Advertisement
ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಎರಡು ದಿನಗಳಲ್ಲಿ ಉಪವಾಸ ಆಚರಿಸಲಿದ್ದು, ಬುಧವಾರ ಬೆಳಗ್ಗೆಯಿಂದಲೇ ಮಹಾಪೂಜೆ, ವಿವಿಧ ಧಾರ್ಮಿಕ ವಿಧಿವಿಧಾನ ಗಳು ಜರಗಲಿದ್ದು, ಮಧ್ಯರಾತ್ರಿ 12.34ಕ್ಕೆ ಶ್ರೀಗಳು ಶ್ರೀಕೃಷ್ಣ ದೇವರಿಗೆ ಅಘÂì ಪ್ರದಾನ ಮಾಡಲಿದ್ದಾರೆ. ಪೇಜಾವರ ಶ್ರೀಯವರ ಪಂಚಮ ಪರ್ಯಾಯ ಅವಧಿಯ ಎರಡನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಇದಾಗಿದೆ.
ಶ್ರೀಕೃಷ್ಣ ಮಠದ ಹೆಣ್ಣಾನೆ ಸುಭದ್ರೆ ಚಿಕಿತ್ಸೆಗಾಗಿ ಶಿವಮೊಗ್ಗದ ಸಕ್ರೆಬೈಲಿನಲ್ಲಿದೆ. ಕಳೆದ ವರ್ಷ ಕೃಷ್ಣಾಷ್ಟಮಿಗೆ ಮಠದ ಆನೆ ಸುಭದ್ರೆಯನ್ನೇ ಕಳುಹಿಸಿ ಕೊಡುವುದಾಗಿ ಅಂದು ಸಚಿವ ರಮಾ ನಾಥ ರೈ ಹೇಳಿದಂತೆ ಮಠದ ಸುಭದ್ರೆಯನ್ನು ವಿಟ್ಲಪಿಂಡಿಗಾಗಿ ಉಡುಪಿಗೆ ಕರೆತರಲಾಗಿತ್ತು. ಅದರ ಸಹಾಯಕ್ಕಾಗಿ ಇನ್ನೊಂದು ಆನೆಯೂ ಉಡುಪಿಗೆ ಬಂದಿತ್ತು. ವಿಟ್ಲಪಿಂಡಿಯ ಬಳಿಕ ಸಕ್ರೆಬೈಲಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
Related Articles
Advertisement
ಮುದ್ದುಕೃಷ್ಣ ವೇಷ ಸ್ಪರ್ಧೆವಿವಿಧ ವೇಷಗಳ ಪ್ರದರ್ಶನ, ಮುದ್ದುಕೃಷ್ಣ ವೇಷ ಸ್ಪರ್ಧೆಯು ತಾತ್ಕಾಲಿಕ ರಾಜಾಂಗಣ ಸಹಿತ ಅನ್ನಬ್ರಹ್ಮ ಸಭಾಂಗಣ, ಭೋಜನ ಶಾಲೆಯ ಮಹಡಿಯಲ್ಲಿ ನಡೆಯಲಿದೆ. ಹೂವು: ಭರ್ಜರಿ ಮಾರಾಟ
ದೇವರಿಗೆ ಹೂವನ್ನು ಅರ್ಪಿಸಲು ಭಕ್ತರು ಉಡುಪಿ ನಗರ, ರಥಬೀದಿಗಳ ಸುತ್ತಮುತ್ತ ಹೂವು ಗಳ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಮಂಗಳವಾರ ಪ್ರತೀ ಮಾರಿಗೆ ರುದ್ರಾಕ್ಷಿ ಹೂ 80 ರೂ., ಊಟಿ ಮಲ್ಲಿಗೆ 50 ರೂ., ಕಾಕಡ ಮಲ್ಲಿಗೆ 50 ರೂ., ಪರಿಮಳ ಮಲ್ಲಿಗೆ 50 ರೂ. ತುಳಸಿ ಮಾಲೆ 80 ರೂ., ಮಾರಿಗೋಲ್ಡ್ 100 ಗ್ರಾಂ.ಗೆ 50 ರೂ., ಚೆಂಡು ಹೂ 50 ರೂ. ಇದ್ದು, ಬುಧವಾರ ಈ ದರ ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ಸ್ಥಳೀಯರ ಜತೆಗೆ ಹೊರರಾಜ್ಯದ ಮುಖ್ಯವಾಗಿ ಹಾಸನ, ಮೈಸೂರಿನ ವ್ಯಾಪಾರಸ್ಥರು ಹೆಚ್ಚಿನ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ರಥಬೀದಿ ಮಾತ್ರವಲ್ಲದೆ ಉಡುಪಿಯ ಮಾರುತಿ ವೀಥಿಕಾ, ಕೆಎಂ ಮಾರ್ಗ ಮತ್ತು ಮಣಿಪಾಲ ಬಸ್ ನಿಲ್ದಾಣದ ಬಳಿಯೂ ಹೂವಿನ ವ್ಯಾಪಾರ ಕಂಡುಬಂತು. ಬೆಳಗ್ಗೆ ಒಂದು ದರವಿದ್ದರೆ ತದನಂತರದಲ್ಲಿ ಹೂವಿನ ಪ್ರಮಾಣ ಕಡಿಮೆಯಾಗಿ ಬೇಡಿಕೆ ಹೆಚ್ಚಾದರೆ ಅದಕ್ಕೆ ತಕ್ಕಂತೆ ಹೂವಿನ ದರವೂ ಬದಲಾವಣೆಯಾಗುತ್ತದೆ. ಡ್ರೋಣ್ ಕೆಮರಾ: ಸೂಚನೆ
ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿಗೆ ಶ್ರೀಕೃಷ್ಣ ಮಠದ ಸುತ್ತಮುತ್ತ ಭಕ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಾರಣ ಜಿಲ್ಲೆಯ ಪೊಲೀಸರು ಮತ್ತು ಕೆಎಸ್‌ಆರ್‌ಪಿ ಪಡೆಯನ್ನು ಬಂದೋ ಬಸ್ತ್ಗೆನಿಯೋಜಿಲಾಗಿದೆ. ಪೊಲೀಸ್ ಚೌಕಿಗಳನ್ನು ಹಾಕಲಾಗಿದೆ. ಅಲ್ಲಲ್ಲಿ ಸಿಸಿ ಕೆಮರಾ ಅಳವಡಿಸಿ ಕಣ್ಗಾವಲು ಇರಿಸಲಾಗಿದೆ ಎಂದು ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್ ಅವರು ಹೇಳಿ ದ್ದಾರೆ. ಡ್ರೋಣ್ ಕೆಮರಾ ಬಳಸುವವರು ಮಠದ ದಿವಾನರ ಮೂಲಕ ಪೊಲೀಸ್ ಇಲಾಖೆಯ ಅನುಮತಿ ಪಡೆಯತಕ್ಕದ್ದು. ಭದ್ರತಾ ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಡ್ರೋಣ್‌ಗೆ ಅವಕಾಶ ನೀಡಲಾಗುವುದು. ಅನುಮತಿ ಪಡೆಯದೆ ಡ್ರೋಣ್ ಹಾರಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಭದ್ರತೆಯ ದೃಷ್ಟಿಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ತಪಾಸಣೆ ಕಾರ್ಯ ನಡೆಸಲಾಗುತ್ತದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಶ್ರೀಕೃಷ್ಣ ಲೀಲೋತ್ಸವ
ಸೆ. 14ರಂದು ಸಂಜೆ 3 ಗಂಟೆಯಿಂದ ಶ್ರೀಕೃಷ್ಣ ಮೃಣ್ಮಯ ಪ್ರತಿಮೆಯ ರಥೋತ್ಸವ ಸಹಿತ ಲೀಲೋತ್ಸವ (ವಿಟ್ಲಪಿಂಡಿ) ಉತ್ಸವ ಜರಗಲಿದ್ದು, ಅಂದು ಬೆಳಗ್ಗೆ ಮಹಾಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಶ್ರೀಕೃಷ್ಣ ಲೀಲೋತ್ಸವದ ಭವ್ಯ ಮೆರವಣಿಗೆ 3 ಗಂಟೆಗೆ ಹೊರಡಲಿದೆ. ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಉತ್ಸವ ಮೆರವಣಿಗೆಯಲ್ಲಿ ತರುತ್ತಾರೆ. ಮೆರವಣಿಗೆಯ ಮುಂದೆ ಗೋವಳರಿಂದ ಮೊಸರು ಕುಡಿಕೆ ಒಡೆ ಯುವ ದೃಶ್ಯವನ್ನು ವೀಕ್ಷಿಸಲು ಸ್ಥಳೀಯ ಭಕ್ತರಲ್ಲದೆ ನಾಡಿನ ವಿವಿಧೆಡೆಗಳಿಂದ ಬರುವ ಸಾವಿರಾರು ಭಕ್ತರು ಸೇರಲಿದ್ದಾರೆ. ಬಳಿಕ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ನಾನಾ ವಿಧದ ವೇಷಧಾರಿಗಳಿಂದ ಕುಣಿತ ನಗರಾದ್ಯಂತ ನಡೆಯುತ್ತದೆ. ರಥಬೀದಿಯ ಸುತ್ತ 12 ಕಡೆಗಳಲ್ಲಿ ಮೊಸರು ಕುಡಿಕೆಯನ್ನು ಕಟ್ಟುವ ಗುರ್ಜಿ ಹಾಗೂ 2 ಬೃಹತ್ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ತಾತ್ಕಾಲಿಕ ರಾಜಾಂಗಣ
ರಾಜಾಂಗಣ ದುರಸ್ತಿಯಲ್ಲಿರುವುದರಿಂದ ಅಷ್ಟಮಿಯ ಸಾಂಸ್ಕೃತಿಕ ಕಾರ್ಯಕ್ರಮ ಗಳು ಹಾಗೂ ವಿಟ್ಲಪಿಂಡಿ ಉತ್ಸವದಂದು ಸಂಜೆ 3 ಗಂಟೆಯಿಂದ ನಡೆಯಲಿರುವ ಹುಲಿವೇಷ ಸ್ಪರ್ಧೆ, ಜನಪದ ಕಲೆಗಳ ಪ್ರದರ್ಶನ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸಮೀಪದಲ್ಲಿ ಸಿದ್ಧಗೊಂಡ ತಾತ್ಕಾಲಿಕ ರಾಜಾಂಗಣದಲ್ಲಿ ಜರಗಲಿದೆ.