Advertisement
ಗೆಲುವು ಸಾಧಿಸುವ ಉದ್ದೇಶದಿಂದ ಎರಡೂ ತಂಡಗಳು ಹೋರಾಡಲಿದೆ. ವೈಯಕ್ತಿಕ ಸಾಧನೆಗಾಗಿ ಆಟಗಾರರು ಪೈಪೋಟಿ ನಡೆಸುವ ಸಾಧ್ಯತೆಯಿದೆ.
Related Articles
Advertisement
ಈ ಐಪಿಎಲ್ ಮುಕ್ತಾಯದ ಹಂತದಲ್ಲಿರುವ ಕಾರಣ ಎರಡೂ ತಂಡಗಳು ಮುಂದಿನ ಐಪಿಎಲ್ ಬಗ್ಗೆ ತನ್ನ ಯೋಜನೆ ರೂಪಿಸುವ ಸಾಧ್ಯತೆಯಿದೆ. ಇದರ ಜತೆ ತಮ್ಮ ನಿರಾಶಾದಾಯಕ ನಿರ್ವಹಣೆಯನ್ನು ಗೆಲುವಿನ ಮೂಲಕ ಅಂತ್ಯಗೊಳಿಸುವ ಇರಾದೆಯೂ ತಂಡದ ಮೇಲೆ ಇರಲಿದೆ. ಕೆಕೆಆರ್ ವಿರುದ್ಧ ಇಷ್ಟರವರೆಗಿನ 30 ಮುಖಾಮುಖಿ ಯಲ್ಲಿ ಮುಂಬೈ 22 ಪಂದ್ಯಗಳಲ್ಲಿ ಗೆದ್ದಿರುವುದು ತಂಡದ ಉತ್ಸಾಹವನ್ನು ಹೆಚ್ಚಿಸಿದೆ. 8ರಲ್ಲಿ ಮಾತ್ರ ಸೋತಿದೆ.
ರೋಹಿತ್ 5 ಸಾವಿರ ರನ್ ?ನಾಯಕ ರೋಹಿತ್ ಮತ್ತು ಇಶಾನ್ ಕಿಶನ್ ಉತ್ತಮ ಫಾರ್ಮ್ ನಲ್ಲಿರುವುದು ಮುಂಬೈಯ ಪ್ಲಸ್ ಪಾಯಿಂಟ್ ಆಗಿದೆ. ಗುಜರಾತ್ ವಿರುದ್ಧ ಭರ್ಜರಿ ಆಟದ ಪ್ರದರ್ಶನ ನೀಡಿದ್ದ ಅವರಿಬ್ಬರು ಕೆಕೆಆರ್ ವಿರುದ್ಧವೂ ಅದೇ ಆಟ ಮುಂದುವರಿಸುವ ನಿರೀಕ್ಷೆಯಿದೆ. ರೋಹಿತ್ ಐಪಿಎಲ್‌ನಲ್ಲಿ ಮುಂಬೈ ಪರ 5 ಸಾವಿರ ರನ್ ಪೂರ್ತಿಗೊಳಿಸಲು ಇನ್ನು 88 ರನ್ನುಗಳ ಆವಶ್ಯಕತೆಯಿದೆ. ಇದನ್ನು ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪೂರ್ತಿಗೊಳಿಸುವ ಸಾಧ್ಯತೆಯಿದೆ. ರೋಹಿತ್, ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಪವರ್‌ಪ್ಲೇಯಲ್ಲಿ ಅಮೋಘ ಆಟ ಆಡುತ್ತಿದ್ದರೆ ಕೆಕೆಆರ್ ತಂಡವು ಆರಂಭದ ಆರು ಓವರ್‌ಗಳಲ್ಲಿ ನಿರಂತರವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ. ಲಕ್ನೋ ವಿರುದ್ಧ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣವೆಂದು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ. ಕೆಕೆಆರ್‌ನ ನಿರ್ವಹಣೆ ಉತ್ತಮವಾಗಬೇಕಾದರೆ ಪವರ್‌ಪ್ಲೇಯಲ್ಲಿ ಆಟಗಾರರು ಆಕ್ರಮಣಕಾರಿಯಾಗಿ ಆಡುವ ಅಗತ್ಯವಿದೆ.