟರ್ ಆಗಿ ಗೌರವಯುತ ಬದುಕು ಕಟ್ಟುವಂತಾಗಿದೆ.
-ಡಾ|ಕೆ. ಸತೀಶ್ ಶೆಟ್ಟಿ, ಹಳೆ ವಿದ್ಯಾರ್ಥಿ - ವಿಜಯ ಆಚಾರ್ಯ, ಉಚ್ಚಿಲ